ಕರಾವಳಿ

ಶಿರ್ವ ಚರ್ಚ್ ವಿಗ್ರಹ ಹಾನಿ ಪ್ರಕರಣದ ಆರೋಪಿ ಸೆರೆ; ಮೂರ್ತಿ ಒಡೆದುದರ ರಹಸ್ಯ ಹೀಗಿತ್ತು..!

Pinterest LinkedIn Tumblr

ಉಡುಪಿ: ಇಲ್ಲಿನ ಶಿರ್ವದ ಸಂತ ಮೇರಿ ಚರ್ಚ್‌ನ ಸಂತ ಫ್ರಾನ್ಸಿಸ್ ವಿಗ್ರಹಕ್ಕೆ ಹಾನಿ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆನಿಡಿಕ್ಟ್ ಡಿಸೋಜ ಬಂಧಿತ ಆರೋಪಿಯಾಗಿದ್ದು ಈತ ಕುಡಿದ ಮತ್ತಿನಲ್ಲಿ‌ ವಿಗ್ರಹ‌ಹಾನಿ ಮಾಡಿದ್ದ ಎನ್ನಲಾಗಿದೆ.

shirva_church_arrest

ಒಂದೆಡೆ ಆರ್ಥಿಕ ಮುಗ್ಗಟ್ಟು ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆನಿಡಿಕ್ ಡಿಸೋಜಾ ಭಾನುವಾರ ಕುಡಿದು ಚರ್ಚ್ ಬಳಿ ಬಂದಿದ್ದ. ಇಲ್ಲಿನ ಮೂರ್ತಿಗಳನ್ನು ಇಟ್ಟಿರುವುದು ಸರಿಯಿಲ್ಲ ಅದೇ ತನ್ನ ಸಮಸ್ಯೆಗೆ ಕಾರಣವೆಂದು ಅಂದುಕೊಂಡ ಈತ ವಿಗ್ರಹ ಅದಲು ಬದಲಾದರೆ ತನ್ನೆಲ್ಲಾ ಸಮಸ್ಯೆ ಬಗೆಹರಿಯುತ್ತೆ ಎಂಬ ಮೂಡನಂಬಿಕೆಯಿಂದ ಮೂರ್ತಿಬದಲಾವಣೆ ಕೆಲಸಕ್ಕೆ ಕೈಹಾಕಲು ಮುಂದಾದ. ಆದರೇ ವಿಪರೀತ ಮಧ್ಯಪಾನ ಮಾಡಿದ ಕಾರಣ ವಿಗ್ರಹ ಆಯತಪ್ಪಿ ಕೆಳಗೆ ಬಿದ್ದು ಪುಡಿಯಾಗಿತ್ತು.

ಸಿಸಿ ಕ್ಯಾಮೆರಾ ಫೂಟೇಜ್ ಹಾಗೂ ಅಕ್ಕಪಕ್ಕದವರ ವಿಚಾರಣೆಯ ಮೂಲಕ ಈತನೇ ಆರೋಪಿಯೆಂದು ಮೇಲ್ನೋಟಕ್ಕೆ ಸಾಭೀತಾಗಿದ್ದಲ್ಲೇ ಆತನು ತಪ್ಪೊಪ್ಪಿಕೊಂಡಿದ್ದಾನೆ.

Comments are closed.