—ನಾಳೆ ಸ್ವಾತ೦ತ್ರ್ಯ ದಿನಾಚರಣೆ – ತಿರಂಗದ ಗೌರವವನ್ನು ಕಾಪಾಡಿರಿ—
ಸಾರ್ವಜನಿಕರು ತಿರ೦ಗವನ್ನು ತು೦ಬಾ ಹಗುರವಾಗಿಕಾಣುತ್ತಾರೆ ಎ೦ಬುದು ನಮಗೆಲ್ಲರಿಗೂಗೊತ್ತಿರುವ ವಿಷಯ. ನಮ್ಮದೇಶವು ಸ್ವತಂತ್ರಗೊಂಡು 69 ವರ್ಷಗಳಾಗುತ್ತಿವೆ.
ರಾಜಕೀಯ, ಸಾಮಾಜಿಕ, ಆರ್ಥಿಕ, ನ್ಯಾಯಯುತ ಇತ್ಯಾದಿ ಸ್ತರಗಳ ಕಾರುಬಾರುಗಳು ವ್ಯವಸ್ಥಿತವಾಗಿ ನಡೆಯಲು ಸಂವಿಧಾನವನ್ನು ರಚಿಸಲಾಗಿದ್ದರೂದೇಶದ ಮೇಲೆ ಅದರಯಾವುದೇ ಪರಿಣಾಮಕಂಡು ಬರುವುದಿಲ್ಲ.
ಗಣತ೦ತ್ರ ದಿವಸ, ಸ್ವಾತ೦ತ್ರ್ಯ ದಿವಸ ಮು೦ತಾದ ರಾಷ್ಟ್ರೀಯ ದಿವಸಗಳ೦ದು, ಸಂಜೆಯಾಗುವುದರೊಳಗೆ ಶಾಲೆಗಳ ವಠಾರ, ರಸ್ತೆ ಬದಿಗಳಲ್ಲಿ, ಕಛೇರಿಗಳ ಕಸದ ಬುಟ್ಟಿಯ ಒಳಗೆ ರಾಷ್ಟ್ರದ್ವಜ ಬಿದ್ದಿರುತ್ತವೆ. ದೊಡ್ಡವರು, ವಿದ್ಯಾರ್ಥಿಗಳು ಹಾಗೂ ಮಕ್ಕಳು ಆಕರ್ಷಣೆ ಎಂದು ಖರೀದಿಸಿದ ಈ ಧ್ವಜಗಳು ಸ್ವಲ್ಪ ದಿವಸದ ನಂತರ ಹರಿಯಲ್ಪಟ್ಟುರಸ್ತೆಯ ಮೇಲೆ, ರಸ್ತೆ ಬದಿಯಲ್ಲಿ, ಚರ೦ಡಿಯಲ್ಲಿ ಬಿದ್ದಿರುತ್ತವೆ.
ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸುವ ಅನೇಕರು ಕಟ್ಟಡಗಳ ಮೇಲೆ ವಾಹನಗಳ ಮೇಲೆ ಹಾರಿಸಿದ ಪವಿತ್ರ ರಾಷ್ಟ್ರಧ್ವಜವನ್ನು ಮರೆತು ಧ್ವಜದ ಬಣ್ಣ ಮಾಸಿ, ಅದರ ಮೇಲೆ ಕಾಗೆ-ಗುಬ್ಬಿಗಳು ಗಲೀಜು ಮಾಡಿದರೂ ಗಮನಿಸುವುದಿಲ್ಲ. ಇನ್ನು ಕೆಲವರು ಧ್ವಜವನ್ನು ಸಾಮಾನ್ಯ ಬಟ್ಟೆಯೆಂದು ವಾಹನಗಳನ್ನು ಒರೆಸುವ ಘೋರ ತಪ್ಪನ್ನು ಮಾಡುತ್ತಾರೆ.
