ಮಂಗಳೂರು, ನ.21: ಕೆಥೊಲಿಕ್ ಕ್ರೈಸ್ತ ಸಭೆಯು 2015-16ನೆ ಸಾಲಿನಲ್ಲಿ ಅಂತಾರಾಷ್ಟ್ರೀಯ ಕರುಣೆಯ ವರ್ಷವನ್ನು ಆಚರಿಸಿದ್ದು, ಮಂಗಳೂರು ಧರ್ಮ ಪ್ರಾಂತದ ವತಿಯಿಂದ ಈ ವರ್ಷಾಚರಣೆಯ ಸಮಾರೋಪ ರವಿವಾರ ನಗರದ ರೊಸಾರಿಯೊ ಕೆಥೆಡ್ರಲ್ನಲ್ಲಿ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಅಧ್ಯಕ್ಷ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ದೀಪವನ್ನು ಬೆಳಗಿಸಿ ಕರುಣೆಯ ಜ್ಯೋತಿಯು ನಾಡಿನ ಎಲ್ಲೆಡೆ ಇರುವ ಜನತೆಗೆ ತಲುಪಲಿ ಎಂದು ಹಾರೈಸಿದರು.
ಧರ್ಮಪ್ರಾಂತದ ಪ್ರಧಾನ ಗುರು ಮೊ.ಡೆನಿಸ್ ಮೊರಾಸ್ ಪ್ರಭು, ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ.ನೊರೊನ್ಹ, ಫಾ.ಪಿಯುಸ್ ಜೇಮ್ಸ್ ಡಿಸೋಜ, ರೊಸಾರಿಯೊ ಕೆಥೆಡ್ರಲ್ನ ಧರ್ಮಗುರು ಫಾ.ಜೆ.ಬಿ.ಕ್ರಾಸ್ತಾ, ಬೊರಿಮಾರ್ ಚರ್ಚ್ನ ಫಾ. ಮೆಲ್ವಿನ್ ನೊರೊನ್ಹ ಉಪಸ್ಥಿತರಿದ್ದರು.
ಜಪ್ಪು ಸೈಂಟ್ ಜೋಸ್ೆ ಸೆಮಿನರಿಯ ಪ್ರಾಧ್ಯಾಪಕ ಪ್ರಾಕ್ಲಿರ್ಡ್ ಫೆರ್ನಾಂಡಿಸ್ ಪ್ರವಚನ ನೀಡಿದರು.ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ಡಿಸೋಜ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ಕೆಥೊಲಿಕ್ ಕ್ರೈಸ್ತರು, ಧರ್ಮಗುರುಗಳು, ಧರ್ಮ ಭಗಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.