ಕರಾವಳಿ

ಹಳೆ ನೋಟು ರದ್ದು : ಕಾಂಗ್ರೆಸ್ ಆಕ್ರೋಷಕ್ಕೆ ಬಿಜೆಪಿ ಸಂಭ್ರಮಾಚರಣೆ

Pinterest LinkedIn Tumblr

hindu_jagrna_vedhike_1

ಮಂಗಳೂರು, ನ.28: ಪ್ರಧಾನ ಮಂತ್ರಿಯವರು ಕಪ್ಪುಹಣದ ನಿಗ್ರಹಕ್ಕಾಗಿ 500 ರೂ. ಮತ್ತು 1000 ರೂ.ಗಳ ಹಳೆ ನೋಟುಗಳನ್ನು ರದ್ಧು ಪಡಿಸಿರುವುದರಿಂದ ಭೃಷ್ಟಚಾರ ನಿಯಂತ್ರಣಕ್ಕೆ ಬರುತ್ತಿದೆ ಎಂದು ಬಿಜೆಪಿ ಹಾಗೂ ಅದರ ಮಿತ್ರ ಸಂಘಟನೆಗಳು ಇಂದು ನಗರದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವು 500 ರೂ. ಮತ್ತು 1000 ರೂ.ಗಳ ಹಳೆ ನೋಟುಗಳನ್ನು ರದ್ಧು ಪಡಿಸಿರುವುದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷಗಳು ನಗರದ ವಿವಿಧ ಕಡೆ ಆಕ್ರೋಶ ದಿನವನ್ನಾಚರಿಸಿದರು. ಇದನ್ನು ವಿಫಲಗೊಳಿಸಲು ಬಿಜೆಪಿ ಹಾಗೂ ಅದರ ಮಿತ್ರ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಿಸಿದರು.

hindu_jagrna_vedhike_2 hindu_jagrna_vedhike_3 hindu_jagrna_vedhike_4 hindu_jagrna_vedhike_5 hindu_jagrna_vedhike_6 hindu_jagrna_vedhike_7

ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕಾರ್ಯಕರ್ತರು ನಗರದ ಪಂಪ್ವೆಲ್ ಸರ್ಕಲ್ ಬಳಿ ಬಸ್ಸು, ಕಾರು ಸೇರಿದಂತೆ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಇದೇ ವೇಳೆ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಅಂಚೆ ಕಚೇರಿ, ಬ್ಯಾಂಕ್ ಕಚೇರಿಗಳಿಗೆ ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಿಸಿದರು.

Comments are closed.