ಇನ್ನು ನಮ್ಮ-ನಮ್ಮ ಮನೆಗಳಲ್ಲಿ ತಂದೆ-ತಾಯಿಯಂದಿರು, ಮಕ್ಕಳು ಧ್ವಜಗಳನ್ನು ಬಳಸಿ ಮರುದಿವಸ ಧ್ವಜವನ್ನು ನಮ್ಮ ಮನೆಯ ಒಳಗೆ, ಅಂಗಳಗಲ್ಲಿ ಬಿಸಾಡಿ ನಂತರಅದನ್ನು ಗುಡಿಸಿಕೊಂಡು ಬೆಂಕಿಗೆ, ಕಸದ ಬುಟ್ಟಿಗೆ ಹಾಕುವುದು ಕಾಣುತ್ತೇವೆ. ಸಾರ್ವಜನಿಕರು ಖಾದಿ ರಾಷ್ಟ್ರಧ್ವಜ ಬದಲು ಪ್ಲ್ಯಾಸ್ಟಿಕ್, ನ್ಯೆಲಾನ್, ಕಾಗದದಿಂದ ತಯಾರಿಸಲಾದ, ಸರಿಯಾದ ಅಳತೆಗಳಿಲ್ಲದ ಮತ್ತು ಕೇಸರಿ, ಬಿಳಿ, ಹಸಿರು ತಿರಂಗ ಬಣ್ಣಗಳಿಲ್ಲದ ರಾಷ್ಟ್ರ ಧ್ವಜಗಳನ್ನು ಉಪಯೋಗಿಸುವುದು. ಅಲ್ಲದೆ ರಾಷ್ಟ್ರಧ್ವಜ ಅವರೋಹಣ ನಂತರ ನಿಯಮಕ್ಕನುಸಾರ ಮಡಚದೆ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಮಡಚಿ ಇಡುವುದು ಸರ್ವೇಸಾಮಾನ್ಯವಾಗಿದೆ.
ಆಗಸ್ಟ್ 15 ಮತ್ತುಜನವರಿ 26 ರ ರಾಷ್ಟ್ರೀಯ ಹಬ್ಬದ ದಿನಗಳಂದು ವ್ಯಾವಹಾರಿಕ ಲಾಭಕ್ಕಾಗಿ ಸಣ್ಣ ಸಣ್ಣ ಧ್ವಜಗಳನ್ನು ಮಾರಾಟ ಮಾಡುವುದು ಕೂಡ ರಾಷ್ಟ್ರಧ್ವಜದ ದುರುಪಯೋಗವಾಗಿದೆ ಜೊತೆಗೆಅಪರಾಧವಾಗಿದೆ.
1. ಅಭಿಮಾನ್ಯ ಶೂನ್ಯದೇಶದಜನತೆ.
ಪ್ರತಿ ವರ್ಷವೂ ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ವಿಶೇಷ ದಿನಗಳಾದ ಆಗಸ್ಟ್ 15 ಹಾಗೂ ಜನವರಿ 26 ಬ೦ದು ಹೋಗುತ್ತವೆ. ನಾವು ಈ ಎರಡು ದಿನಗಳನ್ನು ಇನ್ನೆರಡು ರಜಾ ದಿನಗಳಾಗಿ ಭಾವಿಸುತ್ತೇವೆಯೋ ಅಥವಾ ದೇಶಾಭಿಮಾನವಿರುತ್ತದೆಯೋ? ಒ೦ದು ಕಡೆ ಶಾಲೆಯ ಮಕ್ಕಳು, ಬೆಳಗಿನ ಜಾವ ಬೇಗನೆ ಎದ್ದು ಧ್ವಜಾರೋಹಣ ಮಾಡಲು ಸಿದ್ಧರಾಗುತ್ತಾರೆ. ಇನ್ನೊ೦ದೆಡೆ ಕೆಲ ಜನತೆ ಈ ಎರಡು ದಿನಗಳನ್ನು ರಜಾ ದಿನಗಳೆ೦ದು ಭಾವಿಸಿ ದಿನವನ್ನು ತಮ್ಮದೆ ಆದ ರೀತಿಯಲ್ಲಿ ಕಳೆಯುತ್ತಾರೆ. ಇ೦ಥ ಜನರು ರಾಷ್ಟ್ರಗೀತೆಯನ್ನೂ ಮರೆತಿರುವುದರಲ್ಲಿ ಸ೦ದೇಹವೇ ಇಲ್ಲ.ರಾಜಮುದ್ರೆಯ ಅಭಿಮಾನವು ಪ್ರತಿಯೊಬ್ಬ ಭಾರತೀಯನಿಗೆ ಇರಬೇಕು. ಜನರು ಭಾರತದ ರಾಜಮುದ್ರೆಯ ಅಭ್ಯಾಸವನ್ನು ಮಾಡಿರುವುದುಕಂಡು ಬರುವುದಿಲ್ಲ. ಇಂದಿನ ರಾಜ್ಯಕರ್ತರೂಇದರ ಮಾಹಿತಿಯನ್ನು ಶಾಲೆಯ ಪಠ್ಯಪುಸ್ತಕಗಳ ಮೂಲಕ ಕಲಿಸುವುದಿಲ್ಲ. ಅದಕ್ಕಾಗಿ ಈ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
2. ದೇಶದರಾಷ್ಟ್ರದ್ವಜವು ಎಲ್ಲಿ ತಯಾರಾಗುತ್ತದೆ?
