ಕರಾವಳಿ

ನೋಟ್ ಬ್ಯಾನ್ ಮಾಡುವ ಮೂಲಕ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿ : ಪೂಜಾರಿ ಆರೋಪ

Pinterest LinkedIn Tumblr

Poojary_Press_Meet

ಮಂಗಳೂರು,ನ.15: ರೂ. 500 ಹಾಗೂ ರೂ. 1000 ದ ನೋಟ್ ಬ್ಯಾನ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಪ್ಪು ಹಣವನ್ನು ತಡೆಯಲು ದೇಶದ ಆದಾಯ ತೆರಿಗೆ ಕಾನೂನು ಇದೆ. ಸೆ276 ಎ ಮತ್ತು 276 ಬಿ ಯಲ್ಲಿ ದೇಶದಲ್ಲಿ ಕಪ್ಪು ಹಣವನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬಹುದು ಎನ್ನುವ ಬಗ್ಗೆ ತಿಳಿಸಲಾಗಿದೆ.

ಇದುವರೆಗೆ ಎಷ್ಟು ಜನರ ವಿರುದ್ಧ ಕಪ್ಪು ಹಣ ಇದೆ ಎಂದು ಪ್ರಕರಣ ದಾಖಲಿಸಲಾಗಿದೆ ? ಎಷ್ಟು ಜನರನ್ನು ಜೈಲಿಗೆ ಕಳುಹಿಸಲಾಗಿದೆ ? ಎನ್ನುವ ಪ್ರಶ್ನೆಗೆ ಮೋದಿ ಉತ್ತರಿಸಲಿ. ಪ್ರಸಕ್ತ ದೇಶದಲ್ಲಿ 1000 ಮತ್ತು 500 ರೂಗಳ ನೋಟನ್ನು ಸರಕಾರ ಅಮಾನ್ಯಗೊಳಿಸುವ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಆದೇಶ ಮಾಡಿರುವುದರಿಂದ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸದೆ ಇರುವುದರಿಂದ ರೈತರು, ಕಾರ್ಮಿಕರು, ತರಕಾರಿ ವ್ಯಾಪಾರಿಗಳು ಜನಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದರು.

pujary_press-club_3

ಪ್ರಧಾನಿ, ಹಣಕಾಸು ಸಚಿವರಿಗೆ ಆದಾಯ ತೆರಿಗೆ ಕಾನೂನಿನ ಪರಿಜ್ಞಾನ ಇಲ್ಲವೇ? ಶ್ರೀಮಂತರ ಮೇಲೆ ತೆರಿಗೆ ವಿಧಿಸಬಹುದಿತ್ತಲ್ಲಾ? ಸೆಕ್ಷನ್ 276 ಮತ್ತು 276 ಎ ಅಡಿ ಕಾಳಧನಿಕರನ್ನು ಜೈಲಿಗೆ ಕಳಿಸಬಹುದು, ಇದರ ಮೂಲಕ ನೀವು ಎಷ್ಟು ಮಂದಿಯನ್ನ ನೀವು ಜೈಲಿಗೆ ಕಳಿಸಿದ್ದೀರಿ? ಎಂದು ಪೂಜಾರಿ ಪ್ರಶ್ನಿಸಿದರು.

ಪ್ರಧಾನಿ ಮೋದಿ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ತಂದಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರದಿಂದ ಬಡವರು, ಕೂಲಿ ಕಾರ್ಮಿಕರು ಬೀದಿಗೆ ಬೀಳುವಂತಾಗಿದ್ದು, ಹಗರಣದ ರೂಪದ ಈ ಗೊಂದಲ ಸೃಷ್ಟಿಯಾಗಿದೆ. ಜನರು ಐನೂರು ನೋಟುಗಳನ್ನು ಹಿಡಿದುಕೊಂಡು ಕಣ್ಣೀರು ಸುರಿಸುತ್ತಿದ್ದರೆ,ಮೋದಿಯವರು ತಮ್ಮ ಈ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ ಅವರ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ತನ್ವೀರ್ ಸೇಠ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು : ಪೂಜಾರಿ

ತನ್ವೀರ್ ಸೇಠ್ ಅರೆನಗ್ನ ಚಿತ್ರ ವೀಕ್ಷಿಸಿದ ಪ್ರಕರಣದ ಬಗ್ಗೆ ಪತ್ರಕರ್ತರ ಪ್ರಶ್ನೆ ಪ್ರತಿಕ್ರಿಯಿಸಿದ ಪೂಜಾರಿ, ತನ್ವೀರ್ ಸೇಠ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ತನ್ವೀರ್ ಸೇಠ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡದಿದ್ದರೆ ಅವರ ಭವಿಷ್ಯವೇ ಅಂತ್ಯವಾಗಲಿದೆ.ಅದರೊಂದಿಗೆ ಪಕ್ಷದ ಭವಿಷ್ಯವೂ ಅಂತ್ಯವಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಕಾರ್ಮಕ್ರಮವೊಂದರ ವೇಳೆ ಅರೆನಗ್ನ ಚಿತ್ರ ವೀಕ್ಷಿಸಿದ್ದ ಸಚಿವ ತನ್ವೀರ್ ಸೇಠ್, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಅವರನ್ನು ಸಮರ್ಥಿಸಿಕೊಳ್ಳುವುದನ್ನು ಸರಿಯಲ್ಲ. ಸಚಿವ ತನ್ವೀರ್ ಸೇಠ್ ಪ್ರಕರಣದಲ್ಲಿ ಡಾ.ಪರಮೇಶ್ವರ್ ಅವರನ್ನು ಬಾಯಿ ಮುಚ್ಚಿಸಿರುವುದು ಕೂಡ ಸರಿಯಲ್ಲ. ಈ ಪ್ರಕರಣದಲ್ಲಿ ತನ್ವೀರ್ ಸೇಠ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲೇ ಬೇಕು ಎಂದು ಪೂಜಾರಿ ಆಗ್ರಹಿಸಿದರು.

ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ,ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.

Comments are closed.