ಕರಾವಳಿ

ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ : ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಪಥ ಸಂಚಲನ

Pinterest LinkedIn Tumblr

ಮಂಗಳೂರು, ನವೆಂಬರ್.9: ಸರಕಾರದ ಆದೇಶದಂತೆ ನಾಳೆ ದ.ಕ. ಜಿಲ್ಲಾಡಳಿತದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಹಾಗೂ ಮಂಗಳೂರಿನಲ್ಲಿ ಬಿಜೆಪಿಯ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ರ್‍ಯಾಲಿಯ ಸಮಾವೇಶದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಇದರ ಪೂರ್ವಬಾವಿಯಾಗಿ ಇಂದು ಬೆಳಿಗ್ಗೆ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.

ಈ ಎರಡು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನ ಸುವ್ಯವಸ್ಥೆ ಕಾಪಾಡಲು ಕೇಂದ್ರ ಅರೆ ಮಿಲಿಟರಿ ಪಡೆ ಹಾಗೂ ನಗರ ಪೊಲೀಸರು ನಗರದ ಹಲವೆಡೆ ರೂಟ್ ಮಾರ್ಚ್ ನಡೆಸಿದರು. ನಗರದ ನೆಹರೂ ಮೈದಾನವನ್ನು ಕೇಂದ್ರೀಕರಿಸಿ ಹಲವೆಡೆ ಪೊಲೀಸರು ಪಥ ಸಂಚಲನ ನಡೆಸಿದರು.

ಅನುಮತಿ ಇಲ್ಲದೆ ಯಾವುದೇ ರೀತಿಯ ಪೋಸ್ಟರ್, ಬಂಟಿಂಗ್ಗೆ ಅವಕಾಶ ಇರುವುದಿಲ್ಲ. ಅನುಮತಿ ಇಲ್ಲದೆ ಇಂತಹ ಕೃತ್ಯ ಆಗಿದ್ದಲ್ಲಿ ಕ್ರಮ ವಹಿಸಲಾಗುವುದು. ಪರಿವರ್ತನಾ ರ್‍ಯಾಲಿಗೂ ಸಂಬಂಧಿಸಿ ಸಾಕಷ್ಟು ಮುಂಜಾಗೃತಾ ಕ್ರಮ ವಹಿಸಲಾಗಿದೆ ದ.ಕ.ಜಿಲ್ಲಾ ಎಸ್ಪಿಯವರು ತಿಳಿಸಿದ್ದಾರೆ.

Comments are closed.