ಕರಾವಳಿ

‘ಹಸ್ತಮೈಥುನ’ ಸಂಬಂಧಿ ನಕಲಿ ನೋಟಿಸ್; ದೂರು ದಾಖಲಿಸಿಲು ಹೊರಟ ಮಣಿಪಾಲ ಎಂಐಟಿ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿಯೇ ಹೆಸರುವಾಸಿಯಾದ ಮಣಿಪಾಲ ಇಂಜಿನಿಯರಿಂಗ್ ಕಾಲೇಜು ಎಂಐಟಿ ಇದರ ಲೆಟ್ಟರ್ ಹೆಡ್ (ಪತ್ರ)ದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎನ್ನಲಾದ ಹಸ್ತಮೈಥುನ ಸಂಬಂಧಿ ನೋಟೀಸ್ ನಕಲಿಯಾಗಿದ್ದು ಇದಕ್ಕೂ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ನಕಲಿ ನೋಟಿಸ್ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಎಂದು ಕಾಲೇಜಿನ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ.

udupi_mit_issue

ಎಂಐಟಿಯ ಮುಖ್ಯ ವಾರ್ಡನ್ ಕಲ್ಕೋಟಿ ಹೆಸರಿನಲ್ಲಿರುವ ಈ ನೊಟೀಸ್‌ನಲ್ಲಿ ವಿದ್ಯಾರ್ಥಿಗಳ ಹಸ್ತಮೈಥುನಕ್ಕೆ ಸಂಬಂಧಿಸಿದ ಕೆಲವು ಸೂಚನೆಗಳನ್ನು ನೀಡಲಾಗಿದೆ. `ಕಾಲೇಜು ಹಾಸ್ಟೆಲ್‌ಗಳಲ್ಲಿರುವ ಸ್ನಾನಗೃಹಗಳ ನೀರು ಹರಿಯುವ ಚರಂಡಿಗಳಲ್ಲಿ ಅಪಾರ ಪ್ರಮಾಣದ ವೀರ್ಯ ಪತ್ತೆಯಾಗಿದದ್ದು ಇದರ ನಿರ್ವಹಣೆಯಲ್ಲಿ ಸಾವಿರಾರು ರೂಪಾಯಿ ಖರ್ಚಾಗುತ್ತಿದ್ದು ಈ ವೆಚ್ಚವನ್ನು ಮುಂದಿನ ವರ್ಷದ ಹಾಸ್ಟೆಲ್ ಬಿಲ್‌ಗಳಲ್ಲಿ ಸೇರಿಸಲಾಗುತ್ತದೆ ಎಂದು ಬರೆದಿದ್ದು ಮಾತ್ರವಲ್ಲದೇ ‘ದಯವಿಟ್ಟು ನಿಮ್ಮ ಕೋಣೆಗಳಲ್ಲಿ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ.

ಇಂತಹ ಯಾವುದೇ ನೊಟೀಸ್ ನಮಗೆ ನೀಡಲಾಗಿಲ್ಲ ಎಂದು ಎಂಐಟಿ ವಿದ್ಯಾರ್ಥಿಗಳು ಸಹ ಸ್ಪಷ್ಟಪಡಿಸಿದ್ದಾರೆ. ಇಂತಹ ನೋಟಿಸ್ ಗಳು ಅಂತರ್ಜಾಲ ತಾಣಗಳಲ್ಲಿಯೂ ಇದೆ ಎನ್ನಲಾಗುತ್ತಿದ್ದು ಈ ನಕಲಿ ನೋಟಿಸ್ ಸೃಷ್ಟಿಸಿದವರು ಯಾರು ಮತ್ತು ಅವರ ಉದ್ದೇಶವೇನು ಎಂಬುದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

Comments are closed.