ಕರಾವಳಿ

ಆನಿವಾಸಿ ಭಾರತೀಯ ಸಂಸ್ಥೆ ಕೆ ಐ ಸಿ ಯಿಂದ ದುಬೈಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Pinterest LinkedIn Tumblr

KIC Dubai_20160815_222621_resized-013

ದುಬೈ : ಸಾಮಾಜಿಕ ಧಾರ್ಮಿಕ ರಂಗದಲ್ಲಿ ಸುಮಾರು ಹದಿನೇಳು ವರ್ಷಗಳಿಂದ ಯು ಎ ಇ ಯಾಧ್ಯಂತಹ ಪರಿಚಯಿಸಿಕೊಂಡು ಕಳೆದ ಕೆಲವು ಸಮಯಗಳಿಂದ ಸೌದಿ ಅರೇಬಿಯಾ , ಖತಾರ್ , ಕುವೈಟ್ , ಮಸ್ಕತ್ ಪ್ರದೇಶಗಳಲ್ಲಿ ಹಸ್ತ ಚಾಚಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ( ಕೆ ಐ ಸಿ ) ಕೇಂದ್ರ ಸಮಿತಿಯ ಅಧೀನದಲ್ಲಿ ಎಪ್ಪತ್ತನೇ ವರ್ಷದ ಭಾರತೀಯ  ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮವು ಸೋಮವಾರದಂದು ರಾತ್ರಿ ಬಾರ್ ದುಬೈ ಯಲ್ಲಿ ನಡೆಯಿತು.

?

?

?

?

