ಕುಂದಾಪುರ: ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳವು ನಡೆದು ಒಂದು ವರ್ಷ ಕಳೆದರೂ ಕಳ್ಳರನ್ನು ಪತ್ತೆ ಹಚ್ಚಲು ಈ ತನಕ ಪೊಲೀಸ್ ಇಲಾಖೆ ವಿಫಲಾಗಿರುವ ಹಿನ್ನಲೆಯಲ್ಲಿ ಇನ್ನಷ್ಟು ಮುತುವರ್ಜಿ ವಹಿಸಿ ಪ್ರಕರಣವನ್ನು ಪತ್ತೆಹಚ್ಚುವ ಕೆಲಸವನ್ನು ಮಾಡಬೇಕು ಎಂದು ದೇವಸ್ಥಾನದ ಭಕ್ತಾದಿಗಳು ಆಗ್ರಹಿಸಿ ಬುಧವಾರ ಕುಂದಾಪುರ ಡಿವೈಎಸ್ಪಿ ಪ್ರವೀಣ್ ಎಚ್. ನಾಯಕ್ ಅವರಿಗೆ ಮನವಿ ನೀಡಿದರು.
ಪಳ್ಳಿ ಕಿಶನ್ ಹೆಗ್ಡೆ ಅವರು ಭಕ್ತಾದಿಗಳ ಪರವಾಗಿ ಡಿವೈಎಸ್ಪಿ ಅವರಿಗೆ ಮನವಿ ನೀಡಿ ಮಾತನಾಡಿ ಘಟನೆ ನಡೆದು ಒಂದು ವರ್ಷ ಕಳೆದರೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚಲು ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ ಎನ್ನುವ ಭಾವನೆ ದೇವಿಯ ಭಕ್ತರದಾಗಿದ್ದು, ವರ್ಷಗಳೇ ಕಳೆದರೂ ಇಲಾಖೆ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ ಏಕೆ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ ಎಂದರು.
ಡಿವೈಎಸ್ಪಿ ಅವರು ಮಾತನಾಡಿ, ಈ ಪ್ರಕರಣವನ್ನು ಬೇರೆ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುವುದು ಹಾಗೂ ತನಿಖೆಯನ್ನು ಇನ್ನಷ್ಟು ಚರುಕುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಬುಧವಾರ ದೇವಸ್ಥಾನದಲ್ಲಿ ಭಕ್ತರು ಸೇರಿ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಪ್ರಕರಣವನ್ನು ಬೇಧಿಸಿದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇಲಾಖಾ ವೈಫಲ್ಯವೆಂದು ಪರಿಗಣಿಸಿ ಪ್ರತಿಭಟನೆಯ ಮೂಲಕ ತೀವ್ರ ಹೋರಾಟ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಬ್ಲಾಡಿ ಮಂಜಯ್ಯ ಶೆಟ್ಟಿ, ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಸಂಪತ್, ಗೋಪಾಲ ದೇವಾಡಿಗ, ಅರ್ಚಕ ಮಹೇಶ್ ಭಟ್, ಭರತೇಶ್ ಶೇರಿಗಾರ್, ಶಿವರಾಮ್ ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿರಿ:
ಸೌಕೂರು ದುರ್ಗಾಪರಮೇಶ್ವರಿ ಕೋಟಿಗಟ್ಟಲೇ ಚಿನ್ನಾಭರಣ ಕಳವು ಪ್ರಕರಣಕ್ಕೆ ಒಂದುವರ್ಷ; ಇನ್ನೂ ಪತ್ತೆಯಾಗಿಲ್ಲ ಆರೋಪಿಗಳು
ಸೌಕೂರು ದುರ್ಗಾಪರಮೇಶ್ವರಿ ಕೋಟಿಗಟ್ಟಲೇ ಚಿನ್ನಾಭರಣ ಕಳವು ಪ್ರಕರಣಕ್ಕೆ ಒಂದುವರ್ಷ; ಇನ್ನೂ ಪತ್ತೆಯಾಗಿಲ್ಲ ಆರೋಪಿಗಳು
ಸೌಕೂರು ದುರ್ಗಾಪರಮೇಶ್ವರಿ ದೇವಳದಲ್ಲಿ ಖದೀಮ ಕಳ್ಳರ ಕೈಚಳಕ; 50 ಲಕ್ಷಕ್ಕೂ ಅಧಿಕ ಕನ್ನ
ಸೌಕೂರು ದೇವಸ್ಥಾನ ಕಳ್ಳತನ ಪ್ರಕರಣ: ಎಸ್ಪಿ ಅಣ್ಣಾಮಲೈ ಭೇಟಿ; ಮುಂದುವರಿದ ತನಿಖೆ
Comments are closed.