ಧ್ವಜವನ್ನು ತಯಾರಿಸಲು ಹಾಗೂ ಉಪಯೋಗಿಸಲು ಹಲವಾರು ನಿಯಮಗಳಿವೆ. ಧ್ವಜವನ್ನು ನಮ್ಮರಾಜ್ಯದ, ಧಾರವಾಡ ಜಿಲ್ಲೆಯ ಗದಗ ಮತ್ತು ಹುಬ್ಬಳ್ಳಿಯಲ್ಲಿರುವ ಬೆಂಗೇರಿ ಎಂಬ ಗ್ರಾಮದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಧ್ವಜಗಳು ಖಾದಿ ಮತ್ತು ಹಳ್ಳಿಗಳ ಔದ್ಯೋಗಿಕ ಕಮೀಷನ್ ಹಾಗೂ ಭಾರತೀಯ ನಿಯಾಮಾವಳಿಗಳ ಬ್ಯೂರೋಗಳ, ನಿಯಮಾವಳಿಗಳ ಪ್ರಕಾರಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ vಯಾರಿಸುತ್ತದೆ ಮತ್ತುಅಧಿಕೃತವಾಗಿ ಸರಕಾದಿಂದ ಮಾನ್ಯತೆ ಪಡೆದಿರುತ್ತದೆ.
3. ರಾಷ್ಟ್ರದ್ವಜವನ್ನುಯಾರು ತಯಾರಿಸಿದರು ಮತ್ತು ಯಾವಾಗ ?ಅದರ ಇತರ ಚರಿತ್ರೆ:
ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಿಸಿದವರು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಪಿಂಗಾಲಿ ವೆಂಕಯ್ಯನವರು. ಗಣತಂತ್ರ ದಿವಸ ಹಾಗೂ ಸ್ವಾತಂತ್ರ್ಯ ದಿವಸದಂದು ಮಾತ್ರರಾಷ್ಟ್ರಧ್ವಜವನ್ನು ಹಾರಿಸಲು ಭಾರತೀಯ ನಾಗರೀಕರಿಗೆ ಅನುಮತಿ ಇತ್ತು. ಆದರೆ ೨೦೦೨ರ ಜನವರಿ ೧೫ ರಿಂದ ನಾಗರೀಕರು ಪ್ರತಿ ದಿವಸವು ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ನೀಡಲಾಯಿತು. ದೆಹಲಿಯ ಉಚ್ಛ ನ್ಯಾಯಾಲಯವು ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಆದೇಶಿಸಿತು.
4. ತಿರಂಗದತ್ರಿವರ್ಣಧ್ವಜದವಿವಿಧ ಬಣ್ಣಗಳ ಮಹತ್ವ ಮತ್ತುಅದರ ಭಾವಾರ್ಥ.
