ಕರಾವಳಿ

ದೈವಾರಾಧನೆಯಲ್ಲಿ ಮತೀಯ ಸಾಮರಸ್ಯ

Pinterest LinkedIn Tumblr

img-20161211-wa0090

ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ ೦9-12-2016 ರಿಂದ 13-12-2016ರ ತನಕ ನಡೆಯುತ್ತಿರುವ ಐದುದಿನಗಳ ವಿಶ್ವ ತುಳುವೆರೆ ಅಯನೊದ ಎರಡನೆಯ ದಿನದಂದು ತುಳುವಕ್ಕೆ ಬಲ್ಲಾಲ್ತಿ ಮುಖ್ಯ ಚಾವಡಿಯಲ್ಲಿ ‘ದೈವಾರಾಧನೆ ನಿನ್ನೆ ಇಂದು ನಾಳೆ’ ಎಂಬ ಬಗ್ಗೆ ವಿಚಾರ ಗೋಷ್ಠಿ ನಡೆದಿದ್ದು ಅದರಲ್ಲಿ ಡಾ.ಲಕ್ಷ್ಮೀ ಜಿ‌ ಪ್ರಸಾದ, ಡಾ.ರವಿಶಂಕರ ಶಿರ್ಲಾಲು ,ಶ್ರೀಮತಿ ಚಂದ್ರ ಪ್ರಭಾ ಮೊದಲಾದವರು ಪ್ರಬಂಧ ಮಂಡಿಸಿದರು . ಬಾಳೆಕೊಡಿ ಶಿಲಾಂಜನ ಶಶಿಕಾಂತ ಸ್ವಾಮೀಜಿ, ಕೆ ಎನ್ ಅಡಿಗ ಪುರುಷೋತ್ತಮ ಚೇಂಡ್ಲಾ,ದಾಮೋದರ್ ,ಮಾದವ ಗೌಡ ಮೊದಲಾದವರು ಉಪಸ್ಥಿತರಿದ್ದರು .

img-20161211-wa0087

ವಿಚಾರಗೋಷ್ಠಿಯಲ್ಲಿ ದೈವಾರಾಧನೆಯಲ್ಲಿ ಜಾತಿ ಮತ್ತು ಮತೀಯ ಸಾಮರಸ್ಯ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ ,ಜಾನಪದ ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ ಅವರು “ತುಳುವರ ಭೂತಾರಾಧನೆ ಬಹಳ ಅನನ್ಯವಾದುದು.ಇಲ್ಲಿ ಘಟ್ಟದ ಮೇಲಿನಿಂದ ಬಂದ ಅನೇಕರು ದೈಗಳಾಗಿದ್ದಾರೆ,ಅಂತೆಯೇ ಅನೇಕ ಮುಸ್ಲಿಮರು, ವಿದೇಶೀ ಜನರು ಕೂಡ ಕಾರಣಾಂತರಗಳಿಂದ ದೈವತ್ವ ಪಡೆದಿದ್ದಾರೆ.ಮಂಗಳೂರಿನಲ್ಲಿ ಅರಬ್ಬಿ ಭೂತಕ್ಕೆ ಆರಾಧನೆ ಇದೆ ಅಂತೆಯೇ ಬಸ್ರೂರಿನಲ್ಲಿ ಐದು ಚೀನೀ ಭೂತ ಗಳಿಗೆ ನೆಲೆ ಇದೆ.ಆಲಿ ಭೂತ, ಬಬ್ಬರ್ಯ,ಮಾಪುಲೆ ಮಾಪುಲ್ತಿ,ಮಾಪುಲ್ತಿ ಧೂಮಾವತಿ ,ಉಮ್ಮಲ್ತಿ ಐಸಾಬಿ ಮೊದಲಾದವರು ಮುಸ್ಲಿಂ ‌ಮೂಲದ ದೈವಗಳು.ಎಲ್ಲಾ ದೈವಗಳಿಗೂ ಸಮಾನ ಗೌರವ,ಸಮಾನ ಭಕ್ತಿಯ ‌ಅರಾಧನೆ ಇದೆ.ತುಳುನಾಡಿನ ಎಲ್ಲ ಜಾತಿ ಧರ್ಮಗಳ ಜನರು ದೈವಗಳ ಆರಾಧನೆಯಲ್ಲಿ ಭಾಗಿಯಾಗುತ್ತಾರೆ. ಹೀಗೆ,ಭೂತಾರಾಧನೆ ಎಲ್ಲ ಜಾತಿ ಮತಗಳ ನಡುವೆ ಸಾಮರಸ್ಯ ಬೆಸೆದಿದೆ “ಎಂದು ಹೇಳಿದರು.

ಅರಬ್ ದೇಶದಿಂದ ಬಂದ ಖರ್ಜೂರ ವ್ಯಾಪಾರಿ ಮಂಗಳೂರಿನ ಚಿಲಿಂಬಿಯಲ್ಲಿ ಅರಬ್ಬಿ ಭೂತವಾಗಿ ಆರಾಧನೆ ಪಡೆದಿದ್ದಾನೆ.ಅಂತೆಯೇ ಓರ್ವ ಕ್ರಿಶ್ಚಿಯನ್ ಕಿರಸ್ತಾನಿ ತೆಯ್ಯಂ ಆಗಿದ್ದಾನೆ.ಕನ್ನಡ ಪರಿಸರದ ಬ್ರಿಟಿಶ್ ಸುಭೇದಾರನೊಬ್ಬ ದೈವತ್ವ ಪಡೆದು ಕನ್ನಡ ಬೀರ ಎಂಬ ದೈವವಾಗಿದ್ದನೆ ಅಂತೆಯೇ ಇಬ್ಬರು ಪೋಲಿಸ್ ಭೂತ ಗಳಿಗೂ ತುಳುನಾಡಿನಲ್ಲಿ ಆರಾಧನೆ ಇದೆ .ಮತೀಯ ಸಾಮರಸ್ಯ‌ ತುಳು ಸಂಸ್ಕೃತಿಯ ವೈಶಿಷ್ಟ್ಯ ಎಂದು ಡಾ.ಲಕ್ಷ್ಮೀ ಜಿ‌ ಪ್ರಸಾದ ಹೇಳಿದರು.

ಡಾ.ರಾಜೇಶ ಆಳ್ವ ಬದಿಯಡ್ಕ ಅವರ ನೇತೃತ್ವದಲ್ಲಿ “ತುಳುನಾಡಿನಲ್ಲಿ ಜಾತಿ‌ಮತ ಸೌಹಾರ್ದತೆ” ಎಂಬ ನೆಲೆಗಟ್ಟಿನಲ್ಲಿ 9-12-2016 ರಿಂದ 13-12-2016 ರ ವರೆಗೆ ವಿಶ್ವ ತುಳುವೆರೆ ಅಯನೊ ಅಯೋಜಿಸಿದ್ದು ತುಳು ನಾಟಕ ಸಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದಾರೆ.

Comments are closed.