ಕರಾವಳಿ

ನೀರೆ-ಬೈಲೂರು ಗ್ರಾ.ಪಂ. ಸದಸ್ಯನಿಂದ ಲವ್ ಸೆಕ್ಸ್ ದೋಖಾ; ಮಗು ಕರುಣಿಸಿ ಪರಾರಿಯಾದ ಕಟುಕ

Pinterest LinkedIn Tumblr

ಉಡುಪಿ: ಪ್ರೀತಿಯ ಮಾಯೆಗೆ ಸಿಲುಕಿದವರೇ ಅದೆಷ್ಟೋ ಕಷ್ಟ ಪಡ್ತಾರೆ. ಆದ್ರೆ ಪ್ರೀತಿಸಿದ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ ಮಗುವಿಗೆ ಜನ್ಮಕೊಟ್ಟ ನಂತರ ಪ್ರಿಯತಮ ನಾಪತ್ತೆಯಾದ್ರೆ ಏನಾಗಬೇಡ? ಇಂತಹ ಘಟನೆಯೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಬೈಲೂರಿನಲ್ಲಿ ನಡೆದಿದ್ದು ಅನೇಕ ಹೋರಾಟದ ಬಳಿಕ ಇದೀಗ ಯುವತಿ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾಳೆ.

udupi_love-sex_doka-1 udupi_love-sex_doka-2

(ಸಚಿವ ಮಧ್ವರಾಜ್ ಅವರಿಗೆ ನೊಂದ ಯುವತಿಯಿಂದ ಮನವಿ)

ಕಳೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತನಾಗಿ ಆಯ್ಕೆಯಾಗಿದ್ದ ಮಾತ್ರವಲ್ಲ ಬಿಜೆಪಿಯ ಸಕ್ರೀಯ ಕಾರ್ಯಕರ್ತ ಆದ್ರೆ ಆತ ಮಾಡಿರುವ ಘನ ಕಾರ್ಯಕ್ಕೆ ಯುವತಿ ಬೀದಿಗೆ ಬರುವ ಪರಿಸ್ಥಿತಿಯಾಗಿದೆ. ಈತನ ಹೆಸರು ಶರತ್ ಶೆಟ್ಟಿ.. ವೃತ್ತಿಯಲ್ಲಿ ರಿಕ್ಷಾ ಚಾಲಕ. ಈಗ ನೀರೆ ಬೈಲೂರು ಗ್ರಾ.ಪಂ ಸದಸ್ಯ ಬೇರೆ… ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗೋವಿಂದೂರಿನ ಯುವತಿಯನ್ನು ಕೆಲಸಕ್ಕೆ ತನ್ನ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ಹೀಗೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಶರತ್ ಶೆಟ್ಟಿ ತಾನು ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಇತ್ತೀಚಿಗೆ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮದುವೆಯಾಗುತ್ತೇನೆ ಎಂದು ಹೇಳಿದ್ದ ಶರತ್ ಶೆಟ್ಟಿ ಮಾತ್ರ ನಾಪತ್ತೆಯಾಗಿದ್ದಾನೆ. ಯುವತಿ ಇದೀಗ ಮಗುವನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿದ್ದು ಈ ಬಗ್ಗೆ ಹೋರಾಟ ಮುಂದುವರೆಸಿದ್ದಾಳೆ.

ಮದುವೆಯಾಗುವುದಾಗಿ ನಂಬಿಸಿ ಪರಾರಿಯಾಗಿರುವ ಬಗ್ಗೆ ಯುವತಿ ಕಾರ್ಕಳ ಮಹಿಳಾ ಠಾಣೆಯಲ್ಲಿ ದೂರನ್ನ ನೀಡಿದ್ದಾಳೆ. ಮೊದಲು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದ ಪೊಲೀಸರು ಬಳಿಕ ತಡವಾಗಿ ದೂರು ಸ್ವೀಕರಿಸಿದ್ದಾರೆ. ಆದ್ರೆ ಪ್ರಥಮ ವರ್ತಮಾನ ವರದಿಯಲ್ಲಿ ( ಎಪ್.ಐ.ಆರ್) ನೀರೆ ಬೈಲೂರು ಗ್ರಾಮಪಂಚಾಯತ್ ಸದಸ್ಯ ಶರತ್ ಶೆಟ್ಟಿ ಎಂದು ನಮೂದಿಸುವ ಬದಲು ಕೌಡೂರು ಗ್ರಾಮಪಂಚಯಾತ್ ಸದಸ್ಯ ಎಂದು ನಮೂದಿಸಿದ್ದು ಈ ಮೂಲಕ ಆರೋಪಿಯನ್ನು ರಕ್ಷಣೆ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಯುವತಿ ಹಾಗೂ ಮನೆಯವರು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಮೊರೆ ಹೋಗಿದ್ದಾರೆ. ತನ್ನನ್ನು ಶರತ್ ಶೆಟ್ಟಿ ಮದುವೆಯಾಗಬೇಕು ಹಾಗೂ ಪ್ರಥಮ ವರ್ತಮಾನ ವರದಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಯುವತಿ ಮನವಿಯನ್ನು ಸಚಿವರಿಗೆ ಸಲ್ಲಿಸಿದ್ದಾಳೆ. ಮಾತ್ರವಲ್ಲ ಸಚಿವರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಫೋನ್ ಮುಖಾಂತರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಲವ್ -ಸೆಕ್ಸ್ -ಧೋಕಾ ಪ್ರಕರಣದಲ್ಲಿ ಯುವತಿಗೆ ಧೋಕಾ ಮಾಡಿರುವ ಶರತ್ ಶೆಟ್ಟಿ ನಾಪತ್ತೆಯಾಗಿದ್ದಾನೆ. ಯುವತಿ ಮಾತ್ರ ನಾನು ಅವನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. ಶರತ್ ಶೆಟ್ಟಿ ಎಲ್ಲಿ ಎಂಬುದರ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ಮಾಡಿದ್ರೆ ಯುವತಿಗೆ ನ್ಯಾಯ ಸಿಗಬಹುದು.

Comments are closed.