KIC Dubai_20160815_225317-018

KIC Dubai_IMG_1240-002

KIC Dubai_IMG_1242-003

KIC Dubai_IMG_1243-004

KIC Dubai_IMG_1247-005

KIC Dubai_IMG_1248-006

KIC Dubai_IMG_1251-007

KIC Dubai_IMG_1255-008

KIC Dubai_IMG_1257-009

KIC Dubai_IMG_1260-010

KIC Dubai_IMG_1262-011

KIC Dubai_IMG_1267-012

KIC Dubai_IMG-20160815-WA0151-001

ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆಯವರು ಸ್ವಾಗತಿಸಿ ಮಾತನಾಡಿದ ಅವರು ಸಂಸ್ಥೆಯ ಅಧೀನದಲ್ಲಿ ಹಲವಾರರು ಬಾರಿ ನಾವು ತಾಯಿನಾಡಿದ ಸಂತೋಷದ ದಿನವಾದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದು, ಇಂದೂ ಕೂಡ ಅಂತಹ ಕಾರ್ಯಕ್ರಮವು ಬಂದೊದಗಿದೆ.ತಾಯಿನಾಡಿನದಿಂದ ಹಿಂದಿರುಗಿದ ಪ್ರತಿಯೋರ್ವನಿಗೂ ಸಹಿಸಲಸಾಧ್ಯವಾದ ನೂರಾರು ಕಷ್ಟ ಕಾರ್ಪಣ್ಯಗಳಿದ್ದರೂ ಅವೆಲ್ಲವನ್ನೂ ನುಂಗಿಕೊಂಡು ಮಂದಹಾಸದ ಮುಖಭಾವದೊಂದಿಗೆ ದಿನ ಕಳೆಯುತ್ತಿರುವ ನಮ್ಮಂತಹ ಹಲವಾರು ಸ್ನೇಹಿತರಿಗೆ ನಿಜವಾದ ಸ್ವಾತಂತ್ರ್ಯ ಲಭಿಸಬೇಕಾಗಿದೆ ಎಂದು ವಿಷಾದವ್ಯಕ್ತಪಡಿಸುತ್ತಾ , ಕೆ ಐ ಸಿ ಸಂಸ್ಥೆಯು ಶೈಕ್ಷಣಿಕ ಕಾರ್ಯಚಟುವಟಿಕೆ , ಸಂಸ್ಥೆಯ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ , ಸಮುದಾಯದ ಮುಂದೆ ತಮ್ಮನ್ನು ಗುರುತಿಸಿಕೊಂಡಿರುವದನ್ನು ಸವಿವರವಾಗಿ ವಿವರಿಸಿ ಸರ್ವರಿಗೂ ಸ್ವಾತಂತ್ರ್ಯೋತ್ಸವ ದಿನದ ಶುಭ ಹಾರೈಸಿದರು. ನಂತರ ಕಾರ್ಯಕ್ರಮದಲ್ಲಿ ಶಿಸ್ತಿನಿಂದ ಎದ್ದು ನಿಂತು ಕೊಂಡು ರಾಷ್ಟ್ರಗೀತೆ ಹಾಡಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದುಬೈ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ರವರು , ಇಂದು ರಾಷ್ಟ್ರಕ್ಕೆ ಆಂಗ್ಲರಿಂದ ಸ್ವಾತಂತ್ರ್ಯ ಲಭಿಸಿರುವುದು ನಿಜವೇ ಆಗಿದ್ದು, ಬಡ ,ದೀನ – ದಲಿತ ,  ಅಲ್ಪ ಸಂಖ್ಯಾತ , ಸಮುದಾಯಕ್ಕೆ ಇಂದೂ ಸ್ವಾತಂತ್ರ್ಯವು ಕನಸಾಗಿದೆ. ಬಾಯಿ ಮಾತಿನ ಮೂಲಕ ಈ ದಿನವನ್ನು ಕೇವಲ ಒಂದು ಘಂಟೆ ಅಥವಾ ಒಂದು ದಿನಕ್ಕೆ ಆಚರಣೆಗಾಗಿ ಉಪಯೋಗಿಸದೆ ಇಂತಹ ಕೆಳವರ್ಗದ ಜನರ , ಕೆಲ ವರ್ಗಗಳ ಸಮುದಾಯದ ಕಲ್ಯಾಣಕ್ಕಾಗಿ ನಮ್ಮ ಜೀವನವನ್ನು ಮುಡಿಪಾಗಿಡೋಣ ಎಂದು ಕರೆ ನೀಡಿದರು. ಜನ್ಮ ನೀಡಿದ ತಾಯಿ ಹಾಗೂ ಜನ್ಮ ಭೂಮಿಯನ್ನು ಪೀತಿಸುವಂತೆ ಕಲಿಸಿಕೊಟ್ಟ ಇಸ್ಲಾಮ್ ಧರ್ಮದ ಅನುಯಾಯಿಗಳಾದ ನಾವು ಅನಿವಾಸಿಗಳಾದರು, ಆ ಆಶಯದಂತೆ ತಾಯಿನಾಡಿನ ಸಂತೋಷದ ದಿನವನ್ನು ಕೊಂಡಾಡುತ್ತಿದ್ದೇವೆ. ಎಲ್ಲಾ ಧರ್ಮಗಳು ಪ್ರತಿಪಾದಿಸುತ್ತಿರುವ ಶಾಂತಿಯಿಂದ ಕೂಡಿದ ಜೀವನವು ನಮ್ಮದಾಗಲಿ ಎಂದು ಶುಭ ಹಾರೈಸಿ ಪವಿತ್ರ ಖುರ್-ಆನಿನ ಸೂಕ್ತದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ ಐ ಸಿ ದುಬೈ ಸಮಿತಿ ಅಧ್ಯಕ್ಷರಾದ ಅಶ್ರಫ್ ಖಾನ್ ಮಾಂತೂರ್ ರವರು , ಕೆ ಐ ಸಿ ವಿದ್ಯಾ ಸಂಸ್ಥೆ ಹಾಗೂ ಅರಬ್ ರಾಷ್ಟ್ರಗಳಲ್ಲಿ ಕೆ ಐ ಸಿ ನಡೆಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆ ಗಳನ್ನೂ ವಿವರಿಸುತ್ತಾ, ಸಮಿತಿಯು ಇಂದು ಜನ್ಮ ನಾಡಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದರಲ್ಲಿ ಅತೀವ ಸಂತೋಷವಿದ್ದು , ಈ ದಿನವನ್ನು ಕೇವಲ ರಾಷ್ಟ್ರ ಪತಾಕೆಯನ್ನು ಹಿಡಿದು ಇತರರೆಡೆಯಲ್ಲಿ ತಾನೋರ್ವನೇ ರಾಷ್ಟ್ರಪ್ರೇಮಿ ಎಂದು ಬಿಂಬಿಸಲು ಉಪಯೋಗಿಸದೆ , ಬಡ ಸಮಾಜದ , ಸಮುದಾಯದ ಸಬಲೀಕರಣಕ್ಕಾಗಿ ವಿನಿಯೋಗಿಸುವಂತೆ ಕೇಳಿಕೊಂಡರು.
ಇನ್ನೋರ್ವ ಮುಖ್ಯ ಅತಿಥಿ ಕೆ ಐ ಸಿ ಶಾರ್ಜಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಮಣಿಲ ರವರು ಮಾತನಾಡಿ , ತಮ್ಮ ಬಾಲ್ಯ ಶಾಲಾ ದಿನಗಳಲ್ಲಿ ಆಚರಿಸುತ್ತಿದ್ದ ಸ್ವಾತಂತ್ರ್ಯಕ್ಕೂ ಇಂದು ಆಚರಿಸುತ್ತಿರುವ ದಿನಕ್ಕೂ ಅಜಗಜಾಂತರ ವ್ಯತ್ಯಾಸಲು ಕಂಡುಬರುತ್ತಿದೆ. ಅಂದಿನ ದಿನಗಳಲ್ಲಿ ಸ್ವಾತಂತ್ರ್ಯ ದಿನಕ್ಕಾಗಿ ಹೋರಾಡಿ ವೀರ ಮರಣ್ಣವನ್ನಪ್ಪಿದ ಧೀರರನ್ನು ನೆನೆದೆ ಕಂಬನಿ ಮಿಡಿದು ಆಚರಿಸುತ್ತಿದ್ದ ಆ ದಿನವನ್ನು ಇಂದು ಕೋಮುವಾದ ಮೂಲಕ ವಿಭಜಿಸಿ ವಿವಿಧ ಮತ ಧರ್ಮ ಭಾಷೆಗಳಿಗನುಣುವಾಗಿ ವಿಂಗಡಿಸಲಾಗುತ್ತಿದ್ದು ,ಇದು ವಿಷಾದನೀಯ. ಇಂತಹ ಸಂಧರ್ಭಗಳಲ್ಲಿ ಯುವ ಸಮೂಹಗಳು ಮುಂದೆ ಬಂದು , ಮುಂದಿನ ಪೀಳಿಗೆಗೆ ಚರಿತ್ರೆಯನ್ನು ತಿಳಿಯಪಡಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ ಐ ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಷರೀಫ್ ಕಾವು ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಜೀವನೋಪಾಯಕ್ಕೆ ಪ್ರವಾಸಿ ಪಟ್ಟದೊಂದಿಗೆ ಉದ್ಯೋಗದ ನಡುವೆಯೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮಲ್ಲಿರುವ ರಾಷ್ಟ್ರ ಪ್ರೇಮವನ್ನು ಎತ್ತಿ ತೋರಿಸುತ್ತಿದೆ . ಇಂದು ಮಾಧ್ಯಮಗಳ ಮುಂದೆ , ಇತರ ಕೋಮುವಾದಿ ಶಕ್ತಿಗಳ ಮುಂದೆ ನಮ್ಮ ಸಮುದಾಯವು ರಾಷ್ಟ್ರ ಪ್ರೇಮವನ್ನು ಅಳೆದು ತೂಗಿ ತೋರ್ಪಡಿಸುವಂತಹ ದುಸ್ಥಿತಿ ಬಂದಿರುವುದು ಖೇದಕರವಾಗಿದೆ.
ಅತ್ಯಂತ ಸಂತೋಷವನ್ನು ತೋರ್ಪಡಿಸಬೇಕಾದ ಈ ದಿನದಲ್ಲಿ ವೇದನೆಯನ್ನು ಅನುಭವಿಸಬೇಕಾಗಿರುವುದು ಇಂದು ಕೋಮುವಾದಿ ಶಕ್ತಿಗಳು ನಮ್ಮನ್ನು ರಾಷ್ಟ್ರ ವಿರೋಧಿಗಳಾಗಿ ಚಿತ್ರೀಕರಿಸಿ ಅದನ್ನೇ ಮಾಧ್ಯಮಗಳು ತೋರಿಸುತ್ತಿರುವುದರಿಂದ ಯುವ ಪೀಳಿಗೆಗಳು ಸ್ವಾತಂತ್ರ್ಯ ದಿನದ ಮಹತ್ವವನ್ನೇ ಅರಿಯದಂತಾಗಿದೆ. ಆದ್ದರಿಂದ ಯುವ ಸಮೂಹಗಳು ಚರಿತ್ರೆಯನ್ನು ಓದಿ ತಿಳಿದುಕೊಂಡು ನೈಜ ಸ್ವಾತಂತ್ರ್ಯ ದಿನವನ್ನು ಅರಿಯಬೇಕಾಗಿದೆ ಎಂದು ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು.

