ಕರಾವಳಿ

ಎ.ಜೆ. ಆಸ್ಪತ್ರೆಯಲ್ಲಿ ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರ ಚಿಕಿತ್ಸಾ ರಹಿತ ಯಶಸ್ವಿ ಚಿಕಿತ್ಸೆ

Pinterest LinkedIn Tumblr

ajhospitl_-heart_surgery

ಮಂಗಳೂರು : ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದಲ್ಲಿ ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರ ಚಿಕಿತ್ಸಾ ರಹಿತ ಯಶಸ್ವಿ ಚಿಕಿತ್ಸೆ ಮಾಡಲಾಗಿದೆ. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರವು ಪೂರ್ಣ ಪ್ರಮಾಣದ ಮಕ್ಕಳ ಹೃದ್ರೋಗ ವಿಭಾಗವನ್ನು ಮತ್ತು ಪೂರ್ಣ ಸಮಯದ ಮಕ್ಕಳ ಹೃದ್ರೋಗ ಸಲಹೆಗಾರರನ್ನುಹೊಂದಿರುವದಕ್ಷಿಣಕನ್ನಡದ ಏಕೈಕ ಕೇಂಧ್ರವಾಗಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.

ಮೂರು ವರ್ಷದ ಬಾಲಕಿ ಶಾಲಿನಿ (ಹೆಸರು ಬದಲಾಯಿಸಲಾಗಿದೆ) ತನ್ನ ಸ್ನೇಹಿತರೊಂದಿಗೆ‌ ಆಡುವಾಗ‌ ಅತೀ ಹೆಚ್ಚಾಗಿ ದಣಿದು ಕೊಳ್ಳುತ್ತಿದ್ದಳು ಹಾಗೂ ಆಕೆಯ‌ ಎರಡೂ ಕಾಲುಗಳು ಯಾವುದೇ ಸಣ್ಣ ಚಟುವಟಿಕೆಯ ನಂತರ ಬಹಳಷ್ಟು ನೋಯುತ್ತಿದ್ದವು. ಈ ಮೇಲಿನ ಸಮಸ್ಯೆಯೊಂದಿಗೆ‌ ಆಕೆಯನ್ನು‌ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತರಲಾಯಿತು.

ಮಕ್ಕಳ ಹೃದ್ರೋಗತಜ್ಞರಾದಡಾ. ಪ್ರೇಮ್ ಆಳ್ವರವರು ಹೃದಯದ ಸ್ಕ್ಯಾನ್ ಮಾಡಿದಾಗ ಆಕೆಗೆ ಹುಟ್ಟಿನಿಂದ‌ಎರಡುರೀತಿಯ ಹೃದ್ರೋಗ ಸಮಸ್ಯೆಗಳಿರುವುದನ್ನು ಪತ್ತೆ ಹಚ್ಚಲಾಯಿತು. ಸ್ಕ್ಯಾನ್ ಮೂಲಕ ಆಕೆಯ ಹೃದಯಕೇಂದ್ರದಲ್ಲಿ‌ಒಂದು ಮದ್ಯಮಗಾತ್ರದರಂಧ್ರವು ಮತ್ತುದೇಹದ ಕೆಳಭಾಗಕ್ಕೆ ರಕ್ತವನ್ನುಕೊಂಡೊಯ್ಯುವ ಮಹಾ ಅಪಧಮನಿಯಕೊಯಾಕ್ಟೇಷನ್‌ಎಂದುಕರೆಯಲ್ಪಡುವ ರಕ್ತನಾಳದಲ್ಲಿ ತಡೆಯುಂಟಾಗಿರುವ‌ಎರಡೂ ತೊಂದರೆಗಳನ್ನು ಪತ್ತೆಹಚ್ಚಲಾಯಿತು.

ಈ ಸಮಸ್ಯೆಯಿಂದಾಗಿ ಮಗುವಿನ ಕಾಲುಗಳ ನಾಡಿಯು‌ಅತ್ಯಂತದುರ್ಬಲಗೊಂಡಿದ್ದು, ಮಗುವಿನ ಪೋಷಕರುತಮ್ಮ ಮಗುವಿಗೆ ಅವಳಿ ಹೃದ್ರೋಗ ಸಮಸ್ಯೆಯಿರುವದನ್ನು‌ಅರಿತುಚಿಂತಾಜನಕರಾದರು. ಈ ಅಪರೂಪದ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸಾರಹಿತಚಿಕಿತ್ಸೆಯನ್ನು ನೀಡಲು ನಿರ್ಧರಿಸಲಾಯಿತು.

ಚಿಕಿತ್ಸೆಗಾಗಿ ಮಗುವನ್ನುಕ್ಯಾತ್ ಲ್ಯಾಬಿಗೆಕರೆದೊಯ್ದುರಂದ್ರವನ್ನು ಬಟನ್(ಸಾಧನದ) ಮೂಲಕ ಮುಚ್ಚಲಾಯಿತು ಮತ್ತು‌ಅದೇ ವೇಳೆ ತಡೆ‌ಉಂಟುಮಾಡಿದ ರಕ್ತನಾಳವನ್ನು ಬಲೂನ್ ವ್ಯಾಪಕ ಹಿಗ್ಗುವಿಕೆ (ಕೊಯಾಕ್ಟೋಪ್ಲಾಸ್ಟಿ) ಬಳಸಿಕೊಂಡು ತೆರೆಯಲಾಯಿತು. ಈ ಚಿಕಿತ್ಸಾ ವಿಧಾನವುಯಾವುದೇ ತೊಡಕುಗಳಿಲ್ಲದೆ ಯಶಸ್ವಿಯಾಗಿ ನಡೆದಿದ್ದುಪುಟ್ಟ ಶಾಲಿನಿಯನ್ನುಚಿಕಿತ್ಸೆಯ ನಂತರ‌ಎರಡು ದಿನಗಳಲ್ಲಿ ಆಸ್ಪತ್ರೆಯಿಂದಬಿಡುಗಡೆಗೊಳಿಸಲಾಯಿತು.

ಮಗುವು ಪೂರ್ತಿಯಾಗಿ‌ಅರೋಗ್ಯದಿಂದಿದ್ದುತನ್ನ ಸ್ನೇಹಿತರೊಂದಿಗೆ‌ಆಡಲು ಹಾಗೂ ಸಾಮಾನ್ಯಜೀವನ ನಡೆಸಲು ಶಕ್ತವಗಿದೆ. ಡಾ. ಗುರುರಾಜ್‌ತಂತ್ರಿ ಮುಖ್ಯ ಅರಿವಳಿಕೆ ತಜ್ಞರು ಅರಿವಳಿಕೆಯನ್ನು ನೀಡುವ ಮೂಲಕ ಚಿಕಿತ್ಸೆಗೆ ಸಹಕರಿಸಿದರು. ಚಿಕಿತ್ಸೆಯನ್ನುಕರ್ನಾಟಕ ಸರ್ಕಾರ‌ಅನುದಾನಿತಯೋಜನೆಯಡಿ ಸಂಪೂರ್ಣ‌ಉಚಿತವಾಗಿ ನಡೆಸಲಾಯಿತು ಎಂದು ಡಾ. ಪ್ರಶಾಂತ್ ಮಾರ್ಲ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.