ಕರಾವಳಿ

ಕಾಞಂಗಾಡಿನಲ್ಲಿ ಶ್ರೀ ಕಾಶೀ ಮಠಾಧೀಶರ ವೈಭವದ ದಿಗ್ವಿಜಯೋತ್ಸವ

Pinterest LinkedIn Tumblr

kashi_mata_dvigija_m

ಚಾತುರ್ಮಾಸ ವೃತಾಚರಣೆಯು ಕಾಞಂಗಾಡು ಹೊಸದುರ್ಗದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸಂಪನ್ನ –  ಶ್ರೀಗಳವರ ಮೊದಲ ದಿಗ್ವಿಜಯ ಮಹೋತ್ಸವ

ಚಿತ್ರಗಳು : ಮಂಜು ನೀರೇಶ್ವಾಲ್ಯ

ಮಂಗಳೂರು: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯರ ದುಮರ್ುಖ ನಾಮ ಸಂವತ್ಸರದ ಚಾತುರ್ಮಾಸ ವೃತಾಚರಣೆಯ ಅಂಗವಾಗಿ ಶ್ರೀಗಳವರ ದಿಗ್ವಿಜಯ ಮಹೋತ್ಸವವು ರವಿವಾರ ಕಾಞಂಗಾಡು ಪೇಟೆಯಲ್ಲಿ ವಿವಿಧ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ವೈಭವದಿಂದ ನೆರವೇರಿತು.

ಚಾತುರ್ಮಾಸ ವೃತಾಚರಣೆಯು ಕಾಞಂಗಾಡು ಹೊಸದುರ್ಗದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಸಂಸ್ಥಾನದ ಪೀಠಾಧಿಪತಿಯಾಗಿ ಶ್ರೀಗಳವರ ಮೊದಲ ದಿಗ್ವಿಜಯ ಮಹೋತ್ಸವ ಎಲ್ಲೆಡೆಯಿಂದ ಪಾಲ್ಗೊಂಡಿದ ಶಿಷ್ಯ ವರ್ಗದ ಪಾಲ್ಗೊಳ್ಳುವಿಕೆಯೊಂದಿಗೆ ಅತ್ಯಂತ ಸಡಗರ ಸಂಭ್ರಮೋಲ್ಲಾಸದಿಂದ ಜರಗಿತು.

kashi_mata_dvigija_1 kashi_mata_dvigija_2 kashi_mata_dvigija_3 kashi_mata_dvigija_4

ಆರಂಭದಲ್ಲಿ ಆಕರ್ಷಕ ರಜತ ಚಿತ್ತಾರದಿಂದ ಕೂಡಿದ ಕೆಂಪು ವರ್ಣದ ಪಾಮರಿಯನ್ನು ಹೊದ್ದ ಶ್ರೀಗಳವರನ್ನು ಸಂಸ್ಥಾನದ ಸಕಲ ಬಿರುದು ಗೌರವಾದರಗಳೊಂದಿಗೆ ಪುಷ್ಪಾಲಂಕೃತ ರಥದಲ್ಲಿರುವ ರಜತ ಪೀಠಕ್ಕೆ ಸ್ವಾಗತಿಸಲಾಯಿತು. ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸಾಂಸ್ಕೃತಿಕ ವೈವಿಧ್ಯಗಳನ್ನು ವೀಕ್ಷಿಸಿದ ಶ್ರೀಗಳವರು ಪೀಠದಲ್ಲಿ ವಿರಾಜಮಾನರಾಗುವುದರೊಂದಿಗೆ ದಿಗ್ವಿಜಯ ಮಹೋತ್ಸವ ಆರಂಭಗೊಂಡಿತು.

ತ್ರಿಶೂರಿನ ಆನೆಗಳು, 75ಕ್ಕೂ ಅಧಿಕ ಕಲಾವಿದರನ್ನೊಳಗೊಂಡ ಪಂಚ ವಾದ್ಯ ಹಾಗೂ ಚೆಂಡೆ ಮೇಳಗಳ ತಂಡ, ತಮಿಳು ನಾಡಿನ ಕಾವಡಿ ಆಟ ತಂಡ, ತ್ರಿಶೂರಿನ ಹಾಗೂ ಮಂಗಳೂರಿನ ಹುಲಿವೇಷಧಾರಿಗಳು, ಕಲ್ಲಡ್ಕದ ಶಿಲ್ಪಗೊಂಬೆಗಳ ಬಳಗ, ಪಯ್ಯನೂರಿನ ಹದಿನೈದರಷ್ಟು ಪೌರಾಣಿಕ ಸ್ಥಬ್ದ ಚಿತ್ರಗಳು, ಪೂನಾದ ಜಲೂಸ್ ನಾಸಿಕ್ ಬ್ಯಾಂಡ್ ತಂಡ, ಪಂಡರಾಪುರದ ವಿಶೇಷ ವಾರಕರಿ ಸಂಕೀರ್ತನಾ ತಂಡ, ಹೀಗೆ ಸಾಂಸ್ಕೃತಿಕ ವೈವಿಧ್ಯಗಳು ದಿಗ್ವಿಜಯ ಮಹೋತ್ಸವದ ರಂಗೇರಿಸಿದವು.

