ಕರಾವಳಿ

ನ.9ರಿಂದ 12ರ : ಮಂಗಳೂರಿನಲ್ಲಿ ಜಪ ಮಾಲೆಗಳ ಮಹಾನ್ ಪ್ರದರ್ಶನ

Pinterest LinkedIn Tumblr

ಮಂಗಳೂರು: ಕೆಥೋಲಿಕ್‌ ಕ್ರೈಸ್ತ ಸಮುದಾಯದಲ್ಲಿ ಜಪ ಮಾಲೆಯ ಪ್ರಾರ್ಥನೆಗೆ ಅತ್ಯಂತ ಹೆಚ್ಚಿನ ಮಹತ್ವವಿದ್ದು, ಅಂತಹ ಜಪ ಮಾಲೆಗಳ ಜಾಗತಿಕ ಮಟ್ಟದ ಪ್ರದರ್ಶನ ಇದೇ ಮೊದಲ ಬಾರಿಗೆ ಮಂಗಳೂರು ನಗರದಲ್ಲಿ ನೆರವೇರಲಿದೆ.

ನ.9ರಿಂದ 12ರ ತನಕ ಜಪ ಮಾಲಾ ಮಾತೆಗೆ ಸಮರ್ಪಿಸಿದ ಮಂಗಳೂರು ಧರ್ಮಪ್ರಾಂತ್ಯದ ಮಹಾ ದೇವಾಲಯ ರೊಜಾರಿಯೋ ಕೆಥೆಡ್ರಲ್‌ನ ಸಭಾಂಗಣದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರವರು ಜಪಮಾಲೆಗಳ ಮಹಾನ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ಮಹಾದೇವಾಲಯದ ಅತೀ ವಂದನೀಯ ಸ್ವಾಮಿ ಜೆ.ಬಿ.ಕ್ರಾಸ್ತಾರವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶ- ವಿದೇಶಗಳಿಂದ 50,000ಕ್ಕೂ ಹೆಚ್ಚು ವಿವಿಧ ಜಪ ಮಾಲೆಗಳ ಪ್ರದರ್ಶನ ಇದರ ವೈಶಿಷ್ಟ್ಯ. ದಿವಂಗತ ಪೋಪ್‌ ಸಂತ ಜಾನ್‌ ಪಾವ್ಲ್ ದ್ವಿತೀಯ ಮತ್ತು ಸಂತ ಮದರ್‌ ತೆರೇಸಾ ಸಹಿತ ವಿವಿಧ ಸಂತರು ಆಶೀರ್ವಚನಗೈದ ಜಪಸರಗಳು, ಜಗತ್ತಿನ 80 ರಾಷ್ಟ್ರಗಳ ವಿವಿಧ ಮಾದರಿಯ ಜಪ ಮಾಲೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.

ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆ ತನಕ ಪ್ರದರ್ಶನ ನಡೆಯಲಿದ್ದು, ಕೇರಳದ ಸಾಬೂ ಅವರು ಇದನ್ನು ಸಂಘಟಿಸಿದ್ದಾರೆ. ಇದು ಅವರ 125ನೇ ಪ್ರದರ್ಶನ ಆಗಿರುತ್ತದೆ. ಕೆಥೆಡ್ರಲ್‌ನ 450ನೇ ವರ್ಷದ ಸ್ಮರಣಾರ್ಥ ಮಂಗಳೂರು ಧರ್ಮಪ್ರಾಂತದ ಪ್ರಥಮ ಚರ್ಚ್‌ ರೊಜಾರಿಯೋ ಕೆಥೆಡ್ರಲ್‌ಗೆ 450 ವರ್ಷಗಳಾಗುತ್ತಿರುವ ಸಂಭ್ರಮದ ಆಚರಣೆಯ ನೆನಪಿಗಾಗಿ ಹಾಗೂ 2018ನೇ ವರ್ಷ ವನ್ನು ಜಪ ಮಾಲೆಯ ಪ್ರಾರ್ಥನಾ ವರ್ಷವಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿರುವ ಹಿನ್ನೆಲೆ ಯಲ್ಲಿ ಈ ಜಪ ಮಾಲೆಗಳ ಪ್ರದರ್ಶನ ವನ್ನು ಏರ್ಪಡಿಸಲಾಗಿದೆ ಎಂದು ಜೆ.ಬಿ.ಕ್ರಾಸ್ತಾರವರು ತಿಳಿಸಿದ್ದಾರೆ

Comments are closed.