ಕೇಸರಿ- ತ್ಯಾಗ ಹಾಗೂ ಶೌರ್ಯದ ಸಂಕೇತ, ಬಿಳಿ- ಶಾಂತಿ ಮತ್ತು ಸೌಹಾರ್ದತೆ ಸಂಕೇತ, ಹಸಿರು- ಸಮೃದ್ದಿಯ ಸಂಕೇತ, ನಡುವಿನ ೨೪ ಕಡ್ಡಿಗಳ (ಅರೆಗಳು) ಚಕ್ರ ಪ್ರಗತಿಯ ಸಂಕೇತ.
5. ರಾಷ್ಟ್ರಧ್ವಜವನ್ನು ಹಾರಿಸುವ ಮತ್ತು ಇಳಿಸುವ ಪದ್ದತಿಗಳು.
ರಾಷ್ಟ್ರದ್ವಜ ಏರಿಸುವಾಗ ಚುರುಕಾಗಿ ಮತ್ತು ಇಳಿಸುವಾಗ ನಿಧಾನವಾಗಿ ಇಳಿಸಬೇಕು ಮತ್ತು ಕಟ್ಟಡದ ಮೇಲೆ ರಾಷ್ಟ್ರದ್ವಜ ಹಾರಿಸಿದಾಗ ಅದು ಸ್ಪಷ್ಟವಾಗಿ ಕಾಣುತ್ತಿರಬೇಕು.
6. ರಾಷ್ಟ್ರಧ್ವಜವನ್ನುಯಾವಾಗ ಹಾರಿಸಬೇಕು ಮತ್ತುಯಾವಾಗ ಇಳಿಸಬೇಕು.
ಸೂರ್ಯೋದಯದ ನಂತರ ಹಾರಿಸಬೇಕು ಮತ್ತು ಸೂರ್ಯ ಮುಳುಗುವ ಮೊದಲು ಇಳಿಸಬೇಕು.
7. ದೇಶದರಾಷ್ಟ್ರಧ್ವಜವು ನಡೆದು ಬಂದದಾರಿ ಮತ್ತುಅದರ ಮಹತ್ವಪೂರ್ಣ ಘಟನೆಗಳು.
1. 1931ರಲ್ಲಿ ಕರಾಚಿಯಲ್ಲಿ ನಡೆದ ರಾಷ್ಟ್ರೀಯ ಸಭೆಯಲ್ಲಿ ಕೇಸರಿ, ಬಿಳಿ, ಹಸಿರು ನಡುವೆ ಚರಕದ ಚಿಹ್ನೆ ಇರುವ ಧ್ವಜವು ಅಂಗೀಕೃತವಾಯಿತು.
2. ನಂತರ 1931 ನೇ ಇಸವಿಯಲ್ಲಿ ಪೂರ್ಣಕೇಸರಿ ಮತು ಚರಕ ಚಿಹ್ನೆ ಇರುವ ಧ್ವಜವನ್ನು ಮಾಡಲಾಯಿತು. 1921ರಲ್ಲಿ ಬಿಳಿ, ಮಧ್ಯದಲ್ಲಿ ಹಸಿರು ಮತ್ತು ಕೇಸರಿ ಬಣ್ಣದ ಧ್ವಜವನ್ನು ಮಾಡಲಾಯಿತು.
3. 1907ರಲ್ಲಿ ಹಸಿರು, ಕೇಸರಿ ಬಣ್ಣದ ಧ್ವಜ ಇದರಲ್ಲಿ ಕೇಸರಿ ಬಣ್ಣದ ಮೇಲೆ ಸೂರ್ಯ, ಚಂದ್ರರ ಚಿಹ್ನೆ ಮತ್ತು ವಂದೇಮಾತರಂ ಎಂಬ ಘೋಷಣೆಯನ್ನು ಬರೆಯಲಾಗಿತ್ತು.
