ಮಂಗಳೂರು, ಆ.17 : ನಗರದ ಪ್ರಸಿದ್ಧ ಹೂವಿನ ವ್ಯಾಪಾರಿಯೋರ್ವರ ಶವ ಪಚ್ಚನಾಡಿಯಲ್ಲಿರುವ ತಮ್ಮ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತರನ್ನು ನಗರದ ಕಾರ್‌ಸ್ಟ್ರೀಟ್‌ನಲ್ಲಿ ‘ಸಂಭ್ರಮ ಡೆಕೊರೇಟರ್‍ಸ್ ಆಂಡ್ ಫ್ಲವರ್ ಶಾಪ್’ ನಡೆಸುತ್ತಿದ್ದ ಜಯರಾಜ್ ಶೆಟ್ಟಿ (56) ಎಂದು ಗುರುತಿಸಲಾಗಿದ್ದು, ಇವರು ಇಂದು ಮುಂಜಾನೆ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮನೆಮಂದಿ ಬೆಳಗ್ಗೆದ್ದು ನೋಡಿದಾಗ ಜಯರಾಜ್ ಶೆಟ್ಟಿ ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ನಗರದಲ್ಲಿ ಪ್ರಸಿದ್ಧ ಹೂವಿನ ವ್ಯಾಪಾರಿಯಾಗಿ ಗುರುತಿಸಿಕೊಂಡಿರುವ ಜಯರಾಜ್ ಶೆಟ್ಟಿಯವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಇಂದು ಉಡುಪಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೂವಿನ ಅಲಂಕಾರವನ್ನು ವಹಿಸಿಕೊಂಡಿದ್ದರೆನ್ನಲಾಗಿದೆ. ಪಚ್ಚನಾಡಿಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ತಾಯಿಯ ಮನೆಯ ಪಕ್ಕದಲ್ಲೇ ನೂತನ ಮನೆ ಕಟ್ಟಿಸಿದ್ದರು. ಸ್ಥಳಕ್ಕೆ ಕಾವೂರು ಠಾಣಾ ಪೊಲೀಸರು ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.