ಕರಾವಳಿ

ಗೋಸಾಗಾಟದ ವೇಳೆ ಪ್ರವೀಣ್ ಕೊಲೆ ಪ್ರಕರಣ; ಹಲವರಿಗೆ ಜಾಮೀನು

Pinterest LinkedIn Tumblr

ಉಡುಪಿ: ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂದಪಟ್ಟಂತೆ ಇಪ್ಪತ್ತಕ್ಕೂ ಅಧಿಕ ಆರೋಪಿಗಳ ಪೈಕಿ ಹಿಂದೂಜಾಗರಣ ವೇದಿಕೆ ಮುಖಂಡ ಅರವಿಂದ ಕೋಟೇಶ್ವರ ಸಹಿತ ೧೫ ಮಂದಿಗೆ ನ್ಯಾಯಾಲಯ ಷರತುಬದ್ಧ ಜಾಮೀನು ನೀಡಿದೆ.

udp_-murder_-praveen-poojari-2

(ಕೊಲೆಯಾದ ಪ್ರವೀಣ್ ಪೂಜಾರಿ)

udp_-murder_-praveen-poojari-5 udupi_bjp-activist_praveen-poojary-2

ಆಗಸ್ಟ್ ತಿಂಗಳಿನಲ್ಲಿ ಹೆಬ್ರಿ ಸಮೀಪದ ಕಜ್ಕೆ ಎಂಬಲ್ಲಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಅದರಲ್ಲಿದ್ದ ಪ್ರವೀಣ್ ಪೂಜಾರಿ ಹಾಗೂ ಅಕ್ಷಯ್ ಎಂಬಾತನ ಮೇಲೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದರು. ಹಲ್ಲೆಯ ಪರಿಣಾಮ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಬಗ್ಗೆ ಮೊದಲು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಳಿಕ ಹೆಬ್ರಿ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿತ್ತು. ಪ್ರವೀಣ್ ಕೊಲೆ ಪ್ರಕರಣ ಖಂಡಿಸಿ ಬಹಳಷ್ಟು ಪ್ರತಿಭಟನೆಗಳು ನಡೆದಿದ್ದವು.

Comments are closed.