ಕರಾವಳಿ

ಬೀಜಾಡಿಯಲ್ಲಿ ಅಕ್ರಮ ನಕಲಿ ಮದ್ಯ ಸಾಗಾಟ ಪತ್ತೆ: ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಕುಂದಾಪುರ ತಾಲೂಕು ವ್ಯಾಪ್ತಿಯ ಬೀಜಾಡಿ ಗ್ರಾಮದಲ್ಲಿ ವಾಹನ ಸಂಖ್ಯೆ ಕೆ‌ಎ-19-ಎನ್-1908 ಮಾರುತಿ 800 ಕಾರಿನಲ್ಲಿ 245 ಲೀ. ನಕಲಿ ಮದ್ಯ ಅಕ್ರಮವಾಗಿ ದಾಸ್ತಾನು ಹೊಂದಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದು ಪತ್ತೆ ಹಚ್ಚಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಜಯಪ್ರಕಾಶ್ ವಿ.ಎಸ್ ಬಿನ್ ಸೀತಾರಾಮ ಗೌಡ(49), ರತ್ನಾಕರ ಖಾರ್ವಿ ಬಿನ್ ಮಾಚಾ ಖಾರ್ವಿ (46), ಎಂಬುವವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮದ್ಯ ಸಾಗಿಸುತ್ತಿದ್ದ ವಾಹನ ಸಹಿತ ಮದ್ಯವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಶೈಲಜಾಕೋಟೆ ಇವರ ನಿರ್ದೇಶನದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಬಿ.ಮೇರುನಂದನ್, ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್‌ರವರ ಮಾರ್ಗದರ್ಶನದಂತೆ ಉಡುಪಿ ಜಿಲ್ಲಾ ತಂಡ ಅಬಕಾರಿ ಉಪ ನಿರೀಕ್ಷಕ ನಿತ್ಯಾನಂದ ಹಾಗೂ ಸಿಬ್ಬಂದಿಗಳಾದ ಮುನಾಫ್ ಸಾಹೇಬ,ಅಬಕಾರಿ ರಕ್ಷಕ ಶಾಂತಪ್ಪ ಏಳಗಿ, ಗೃಹ ರಕ್ಷಕ ಗಣೇಶ್, ಹಿರಿಯ ವಾಹನ ಚಾಲಕ ವೆಂಕಟರಮಣ ಗೊಲ್ಲ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಉಡುಪಿ ಜಿಲ್ಲಾ ತಂಡ ಅಬಕಾರಿ ಉಪನಿರೀಕ್ಷಕ ನಿತ್ಯಾನಂದ ಮೊಕದ್ದಮೆಯನ್ನು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Comments are closed.