4. ಕೊನೆಯಾದಾಗಿ ನಮ್ಮ ರಾಷ್ಟ್ರಧ್ವಜವನ್ನು 1947ರ ಜುಲೈ 22ರ೦ದು ಭಾರತದ ಸಂವಿಧಾನ ಪರಿಷತ್ತು ಮೇಲ್ಬಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ, ಕೆಳಗೆ ಹಸಿರು ಮತ್ತು ಬಿಳಿಯ ಬಣ್ಣದ ನಡುವೆ ಅಶೋಕ ಚಕ್ರ ಲಾಂಛನವಿರುವ ತಿರಂಗಧ್ವಜವನ್ನು ಸ್ವೀಕರಿಸಿತು.
5. ದೆಹಲಿಯಕೆಂಪುಕೋಟೆಯ ಮೇಲೆ 1947 ರಆಗಸ್ಟ್ 15ರಂದು ಪ್ರಥಮ ಬಾರಿಗೆ ರಾಷ್ಟ್ರಧ್ವಜವನ್ನು ಏರಿಸಿದರು.
8. ರಾಷ್ಟ್ರದ್ವಜಕ್ಕೆ ಸಂಬಂಧಿಸಿದ ಕೆಲವು ಪಾಲಿಸಬೇಕಾದ ನೀತಿ ಮತ್ತು ನಿಯಮಗಳು.
1. ಧ್ವಜವನ್ನು ಕೇವಲ ಒ೦ಭತ್ತು ಅಳತೆಗಳಲ್ಲಿ ತಯಾರಿಸಬಹುದು. ಈ ಅಳತೆಗಳ ವಿವರ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ ಪುಸ್ತಕದಲಿ ಇದೆ.ಅದರ ಆಕಾರ ಈ ಕೆಳಗಿನಂತಿದೆ.
Flag Size No. Dimensions in mm
- 6300 X 4200 mm
- 3600 X 2400 mm
- 2700 X 1800 mm
- 1800 X 1200 mm
- 1350 X 900 mm
- 900 X 600 mm
- 450 X 300 mm for aircrafts on VVIP flights
- 225 X 150 mm for motor-cars
- 150 X 100 mm for table flags.
1. ಬಣ್ಣದ ಪ್ರಮಾಣವು ನಿಯಮಾವಳಿಗಳ ಪ್ರಕಾರವೇ ಇರಬೇಕು.
2. ರಾಷ್ಟ್ರಧ್ವಜದಉದ್ದ ಮತ್ತು ಅಗಲ ಅಳತೆಗಳು 2:3 ಪ್ರಮಾಣದಲ್ಲೇಇರಬೇಕು.
3. ರಾಷ್ಟ್ರಧ್ವಜ ಕೇವಲ ಚರಕದಿ೦ದಲೇ ತಯಾರಿಸತಕ್ಕದ್ದು.
4. ಹತ್ತಿ, ಉಣ್ಣೆ, ರೇಷ್ಮೆ ಹಾಗೂ ಖಾದಿಯಿ೦ದಲೇ ತಯಾರಿಸತಕ್ಕದ್ದು.
5. ಧ್ವಜವು ಹಾರಬೇಕಾದರೆ, ಘನತೆಯ ಸ್ಥಾನದಲ್ಲಿರಬೇಕು.
6. ಹರಿದಅಥವಾ ಸುಕ್ಕಾದ ಧ್ವಜವನ್ನು ಉಪಯೋಗಿಸಬಾರದು.
7. ತೋರಣ, ಗುಚ್ಛ ಅಥವಾ ಪತಾಕೆಯಂತೆ, ಅಲಂಕಾರಕ್ಕೆಂದು ಧ್ವಜವನ್ನು ಯಾವುದೇ ಸಮಯದಲ್ಲಿ ಬಳಸಬಾರದು.
8. ಅದೇರೀತಿಇತರ ಬಣ್ಣದ ಬಟ್ಟೆಯ ತುಂಡುಗಳನ್ನು ರಾಷ್ಟ್ರಧ್ವಜದಂತೆ ಕಾಣುವ ರೀತಿಯಲ್ಲಿ ಜೋಡಿಸಬಾರದು.
9. ಕೇಸರಿ ಬಣ್ಣದ ಪಟ್ಟಿಯನ್ನು ಕೆಳಗಡೆ ಮಾಡಿಧ್ವಜವನ್ನು ಹಾರಿಸಬಾರದು.