ನಂತರ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆ ರವರು ಮಾತನಾಡಿ , ದೇಶ ಪ್ರೇಮ ಎಂಬುದು ಈಮಾನಿನ ಒಂದು ಭಾಗವಾಗಿದ್ದು ಓರ್ವ ಪರಿಪೂರ್ಣ ಮುಸ್ಲಿಮನಾಗಿದ್ದಲ್ಲಿ ಆತ ಹೆತ್ತ ತಾಯಿ ಹೊತ್ತ ಭೂಮಿಯನ್ನು ಪ್ರೀತಿಸಿ ಗೌರವಿಸಬೇಕು. ದೇಶ ಪ್ರೇಮ ಎಂಬುದು ಇತರ ಸಹೋದರ ಸಮುದಾಯಗಳೆಡೆಯಲ್ಲಿ ತೋರ್ಪಡಿಕೆಗೆ ಮಾತ್ರವಾಗಿರದೆ ಹೃದಯಾಂತರಾಳದಿಂದ ಪ್ರೀತಿಸುವಂತಾಗಿರಬೇಕು ಎಂದರು. ಇಂದು ಭಾರತದಾದ್ಯಂತ ಮೂಲೆ ಮೂಲೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಿಡಿದು ಆಚರಿಸುತ್ತಿರುವ ಈ ಸಂಧರ್ಭದಲ್ಲಿ ಶಾಂತಿ ಸಹಬಾಳ್ವೆಯಾ ಸಂಖೇತ ವಾಗಿರುವ ಆಧ್ವಜದ ಅರ್ಥವನ್ನೇ ಅರಿಯದೆ ವಿನಾ ಅಶಾಂತಿ ಸೃಷ್ಠಿಸುತ್ತಿರುವ ಸಮೂಹಗಳು ಎಚ್ಛೆತ್ತುಕೊಳ್ಳಬೇಕಾಗಿದ್ದು ಅಂತಹವುಗಳನ್ನು ಹೆಮ್ಮೆಟ್ಟಿಸುವಲ್ಲಿ ನಮ್ಮ ಯುವ ಸಮೂಹವು ಮುಂದೆ ಬರಬೇಕಾಗಿದೆ ಎಂದರು. ಇದೆ ಸಂಧರ್ಭದಲ್ಲಿ ಕರ್ಣಾಟಕ ಇಸ್ಲಾಮಿಕ್ ಸೆಂಟರ್ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲೇ ವಿವಿಧ ಸ್ತರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು , ಬಹು ಭಾಷಾ ಪಾಂಡಿತ್ಯದೊಂದಿಗೆ ಭಾಷಣ ವೇದಿಕೆಗಳಲ್ಲಿ ನಮ್ಮ ಸಂಸ್ಥೆಯ ಹೆಸರನ್ನು ರಾರಾಜಿಸುವಂತೆ ಮಾಡಿದೆ. ಇವೆಲ್ಲವೂ ತಮ್ಮಂತಹ ನಿಸ್ವಾರ್ಥಿಗಳ ಸೇವಾ ಫಲವಾಗಿದೆ ಎನ್ನುತ್ತಾ , ಮುಂದೆಯೂ ತಮ್ಮ ಸಹಕಾರ ಪ್ರೋತ್ಸಾಹ ನಮ್ಮ ಸಂಸ್ಥೆಯೊಂದಿಗಿರಲಿ ಎಂದು ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ಬಾಸ್ ಕೇಕುಡೆ , ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗೂನಡ್ಕ , ದುಬೈ ಸಮಿತಿ ಕೋಶಾಧಿಕಾರಿ ಅಶ್ರಫ್ ಅರ್ತಿಕೆರೆ , ಸಹ ಕಾರ್ಯದರ್ಶಿ ಅಝೀಝ್ ಸೊಂಪಾಡಿ , ಕೆ ಐ ಸಿ ಕಟ್ಟಡ ಕಾಮಗಾರಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಸೀಫ್ ಮರೀಲ್ , ಅಲ್ ಕೌಸರ್ ಯೂತ್ ವಿಂಗ್ ನಿಕಟ ಪೂರ್ವ ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ , ಅಡ್ವಕೇಟ್ ಲತೀಫ್ ಕೂರ್ನಡ್ಕ ಮುಹಮ್ಮದ್ ಪೈವಳಿಕೆ, ಯೂತ್ ವಿಂಗ್ ಕಾರ್ಯಾಧ್ಯಕ್ಷರಾದ ಸಲೀಂ ಕೂರ ಬರೆಪ್ಪಾಡಿ, ಮೂರಕ್ಕಬಾದ್ ಘಟಕ ಕಾರ್ಯದರ್ಶಿ ರಫೀಕ್ ಮುಕ್ವೆ, ಮಾಧ್ಯಮ ಪ್ರತಿನಿಧಿ ಜಾಬೀರ್ ಬೆಟ್ಟಂಪಾಡಿ, ಝೈನುದ್ದೀನ್ ಮಾಂತೂರ್ , ರಹಿಮಾನ್ ಪೆರಾಜೆ , ಸಾದಿಕ್ ಅಜ್ಜಿನಡ್ಕ, ಇಸಾಕ್ ಸಾಲೆತ್ತೂರ್ , ಜಲೀಲ್ ವಿಟ್ಲ ಮೊದಲಾದವರು ಸ್ವಾತಂತ್ರ್ಯೋತ್ಸವ ದಿನದ ಮಹತ್ವದೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Comments are closed.