ಕರಾವಳಿ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಕರ್ತವ್ಯಲೋಪವೆಸಗಿದ ಮಣಿಪಾಲ ಸಿಪಿಐ ಗಿರೀಶ್ ವಿಚಾರಣೆ?

Pinterest LinkedIn Tumblr

ಉಡುಪಿ: ಬಹುಕೋಟಿ ಉದ್ಯಮಿ, ಉಡುಪಿ ಮೂಲದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ತನಿಖಾಧಿಕಾರಿಯಾಗಿದ್ದ ಮಣಿಪಾಲ ಸಿಪಿಐ ಗಿರೀಶ್ ಅವರ ವರ್ಗಕ್ಕೆ ಸಾರ್ವಜನಿಕರಿಂದ ಕೂಗು ಕೇಳಿಬರುತ್ತಿದೆ.

Bhasakar Shetty_Murder Case_Officer Change (1)-horz

ಸಿಪಿಐ ಗಿರೀಶ್ ಅವರು ತನಿಖೆಯಲ್ಲಿ ವಿಳಂಭನೀತಿ ಅನುಸರಿಸಿ, ಲೋಪವೆಸಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದಲ್ಲದೇ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದರೆನ್ನಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಲಾಖೆಯ ಜೀಪಿನಲ್ಲಿ ತಾನು ಕೂರುವ ಸ್ಥಳವನ್ನು ಆರೋಪಿ ನವನೀತ್ ಶೆಟ್ಟಿಗೆ ಬಿಟ್ಟು ತಾನು ಜೀಪ್ ಹಿಂಭಾಗದಲ್ಲಿ ಕುಳಿತು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಠೀಕೆಗೆ ಒಳಗಾಗಿದ್ದರು.

ಇನ್ನು ಇವರ ಬಗ್ಗೆ ಆರೋಪವಿರುವ ಕಾರಣಕ್ಕೆ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಉಡುಪಿ ಎಸ್ಪಿ ಹೇಳಿದ್ದಾರೆ. ಇನ್ನು ಇವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಗೃಹಸಚಿವರಿಗೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

Comments are closed.