ಮಂಗಳೂರು, ಡಿಸೆಂಬರ್.12: ಪ್ರವಾದಿ ಮುಹಮ್ಮದ್ (ಸ.) ಅವರ 1491ನೆ ಜನ್ಮ ದಿನಾಚರಣೆಯ ಅಂಗವಾಗಿ ನಾಡಿನೆಲ್ಲೆಡೆ ಮುಸ್ಲಿಮ್ ಭಾಂಧವರ ಸಂಭ್ರಮಾಚರಣೆ ಇಂದು ಬೆಳಗ್ಗೆಯಿಂದಲೇ ಆರಂಭಗೊಂಡಿದೆ.
ಮಂಗಳೂರು ನಗರದಲ್ಲಿ ಬೆಳಗ್ಗೆ ಮೀಲಾದ್ ರ್ಯಾಲಿ ಆಯೋಜಿಸಲಾಗಿತ್ತು. ಬಂದರ್ನಲ್ಲಿ ಇಂದು ಬೆಳಗ್ಗೆ ನಡೆದ ಮೀಲಾದ್ ರ್ಯಾಲಿಯಲ್ಲಿ ಬಂದರ್ ಅನ್ಸಾರ್ ರಸ್ತೆಯ ಅಲ್ ಮದ್ರಸುತ್ತುಲ್ ಅಝ್‌ಅರಿಯಾದ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಆಕರ್ಷಕ ದಫ್ ಪ್ರದರ್ಶನ ರ್ಯಾಲಿಗೆ ಮೆರುಗು ನೀಡಿದವು. ಬೃಹತ್ ಪತಾಕೆಗಳೊಂದಿಗೆ ಪುಟಾಣಿಗಳ ರ್ಯಾಲಿ ಆಕರ್ಷಕವಾಗಿದ್ದವು.