ಅಂತರಾಷ್ಟ್ರೀಯ

ಯುಏಇಯಲ್ಲಿ ಅನುಮತಿ ಪಡೆಯದೇ ಸಹಾಯ ಧನ ಸಂಗ್ರಹಿಸಿದರೆ ಜೈಲೇ ಗತಿ …!

Pinterest LinkedIn Tumblr

dir

ದುಬೈ: ಯುಏಇಯಲ್ಲಿ ಅನುಮತಿ ಪಡೆಯದೇ ಯಾವುದೇ ರೀತಿಯ ಸಹಾಯ ಧನ (ಹಣ) ಸಂಗ್ರಹ ಮಾಡದಂತೆ ಇಲ್ಲಿನ ಪೊಲೀಸರು ಕಟ್ಟೆಚ್ಚರ ನೀಡಿದ್ದಾರೆ.

ಅಧಿಕೃತ ಸಂಸ್ಥೆಗಳ ಅನುಮತಿ ಪಡೆಯದೇ ಹಣ(ಸಹಾಯ ಧನ) ಸಂಗ್ರಹಿಸಿದ್ದಲ್ಲಿ ಜೈಲು ಕಂಬಿ ಎಣಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ದುಬೈಯಲ್ಲಿ ಆಸ್ಟ್ರೇಲಿಯಾ- ಅಮೇರಿಕನ್ ಮೂಲದ ಪ್ರಜೆಯೊಬ್ಬ ಸಹಾಯ ಧನ ಸಂಗ್ರಹಿಸುವ ನಿಟ್ಟಿನಲ್ಲಿ ಸಮಾಜಿಕ ತಾಣದಲ್ಲಿ ಜಾಹಿರಾತು ಹಾಕಿದ್ದ. ಈತ IACAD ಯ ಅನುಮತಿ ಇಲ್ಲದೆ ಅಫಘಾನಿಸ್ತಾನದ ನಿರಾಶ್ರಿತರಿಗಾಗಿ ಅಮೇರಿಕಾದಲ್ಲಿ ನೊಂದಣಿಯಾಗಿರುವ ಸಂಸ್ಥೆಯ ಮೂಲಕ ದುಬೈಯಲ್ಲಿ ಹಣ ಸಂಗ್ರಹ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದುಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ಪೊಲೀಸರು ಈ ಸಂಬಂಧ ಶಿಸ್ತಿನ ಕ್ರಮಕ್ಕೆ ಮುಂದಾಗಿದ್ದಾರೆ.

ಅನುಮತಿ ಪಡೆಯದೇ ಯಾವುದೇ ರೀತಿಯ ಸಹಾಯ ಧನ (ಹಣ) ಸಂಗ್ರಹ ಮಾಡದಂತೆ Islamic Affairs and Charitable Activities Department (IACAD) ಯುಏಇಯಲ್ಲಿ ಕೆಲಸ ಮಾಡಿಕೊಂಡಿರುವ ಹೊರದೇಶಗಳ ನಾಗರಿಕರಿಗೆ ಕಟ್ಟಪ್ಪಣೆ ನೀಡಿದೆ. ಒಂದು ವೇಳೆ ಸಹಾಯ ಧನ (ಹಣ) ಸಂಗ್ರಹಿಸುದು ಕಂಡು ಬಂದಲ್ಲಿ 2 ತಿಂಗಳಿನಿಂದ ಒಂದು ವರ್ಷದ ತನಕ ಜೈಲು ಶಿಕ್ಷೆ ಹಾಗೂ Dh5,000 ರಿಂದ Dh100,000 (ಸುಮಾರು 90 ಸಾವಿರದಿಂದ 18 ಲಕ್ಷ ರೂ) ದಂಡ ತೆರಬೇಕಾಗಿದೆ.

ಯಾವುದೇ ಸಂಘ ಸಂಸ್ಥೆಗಳು ಅಥವಾ ವಯಕ್ತಿಕವಾಗಿ ಯಾರಿಗಾದರೂ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ಮಾಡುವ ಮೊದಲು IACAD ಯನ್ನು ಸಂಪರ್ಕಿಸಿ ಮನವಿ ಸಲ್ಲಿಸಬಹುದಾಗಿದೆ. ಮನವಿ ಸಲ್ಲಿಸಿದ 14 ದಿನಗಳೊಳಗೆ IACAD ಯು ಈ ಬಗ್ಗೆ ಅನುಮತಿ ನೀಡಲಿದೆ.

Comments are closed.