ಮೂಡುಬಿದಿರೆ, ಡಿ.15: ತಾಂತ್ರಿಕ ಕಾರಣದಿಂದ ಕಾರೊಂದು ಅಗ್ನಿಗೆ ಆಹುತಿಯಾದ ಘಟನೆ ಮೂಡಬಿದ್ರೆಯ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಎಂಬವರಿಗೆ ಸೇರಿದ ಕಾರ್ ಇದಾಗಿದೆ ಎನ್ನಲಾಗಿದ್ದು, ನವೀನ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ನವೀನ್ ಅವರು ಸಂಪಿಗೆಯಲ್ಲಿರುವ ಮನೆಯಿಂದ ಕಾಲೇಜಿಗೆ ತೆರಳುವ ವೇಳೆ ಮಾರ್ಗ ಮಧ್ಯೆ ಕಾರಿನಲ್ಲಿ ತಾಂತ್ರಿಕ ದೋಷ ಕಂಡು ಬಂದು ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಸಂಪೂರ್ಣ ಆವರಿಸಿ ಕಾರು ಭಸ್ಮವಾಗಿದೆ. ಮೂಡುಬಿದಿರೆ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದ್ದಾರೆ.