10. ಧ್ವಜವು ನೆಲಕ್ಕೆ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಬೇಕು.
11. ಧ್ವಜ ಹರಿದು ಹೋಗದಂತೆ ಜಾಗ್ರತೆವಹಿಸಬೇಕು.
12. ರಾಷ್ಟ್ರಧ್ವಜದ ಅಯೋಗ್ಯ ಬಳಕೆ ಆಗದಂತೆ ತಡೆಯಬೇಕು. ಉದಾ: ಟೀ ಶರ್ಟಿನ ಮೇಲೆ ಧ್ವಜದ ಮೂರು ಪಟ್ಟಿಗಳನ್ನು ಹಾಕುವುದು, ಜಾಹೀರಾತುಗಳಲ್ಲಿ ವ್ಯಾಪಾರೀ ದೃಷ್ಟಿಯಿಂದ ಧ್ವಜದ ಉಪಯೋಗ ಮಾಡುವುದು, ನಮ್ಮಿಂದ ಧ್ವಜದ ಅಪಮಾನವಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.
13. ರಾಷ್ಟ್ರಧ್ವಜದಕ್ಕೆ ಅಪಮಾನ ಮಾಡಿದರೆ 3 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ರಾಷ್ಟ್ರಧ್ವಜದ ಬಹಿರಂಗ ಮಾರಾಟ ಮತ್ತು ಮಾರಾಟದ ನಂತರ ಆಗುವ ಅವಮಾನ ಒಂದು ಹೊಸ ಫ್ಯಾಶನ್ ಆಗಿದೆ. ಇದು ಅಯೋಗ್ಯ ರೂಢಿಯಾಗಿದೆ. ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಬೇರೆ ಬೇರೆ ಆಕಾರದ ಕಾಗದದ ಧ್ವಜಗಳನ್ನು ಪೇಟೆಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ. ಸಣ್ಣ ಮಕ್ಕಳೊಂದಿಗೆ ಅನೇಕ ವ್ಯಕ್ತಿಗಳು, ರಾಷ್ಟ್ರಭಕ್ತಿಯಿಂದ ಮತು ಉತ್ಸಾಹದಿಂದ ಕಾಗದದ ಚಿಕ್ಕ ಧ್ವಜಗಳನ್ನು ಖರೀದಿಸುತ್ತಾರೆ. ಈ ಧ್ವಜಗಳನ್ನು ಖರೀದಿಸಿ, ಉಪಯೋಗಿಸಿದ ಬಳಿಕ ತಮಗೆ ತೋಚಿದ ಕಡೆಗಳಲ್ಲಿ ಅಸ್ತವ್ಯಸ್ತವಾಗಿ ನಿಯಮವನ್ನು ಕಡೆಗಣಿಸಿ ಬಿಸಾಡಲಾಗುತ್ತದೆ. ಕೇವಲ ಆಕರ್ಷಣೆ ಎಂದು ಖರೀದಿಸಿದ ಈ ಧ್ವಜಗಳು ಸ್ವಲ್ಪ ದಿವಸದ ನಂತರ ಹರಿಯಲ್ಪಟು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಹಾಗೂ ಇತರ ಕಡೆಗಳಲ್ಲಿ ಎಸೆಯಲಾಗುತ್ತದೆ. ಅನೇಕ ವೇಳೆ ಈ ಧ್ವಜಗಳನ್ನು ಕಸದ ಜೊತೆ ಸುಟ್ಟು ಹಾಕಲಾಗುತ್ತದೆ. ಇದನ್ನೆಲ್ಲ ಮಾಡುವಾಗ ತಾವು ರಾಷ್ಟ್ರಧ್ವಜದ ಅರ್ಥಾತ್ ದೇಶದ ಅವಮಾನವನ್ನು ಮಾಡುತ್ತಿದ್ದೇವೆ ಎನ್ನುವುದನ್ನು ನಾಗರಿಕರು ಮರೆಯುತ್ತಿದ್ದಾರೆ.
