ಅಂತರಾಷ್ಟ್ರೀಯ

ವಿಶ್ವದ ಅತಿದೊಡ್ಡ ವಿಮಾನ ಮೊಟ್ಟಮೊದಲ ಬಾರಿಗೆ ಆಗಸಕ್ಕೆ ಹಾರಾಟ.

Pinterest LinkedIn Tumblr

worl_big_airoplane

ಲಂಡನ್, ಆ.18: ತಾಂತ್ರಿಕ ಸಮಸ್ಯೆಯಿಂದಾಗಿ ನಾಲ್ಕು ದಿನಗಳ ಹಿಂದೆ ಮೇಲೇರಲು ವಿಫಲವಾಗಿದ್ದ ವಿಶ್ವದ ಅತಿದೊಡ್ಡ ವಿಮಾನ ಮೊಟ್ಟಮೊದಲ ಬಾರಿಗೆ ಆಗಸಕ್ಕೆ ಚಿಮ್ಮಿತು. ಕೇಂದ್ರ ಇಂಗ್ಲೆಂಡ್ನ ಕಾರ್ಡಿಂಗ್ಟನ್ ವಾಯುನೆಲೆಯಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಭಾಗಶಃ ವಿಮಾನ, ಭಾಗಶಃ ವಾಯುನೌಕೆಯಾಗಿರುವ ಏರ್ಲ್ಯಾಂಡರ್ 10 ಯಶಸ್ವಿಯಾಗಿ ಹಾರಾಟ ನಡೆಸಿತು.

86 ವರ್ಷಗಳ ಹಿಂದೆ ಅಂದರೆ 1930ರ ಅಕ್ಟೋಬರ್ನಲ್ಲಿ ಇದೇ ವಾಯುನೆಲೆಯಿಂದ ಮೊಟ್ಟಮೊದಲ ಗಗನನೌಕೆ ನತದೃಷ್ಟ ಆರ್-101 ಹಾರಿತ್ತು. ಈ ವಾಯುನೌಕೆ ಫ್ರಾನ್ಸ್ನಲ್ಲಿ ಅಪಘಾತಕ್ಕೀಡಾಗಿ 48 ಮಂದಿಯನ್ನು ಬಲಿ ಪಡೆದಿತ್ತು. ಈ ಮೂಲಕ ಬ್ರಿಟನ್ ವಾಯುನೌಕೆ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಕೈಬಿಟ್ಟಿತ್ತು.

worl_big_airoplane_!

ಅಮೆರಿಕನ್ ಸೇನೆಯ ಗಸ್ತು ವಿಮಾನವಾಗಿ ಈ 92 ಮೀಟರ್ ಉದ್ದದ ಏರ್ಲ್ಯಾಂಡರ್-10 ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಸರಕು ಸಾಗಾಣಿಕೆಯಂಥ ಉದ್ದೇಶಕ್ಕೆ ವಾಣಿಜ್ಯ ವಲಯದಲ್ಲೂ ಬಳಸಬಹುದಾಗಿದೆ ಎಂದು ನಿರ್ಮಾಣಸಂಸ್ಥೆಯಾದ ಹೈಬ್ರೀಡ್ ಏರ್ ವೆಹಿಕಲ್ಸ್ ಪ್ರಕಟಿಸಿದೆ.

ಈಗ ಹಾರಾಟದಲ್ಲಿರುವ ಅತಿದೊಡ್ಡ ವಿಮಾನ ಎಂದು ಈ ವಿಮಾನದ ಕುರಿತ ಕಿರುಚಿತ್ರ ಬಣ್ಣಿಸಿದ್ದು, ಇದರ ಅಭಿವೃದ್ಧಿಗೆ ಬ್ರಿಟನ್ ಸರಕಾರದಿಂದ 3.7 ದಶಲಕ್ಷ ಡಾಲರ್ ನೆರವು ದೊರಕಿತ್ತು. ಏರ್ಲ್ಯಾಂಡರ್ 4880 ಮೀಟರ್ ಎತ್ತರದವರೆಗೂ ಹಾರಬಲ್ಲದು ಮತ್ತು 148 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಹೀಲಿಯಂ ಇಂಧನದಿಂದಾಗಿ ಇದು ಗಾಳಿಯಲ್ಲಿ ಎರಡು ವಾರಗಳ ಕಾಲ ಮಾನವರಹಿತವಾಗಿ ತೇಲಬಹುದು. ಜನರು ಇರುವಾಗ ಐದು ದಿನಗಳ ಕಾಲ ಆಗಸದಲ್ಲಿ ತೇಲಾಡುವ ಸಾಮರ್ಥ್ಯ ಹೊಂದಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ರವಿವಾರ ಇದರ ಹಾರಾಟವನ್ನು ಅಂತಿಮ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.

Comments are closed.