kashi_mata_dvigija_6 kashi_mata_dvigija_7 kashi_mata_dvigija_8 kashi_mata_dvigija_9 kashi_mata_dvigija_10

ಕಾಞಂಗಾಡು ಪೇಟೆಯ ಮುಖ್ಯ ಬೀದಿಯಲ್ಲಿ ನಡೆದ ಈ ವೈಭವದ ಮೆರವಣಿಗೆಯಿಂದ ಕೂಡಿದ ದಿಗ್ವಿಜಯ ಮಹೋತ್ಸವದಲ್ಲಿ ಕನರ್ಾಟಕ, ಕೇರಳ ಸೇರಿದಂತೆ ಎಲ್ಲೆಡೆಯಿಂದ ಸಂಸ್ಥಾನದ ಮೂವತ್ತೈದು ಸಾವಿರಕ್ಕೂ ಅಧಿಕ ಶಿಷ್ಯವರ್ಗ, ಸಮಾಜ ಬಾಂಧವರು, ವಿವಿಧ ದೇವಳಗಳು, ಮಠ, ಮಂದಿರಗಳ ಆಡಳಿತ ಮೊಕ್ತೇಸರರು, ಪ್ರಮುಖರು ಪಾಲ್ಗೊಂಡು ಶ್ರೀಗಳವರಿಂದ ಫಲಮಂತ್ರಾಕ್ಷತೆ ಪ್ರಸಾದ ಸ್ವೀಕರಿಸಿದರು.

ದಿಗ್ವಿಜಯ ಸಾಗುವ ಹಾದಿಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು ಸಾರ್ವಜನಿಕರಿಗೆ ಸಂತರ್ಪಣೆ, ಫಲಾಹಾರದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ರವಿವಾರ ಸಂಜೆ 7.30ರ ವೇಳೆಗೆ ಆರಂಭಗೊಂಡ ದಿಗ್ವಿಜಯ ಮಹೋತ್ಸವ ತಡರಾತ್ರಿ 3.30ರ ವೇಳೆಗೆ ಶ್ರೀಗಳವರು ದೇವಳಕ್ಕೆ ಮರಳಿ ದೇವರ, ಸಂಸ್ಥಾನ ದೇವರ ಭೇಟಿಯೊಂದಿಗೆ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿ, ಚಾತುಮರ್ಾಸ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

kashi_mata_dvigija_5 kashi_mata_dvigija_11 kashi_mata_dvigija_12 kashi_mata_dvigija_13 kashi_mata_dvigija_14 kashi_mata_dvigija_15

ಶ್ರೀ ಗುರು ಸ್ಮರಣ…

ಶ್ರೀ ಸಂಸ್ಥಾನ ಕಾಶೀಮಠದ ವೃಂದಾವನಸ್ಥ ಯತಿವರ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಮೊದಲ ಪುಣ್ಯ ತಿಥಿ 2017ರ ಜನವರಿಯಲ್ಲಿ ಹರಿದ್ವಾರದಲ್ಲಿ ನಡೆಯಲಿದೆ. ಹರಿದ್ವಾರದಲ್ಲಿ ಈ ಹಿನ್ನೆಲೆಯಲ್ಲಿ ಗುರುವರ್ಯರ ಸಮಾಧಿ ಸ್ಥಳದಲ್ಲಿ ನಿಮರ್ಾಣಗೊಳ್ಳುತ್ತಿರುವ ಶಿಲಾಮಯ ವೃಂದಾವನದ ಪ್ರತಿಕೃತಿಯ ಟ್ಯಾಬ್ಲೋ ದಿಗ್ವಿಜಯ ಮಹೋತ್ಸವದಲ್ಲಿ ವಿಶೇಷ ಆಕರ್ಷಣೆಯಾಯಿತು. ಸಂಸ್ಥಾನದ ಮಠಾಧಿಪತಿಯವರ ದಿಗ್ವಿಜಯೋತ್ಸವದಲ್ಲಿ ಅವರ ಗುರುಗಳ ಸ್ಮರಣೆಗೂ ಈ ಮೂಲಕ ಅವಕಾಶ ದೊರೆತಂತಾಯಿತು.

ಚಿತ್ರಗಳು : ಮಂಜು ನೀರೇಶ್ವಾಲ್ಯ

Comments are closed.