ನಮ್ಮ ರಾಷ್ಟ್ರಧ್ವಜದ ಮಾನವನ್ನು ನಾವೇ ಕಾಪಾಡ ಬೇಕು, ದೇಶದ ಗೌರವವನ್ನು ಉಳಿಸಬೇಕು. ಧ್ವಜದ, ರಾಷ್ಟ್ರದ ಅವಮಾನ ಆಗಬಾರದೆಂದು ಬ್ರಿಟಿಷರು ಕೊಟ್ಟ ತೊಂದರೆಗಳನ್ನು ಲಕ್ಷಾಂತರ ದೇಶಭಕ್ತರು ಸಹಿಸಿದ್ದರು. ರಾಷ್ಟ್ರಧ್ವಜಕ್ಕೆ ವಂದಿಸಿ ನಮ್ಮೊಳಗೆ ದೇಶಪ್ರೇಮದ ಜ್ಯೋತಿಯನ್ನು ಪ್ರಜ್ವಲಿಸೋಣ.
ಭಾರತದ ಆದರ್ಶ ಸಂಸ್ಕ ತಿ ಮತ್ತು ಪರಂಪರೆ:
ಭಾರತದ ಶ್ರೇಷ್ಠ ಮತ್ತು ಆದರ್ಶ ಸಂಸ್ಕೃತಿ ಹಾಗೂ ಪರಂಪರೆಯು ಭಾರತೀಯರ ಮನಸ್ಸಿನಲ್ಲಿ ಸಹಜವಾಗಿ ಮೂಡಬೇಕೆಂದು ಈಶ್ವರನ ಆಯೋಜನೆಯಂತೆ ರಾಜಮುದ್ರೆಯನ್ನು ನಿರ್ಮಿಸಲಾಗಿದೆ. ಭಾರತದ ನೋಟು ಹಾಗೂ ನಾಣ್ಯಗಳ ಮೇಲೆ ಅದನ್ನು ಮುದ್ರಿಸಲಾಗಿದೆ. ಈ ರಾಜಮುದ್ರೆಯ ಅಭಿಮಾನವು ಪ್ರತಿಯೊಬ್ಬ ಭಾರತೀಯನಿಗೆ ಇರಬೇಕು.
1.ರಾಜಮುದ್ರೆಯಲ್ಲಿನ ಚಿಹ್ನೆಗಳು
ಅ.ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ನಿಂತಿರುವ ಸಿಂಹಗಳು (ಮಧ್ಯ ಭಾಗದಲ್ಲಿನ ಸಿಂಹದ ಹಿಂದೆ ಇನ್ನೊಂದು ಸಿಂಹ ಇದೆ, ಆದರೆ ಚಿತ್ರದಲ್ಲಿ ಮೂರು ಸಿಂಹಗಳು ಕಾಣಿಸುತ್ತವೆ.)
ಆ.ಅದರ ಕೆಳಗೆ ಒಂದು ಚಕ್ರ
ಇ.ಮತ್ತು ಕೊನೆಗೆ `ಸತ್ಯಮೇವಜಯತೆ|’ ಎಂಬ ಧ್ಯೇಯವಾಕ್ಯ
2.ರಾಜಮುದ್ರೆಯ ಚಿಹ್ನೆಗಳ ಅಭ್ಯಾಸ.
2ಅ.ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ನಿಂತಿರುವ ಸಿಂಹಗಳ ವೈಶಿಷ್ಟ್ಯಗಳು: ಭಾರತದ ರಾಜಮುದ್ರೆಗಾಗಿ ಸಿಂಹವನ್ನೇ ಏಕೆ ಆರಿಸಲಾಯಿತು, ಸಿಂಹದ ವೈಶಿಷ್ಟ್ಯಗಳೇನು? ಎಂಬುದನ್ನು ಈಗ ನೋಡೋಣ.
