ಕರಾವಳಿ

ಶ್ಲಾಘನೀಯ ಸೇವೆಗಾಗಿ ರಾಷ್ಟ್ರಪತಿಗಳ ಪದಕಕ್ಕೆ ಅಯ್ಕೆಯಾದ 19 ಮಂದಿ ಪೊಲೀಸರ ವಿವರ

Pinterest LinkedIn Tumblr

karnataka-_Police_1

ಬೆಂಗಳೂರು, ಆ. 14: ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ ಪ್ರತಿಷ್ಠಿತ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪ್ರಶಸ್ತಿಗೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 19 ಮಂದಿ ಪೊಲೀಸ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ.

ಎ.ಎನ್.ಎಸ್.ಮೂರ್ತಿ(ಐಜಿಪಿ-ಐಎಸ್ಡಿ) ಬೆಂಗಳೂರು, ವಿಜಯಕುಮಾರ್ ಜಿ.ದಂಬಾಲ್(ಹೆಚ್ಚುವರಿ ಎಸ್ಪಿ) ಬಳ್ಳಾರಿ ಇವರು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಭಾಜರಾದ ಅಧಿಕಾರಿಗಳು ಎಂದು ತಿಳಿಸಲಾಗಿದೆ.

ಎಂ.ಎನ್.ನಾಗರಾಜ್-ಎಸ್ಪಿ ಬಾಗಲಕೋಟೆ, ಮಂಜುನಾಥ ಅಣ್ಣಿಗೇರಿ-ಎಸ್ಪಿ ಲೋಕಾಯುಕ್ತ, ಬದ್ರಿನಾಥ-ಎಸಿಪಿ ಕೆ.ಆರ್.ಪುರ ಉಪ ವಿಭಾಗ, ವಿನಯ್ ಅನಂತ್ ಗಾಂವಕರ್-ಎಸಿಪಿ, ವಿ.ಮರಿಯಪ್ಪ-ಎಸಿಪಿ, ಸೋಮಲಿಂಗಪ್ಪ-ಎಸಿಪಿ, ಸಿದ್ದಲಿಂಗಯ್ಯ -ಪಿಐ, ಎಂ.ಶಾಂತರಾಜು-ಪಿಐ, ಕೆ.ಎಸ್.ಪ್ರಾಣೇಶ್ ಮೂರ್ತಿ(ಪಿಎಸ್ಸೈ), ಪಿ. ನಾಗರಾಜ್-ಎಎಸ್ಸೈ.ಎಲ್.ಟಿ.ಮುದ್ದುರಾಜ್ ಅರಸ್, ಪದ್ಮನಾಭ, ಎ.ಎಂ.ಪಾಲಂಗಪ್ಪ, ಕೆ.ಇ.ಮ್ಯಾಥ್ಯೂ, ಸಿ. ಹಿರಿಣ್ಣಯ್ಯ, ಶ್ರೀಧರ್ ದೊಡ್ಡಿ, ಪ್ರಮೋದ್ ಎಸ್.ಧಗೆ ಸೇರಿದಂತೆ ಒಟ್ಟು 19 ಮಂದಿ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Comments are closed.