ಮಂಗಳೂರು : ದೇರಳಕಟ್ಟೆಯ ಯೆನೆಪೋಯ ದಂತ ಮಹಾ ವಿದ್ಯಾಲಯದಲ್ಲಿ ರ್‍ಯಾಗಿಂಗ್ (ವಿದ್ಯಾರ್ಥಿ ಚುಡಾವಣೆ) ಒಂದು ಮಹಾ ಪಿಡುಗು ಎಂಬ ವಿಷಯದ ಬಗ್ಗೆ ವಿಚಾರ ಸಂಕೀರ್ಣವು ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತದ ಡೆಂಟಲ್ ಕೌನ್ಸಿಲ್‌ನ ಸದಸ್ಯ ಡಾ. ಶಿವಶರಣ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರ್‍ಯಾಗಿಂಗ್‌ನಿಂದ ವಿದ್ಯಾರ್ಥಿಗಳ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಾಗಳು ಮತ್ತು ರ್‍ಯಾಗಿಂಗ್ ಮಾಡಿದವರ ಮೇಲೆ ಜರುಗಿಸಬಹುದಾದ ಕಾನೂನು ರೀತಿಯ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಪ್ರೊಪೆಸರ್ ಡಾ. ರಾಜೇಶ್ ಶೆಟ್ಟಿಯವರು ಯೆನೆಪೋಯ ದಂತ ಮಹಾ ವಿದ್ಯಾಲಯದಲ್ಲಿ ರ್‍ಯಾಗಿಂಗ್ ವಿರುದ್ದ ಕೈಗೊಂಡಿರುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಮಾಹಿತಿ ನೀಡಿದರು,
ಯೆನೆಪೋಯ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ.ಎಚ್. ಶ್ರೀಪತಿ ರಾವ್ ಕಾರ್ಯಾಕ್ರಮಕ್ಕೆ ಸ್ವಾಗತಿಸಿದರು, ಯೆನೆಪೋಯ ದಂತ ಮಹಾ ವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ಶಾಮ್. ಎಸ್. ಭಟ್ಟ್, ಮತ್ತು ಇಸ್ಲಾಮಿಕ್ ಅಕಾಡೆಮಿ ಆಪ್ ಎಜುಕೇಶನ್ ಕಾರ್ಯಾದರ್ಶಿ ಡಾ. ಅಖ್ತರ್ ಹುಸೈನ್ ಕಾರ್ಯಾಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊಪೆಸರ್ ಡಾ. ಸಂದೀಪ್ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು, ಡಾ. ಮಲ್ಲಿಕಾ ಶೆಟ್ಟಿ ಕಾರ್ಯಾಕ್ರಮ ನಿರೂಪಿಸಿ ವಂದಿಸಿದರು.