ಮಂಗಳೂರು, ನವೆಂಬರ್.15 :ರಂಗಭೂಮಿ ನಟ,ನಿರ್ದೇಶಕರಂಗಾಯಣದ ಮೈಮ್ರಮೇಶ್ ಅವರು ನಾಟಕ ವಿಭಾಗದಲ್ಲಿ ದೂರದರ್ಶನಚಂದನ ನೀಡುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕಳೆದ 45 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ದುಡಿಯುತ್ತಿರುವ ಮೈಸೂರು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದ ಮಂಗಳೂರು ಮತ್ತು ಕಾಸರಗೋಡು ನಗರದಲ್ಲಿ ರಂಗಭೂಮಿಯಲ್ಲಿ ದುಡಿದವರು. ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 12 ಮಂದಿ ಸಾಧಕರಿಗೆ ಚಂದನಪ್ರ ಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಮೊದಲುಯಕ್ಷಗಾನದ ಸೆಳೆತದೊಂದಿಗೆಭರತನಾಟ್ಯ ಕಲಿತು 1975ರಲ್ಲಿಯೇಸಮುದಾಯದಿದ ತೊಡಗಿ ಹವ್ಯಾಸಿಯಿಂದ ರಂಗಾಯಣದ ರೆಪರ್ಟರಿ ತನಕ ಕಳೆದ 46 ವರ್ಷಗಳಿಂದ ಮೈಮ್ ಜೀವನೇ ರಂಗಭೂಮಿ.1989ರಲ್ಲಿಬಿ.ವಿ.ಕಾರಂತರು ಆರಂಭಿಸಿದ ಮೈಸೂರು ರಂಗಾಯಣದಲ್ಲಿ ಸೇರಿಕೊಂಡು ಶಿಕ್ಷಕ, ಕಲಾವಿದ, ನಿರ್ದೇಶಕನಾಗಿ ಸೇವೆಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಜಿಪಿಐಇ ಆರ್ಹ ವ್ಯಾಸಿರಂಗ ತಂಡಕಟ್ಟಿದ್ದಾರೆ.
ಮೊದಲಿಗೆ ತುಳುಭಾಷೆಯಲ್ಲಿ ನಾಗಮಂಡಲ ನಾಟಕವನ್ನು ನಿರ್ದೇಶನ ಮಾಡಿದವರು ಮೈಮ್ ರಮೇಶ್. ಚೆನ್ನೈನಿಂದ ಸೌತ್ಇಂಡಿಯ ನ್ಫಿಲ್ಮ್ಅ ಸೋಸಿಯೇಶನ್ನಿಂದ 1997ರಲ್ಲಿ ಕಲೈಸೆಲ್ವಂಬಿರುದು, ಕೇರಳ ಕಾಸರಗೋಡಿನಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರಿಂದ ರಂಗ ಕರ್ಮಿಬಿರುದು ಪಡೆದಿರುವ ಮೈಮ್ ರಮೇಶ್ ಅರ್ಜಿಹಾಕಿ ಪ್ರಶಸ್ತಿ ಪಡೆಯೋದನ್ನು ವಿರೋಧಿಸುತ್ತಾರೆ.