ಕರಾವಳಿ

ಅಕ್ರಮ ಜಾನುವಾರು ಸಾಗಾಟ, ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಆರೋಪಿ ಅರೆಸ್ಟ್

Pinterest LinkedIn Tumblr

ಕುಂದಾಪುರ: ಟೆಂಪೋ ಮಾದರಿಯ ವಾಹನದಲ್ಲಿ 25 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ವೇಳೆ ಅಡ್ಡಗಟ್ಟಲು ಬಂದ ಪೊಲೀಸ್ ಸಿಬ್ಬಂದಿ ಮೇಲೆ ವಾಹನ ಚಲಾಯಿಸಲು ಮುಂದಾಗಿದ್ದಲ್ಲದೇ 11 ಜಾನುವಾರುಗಳ ಸಾವಿಗೆ ಕಾರಣನಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಗುಲ್ವಾಡಿಯ ನಿವಾಸಿ ಮೊಯ್ದಿನ್ ಬ್ಯಾರಿ (47) ಅಲಿಯಾ ಮೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅ.17 ಮುಂಜಾನೆ ಗುಲ್ವಾಡಿ ಬ್ರಿಡ್ಜ್ ಸಮೀಪ ನಡೆದಿದ್ದ ಘಟನೆ ಇದಾಗಿದ್ದು ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿ ಪ್ರಶಾಂತ್ ನಾಗಣ್ಣ ಗಂಬೀರ ಗಾಯಗೊಂಡಿದ್ದರು. ವಾಹನದಲ್ಲಿ 25 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗಿತ್ತು.ಈ ವೇಳೆ 11 ಜಾನುವಾರು ಮೃತಪಟ್ಟಿತ್ತು.

ಆರೋಪಿ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದರು. ಉಡುಪಿ ಜಿಲ್ಲಾಎಸ್ಪಿ ಸಂಜೀವ ಪಾಟೀಲ್, ಡಿವೈಎಸ್ಪಿ ಪ್ರವೀಣ್ ನಾಯಕ್, ಕುಂದಾಪುರ ಸಿಪಿಐ ಮಂಜಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ನೇತ್ರತ್ವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿರಿ:  

ಅಕ್ರಮ ಗೋ ಸಾಗಾಟ: ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯ; ಎಸ್ಪಿ ಭೇಟಿ (Video)

ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Video)

Comments are closed.