ಮಂಗಳೂರು: ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ಬಂಟರ ಕ್ರೀಡೋತ್ಸವದಲ್ಲಿ ಇಡ್ಯಾ, ಸುರತ್ಕಲ್, ಚೇಳಾರು ಘಟಕಗಳಿಗೆ ಪ್ರಶಸ್ತಿ ಲಭಿಸಿದ್ದು, ಇಡ್ಯಾ ಗ್ರಾಮವು ಅತ್ಯಧಿಕ ಅಂಕಗಳಿಸಿ ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿದೆ.
ಸುರತ್ಕಲ್ ಗೋವಿಂದದಾಸ ಕಾಲೇಜ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿಯ ಸಹಸಂಚಾಲಕ ಉಮೇಶ್ ರೈ ಪ್ರಶಸ್ತಿಗಳನ್ನು ವಿತರಿಸಿದರು.
ಮುಂದಿನ ದಿನಗಳಲ್ಲಿ ಮಾತೃಸಂಘದಿಂದ ಕ್ರೀಡಕೂಟಕ್ಕೆ ಹೆಚ್ಚಿನ ಅನುದಾನ ದೊರಕಿಸಿಕೊಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ರಮಾನಾಥ ಶೆಟ್ಟಿ ಮದ್ಯ, ಗಿರೀಶ್ ಶೆಟ್ಟಿ ಕಟೀಲು, ಕೃಷ್ಣ ಶೆಟ್ಟಿ ಚಿತ್ರಾಪುರ, ಆನಂದ ಶೆಟ್ಟಿ ಅಡ್ಯಾರ್ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸುಧಾಕರ ಪೂಂಜ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಉದಯ ಸುಜಿತ್, ಶೈಲೇಶ್, ಶೋಧನ್, ಚೈತ್ರ ಭಟ್ ಸಹಕರಿಸಿದ್ದರು.
ಫಲಿತಾಂಶ: ಪುರುಷರ ವಾಲಿಬಾಲ್ನಲ್ಲಿ ಇಡ್ಯಾ ಗ್ರಾಮ ಪ್ರಥಮ, ಕೆಂಜಾರು ದ್ವಿತೀಯ, ಮಹಿಳೆಯರ ತ್ರೋಬಾಲ್ನಲ್ಲಿ ಚೇಳ್ಯಾರ್ ಪ್ರಥಮ, ಸುರತ್ಕಲ್ ದ್ವಿತೀಯ, ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಸುರತ್ಕಲ್ ಪ್ರಥಮ, ಇಡ್ಯಾ ದ್ವಿತೀಯ, ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಇಡ್ಯಾ ಪ್ರಥಮ, ಚೇಳಾರ್ ದ್ವೀತಿಯ ಬಹುಮಾನ ಪಡೆಯಿತು.