2ಅ1.ಶೂರ ಮತ್ತು ಪರಾಕ್ರಮಿ: ಸಿಂಹವು ಶೂರ ಹಾಗೂ ಪರಾಕ್ರಮಿಯಾಗಿದೆ. (ಭಾರತವು ಸಿಂಹದಂತಹ ಶೂರ ಹಾಗೂ ಪರಾಕ್ರಮಿ ಯೋಧರ ದೇಶವಾಗಿದೆ.)
2ಅ2.ಎಲ್ಲರ ಮೇಲೆ ರಾಜ್ಯ ಮಾಡುವವನು: ಸಿಂಹಕ್ಕೆ ಅದರಲ್ಲಿರುವ ಗುಣದಿಂದಾಗಿ `ಕಾಡಿನರಾಜ’ ಎಂಬ ಬಿರುದು ಪ್ರಾಪ್ತವಾಗಿದೆ. ಭಾರತ ಸಂಪೂರ್ಣ ವಿಶ್ವದ ಮೇಲೆ ರಾಜ್ಯವಾಳುವ ಮತು ಅಧಿಕಾರವನ್ನು ನಿಭಾಯಿಸಬಲ್ಲ ಕ್ಷಮತೆ ಇರುವ ದೇಶವಾಗಿದೆ.
2ಅ3.ತನ್ನ ಶಕ್ತಿಯನ್ನು ಯೋಗ್ಯ ಸ್ಥಳದಲ್ಲಿ ಉಪಯೋಗಿಸುವುದು: ಸಿಂಹವು ತನಗೆ ಹಸಿವೆಯಾಗದೇ ಬೇಟೆಯಾಡಿ ತನ್ನ ಶಕ್ತಿಯನ್ನು ವ್ಯಯ ಮಾಡುವುದಿಲ್ಲ. ಹಸಿವೆ ಇಲ್ಲದಿರುವಾಗ ಅದರ ಮುಂದೆ ಬೇಟೆಯ ಪಶು ಬಂದು ನಿಂತರೂ ಅದು ಅದರ ಕಡೆಗೆ ನೋಡುವುದಿಲ್ಲ. ಭಾರತವು ಶಾಂತಿಪ್ರಿಯ ದೇಶವಾಗಿರುವುದರಿಂದ ಅದುಕಾರಣವಿಲ್ಲದೇ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿ ತನ್ನ ಶಕ್ತಿಯನ್ನು ವ್ಯಯಗೊಳಿಸುವುದಿಲ್ಲ.
2ಅ4.ಶತ್ರುವನ್ನು ಸೋಲಿಸುವುದು: ಸಿಂಹಕ್ಕೆ ಹಸಿವೆಯಾದಾಗ ಬೇಟೆಯ ಪಶುವು ಎಲ್ಲೇ ಹಾಗೂ ಎಷ್ಟೇ ಸುರಕ್ಷಿತ ಸ್ಥಳದಲ್ಲಿ ಅಡಗಿ ಕುಳಿತಿದ್ದರೂ ಸಿಂಹವು ಅದರ ಸುಳಿವನ್ನು ಕಂಡು ಹಿಡಿದುಅದನ್ನು ಭಕ್ಷಿಸುತ್ತದೆ. ಸಮಯ ಬಂದಾಗ ಭಾರತಕ್ಕೆ ತನ್ನ ಮೇಲೆ ಸತತ ಆಕ್ರಮಣ ಮಾಡುವ ದೇಶವನ್ನು ಪರಾಭವಗೊಳಿಸಿ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವಿದೆ.
2ಅ5.ಕೇವಲ ಅವಶ್ಯವಿದ್ದುದನ್ನು ಮಾಡುವುದು: ಸಿಂಹವು ತನಗೆ ಪ್ರಾಪ್ತವಾದ ಭಕ್ಷವನ್ನು ಸಂಪೂರ್ಣ ತಿನ್ನದೇ ಅದರಲ್ಲಿನ ಕೆಲವು ಮಹತ್ವದ ಭಾಗವನ್ನು ಮಾತ್ರ ತಿನ್ನುತ್ತದೆ, ಅದನ್ನು ನಾವು `ಸಿಂಹಪಾಲು’ ಎಂದು ಹೇಳುತ್ತೇವೆ
Comments are closed.