ಕರಾವಳಿ

ರಾಜಸ್ಥಾನ ಸಿಎಂ ವಸುಂಧರಾ ರಾಜೆ ಕೃಷ್ಣನೂರಿಗೆ ಭೇಟಿ: ಪೇಜಾವರ ಸಂತಸ

Pinterest LinkedIn Tumblr

ಉಡುಪಿ: ನಾಡಿನ ದೊರೆ ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದರೂ ಕೃಷ್ಣ ಮಠಕ್ಕೆ ಬಾರದೇ ಮತ್ತೆ ಮಠದ ವಿರುದ್ದ ಸಿಟ್ಟು ತೋರಿಸಿದರೆ .ಇತ್ತ ದೂರದ ರಾಜಸ್ಥಾನದ ಸಿಎಂ ಮಾತ್ರ ಯಾವುದೇ ಸದ್ದಿಲ್ಲದೇ ಬಂದು ಆಶ್ಚರ್ಯ ಮೂಡಿಸಿದರು. ರಾಜಸ್ಥಾನದ ರಾಜಮನೆತನದ ರಾಣಿಯ ಭೇಟಿ ಪೇಜಾವರ ಶ್ರೀಗಳಿಗೂ ಸಂತಸಕ್ಕೆ ಕಾರಣವಾಗಿತ್ತು.

ರಾಜಸ್ಥಾನದ ರಾಜಮನೆತನದ ತಾಯಿ ವಸುಂಧರಾ ರಾಜೆ ರಾಜಸ್ಥಾನದ ಸಿಎಂ ಕೂಡಾ ಹೌದು. ಇವತ್ತು ಕೊಲ್ಲೂರು ಮೂಕಾಂಬಿಕ ತಾಯಿಯ ಭೇಟಿ ಮಾಡಿ ದರ್ಶನ ಪಡೆದು ಚಂಡಿಕಾ ಯಾಗದಲ್ಲಿ ಭಾಗಿಯಾದರು. ಆದ್ರೆ ಕೃಷ್ಣ ಮಠಕ್ಕೆ ಬರುವ ಯಾವುದೇ ಕಾರ್ಯಕ್ರಮ ಇರಲಿಲ್ಲ. ಪೊಲೀಸರಿಗೂ , ಮಠದವರಿಗೂ ಕೃಷ್ಣನ ಸನ್ನಿದಿಗೆ ಬರುವ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಕೊನೆಯ ಘಳಿಗೆಯಲ್ಲಿ ಕೃಷ್ಣನ ಸನ್ನಿದಾನಕ್ಕೆ ಬರುವ ಮೂಲಕ ಎಲ್ಲರನ್ನು ಅಚ್ಚರಿ ಮೂಡಿಸಿದರು. ಇತ್ತೀಚಿಗೆ ಹಲವು ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಠದಿಂದ ಅಧಿಕೃತ ಆಹ್ವಾನ ನೀಡಿದರೂ ಕೂಡಾ ಕೃಷ್ಣ ಮಠಕ್ಕೆ ಬಾರದೇ ತಮ್ಮ ಸಿಟ್ಟನ್ನು ತೋರ್ಪಡಿಸಿದ್ದರು. ಮಾತ್ರ ಅಲ್ಲದೇ ನಿನ್ನೆಯಷ್ಟೇ ಉಡುಪಿಗೆ ಬಂದಿದ್ದರೂ ಕೃಷ್ಣ ಮಠಕ್ಕೆ ಬಂದಿರಲಿಲ್ಲ . ಆದ್ರೆ ರಾಜಸ್ಥಾನದ ಸಿಎಂ ಮಾತ್ರ ಯಾರಿಗೂ ಹೇಳದೇ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೇಜಾವರ ಶ್ರೀಗಳ ಆಶೀರ್ವಚನ ಪಡೆದರು.ರಾಜಸ್ಥಾನ ಸಿಎಂ ಅವರ ಉಡುಪಿ ಮಠದ ಭೇಟಿ ಪೇಜಾವರ ಶ್ರೀಗಳ ಸಂತಸಕ್ಕೂ ಕಾರಣವಾಗಿತ್ತು.

ಅಂದ ಹಾಗೆ ರಾಜಸ್ಥಾನ ಸಿಎಂ ವಸುಂದರಾ ರಾಜೆ ಅವರು ಮೊದಲ ಬಾರಿಗೆ ಕೃಷ್ಣ ಮಠಕ್ಕೆ ಬರುತ್ತಿದ್ದಾರೆ. ಮಠದವತಿಯಿಂದ ಅದ್ದೂರಿ ಸ್ವಾಗತ ಕೂಡಾ ಸಿಕ್ಕಿತು. ಇದೊಂದು ಮರೆಯದ ಭೇಟಿಯಾಗಿದೆ ಅಂತ ಇದೇ ಸಂದರ್ಬದಲ್ಲಿ ವಸುಂದರಾ ರಾಜೆ ತಿಳಿಸಿದರು.ನಮ್ಮ ಇಡೀ ಕುಟುಂಬ ಪೇಜಾವರ ಶ್ರೀಗಳ ನಿಕಟವರ್ತಿಯಾಗಿದ್ದಾರೆ. ಪೇಜಾವರ ಶ್ರೀಗಳ ಐದನೇ ಪರ್ಯಾಯದಲ್ಲಿ ಭಾಗಿಯಾಗಿರುವುದು ನನ್ನ ಅದೃಷ್ಟ. ದೇವರು ಬಯಸದೇ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ .ಕೊಲ್ಲೂರು ದೇವಸ್ಥಾನಕ್ಕೆ ಬಹಳ ಬಾರಿ ಹೋಗಲು ಪ್ರಯತ್ನ ಪಟ್ಟಿದ್ದೆ. ಇಂದು ಆ ದಿನ ಕೂಡಿ ಬಂತು ಅಂತ ವಸುಂಧರಾ ರಾಜೆ ತಿಳಿಸಿದರು.ಇದೇ ಸಂದರ್ಬದಲ್ಲಿ ಪೇಜಾವರ ಶ್ರೀಗಳು ವಸುಂಧರಾ ರಾಜೆಗೆ ಸೀರೆ ಗಿಫ್ಟ್ ಕೊಟ್ಟರು.

ಒಟ್ಟಿನಲ್ಲಿ ನಾಡಿನ ದೊರೆ ಬಾರದಿದ್ದರೂ ರಾಜಸ್ಥಾನದ ದೊರೆ ಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಮಠದ ನಡುವೆ ಮುನಿಸು ಏನು ಎಂಬುದರ ಬಗ್ಗೆ ಜನ ಮಾತನಾಡುವಂತಾಗಿದೆ. ಆದ್ರೆ ರಾಜಸ್ಥಾನದ ಸಿಎಂ ಆಗಮಿಸಿರುವುದು ಮಠದಲ್ಲಿ ಸಂತಸಕ್ಕೆ ಕಾರಣವಾಗಿದೆ.

Comments are closed.