ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳಾದ ನಿರಂಜನ ಭಟ್ ಹಾಗೂ ರಾಜೇಶ್ವರಿ ಅವರು ಕೊಲೆ ಮಾಡುವ ಸಂದರ್ಭ ಧರಿಸಿದ್ದರೆನ್ನಲಾದರಕ್ತದ ಕಲೆಗಳಿರುವ ಬಟ್ಟೆಗಳು ನಿಟ್ಟೆಯ ಲಾಂಡ್ರಿಯೊಂದರಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಕೊಲೆಯ ಸಂದರ್ಭದ ತರುವಾಯ ನಿರಂಜನನು ಧರಿಸಿದ್ದ ಅಂಗಿ, ಧೋತಿ, ರಾಜೇಶ್ವರಿಯ ಚೂಡಿದಾರದ ಪ್ಯಾಂಟ್ ಲಾಂಡ್ರಿಯಲ್ಲಿ ಪತ್ತೆಯಾಗಿವೆ. ರಕ್ತದ ಕಲೆಗಳನ್ನು ಮಾಸಲು ವಾಶ್ ಮಾಡಲು ಲಾಂಡ್ರಿಗೆ ನೀಡಲಾಗಿರಬಹುದು ಎಂದು ಶಂಕಿಸಲಾಗಿದೆ. ಪತ್ತೆಯಾದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ನವನೀತನ ವಸ್ತ್ರಗಳು ಸಿಕ್ಕಿದೆಯೇ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಗುರುವಾರ ಅಧೀಕಾರ ಸ್ವೀಕರಿಸಿದ ಬಳಿಕ ಉಡುಪಿ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಭಾಸ್ಕರ್ ಶೆಟ್ಟಿ ಪ್ರಕರಣದ ತನಿಖೆಯತ್ತ ವಿಶೇಶ ಗಮನ ನೀಡಿದ್ದಾರೆ. ಅಧಿಕಾರಿಗಳಿಂದ ಪ್ರತಿದಿನ ಮಾಹಿತಿ ಪಡೆದು ಮರುದಿನದ ತನಿಖೆಗೆ ನಿರ್ದೇಶನವನ್ನೂ ನೀಡುತ್ತಿದ್ದಾರೆ. ಶನಿವಾರ ಸ್ವತಃ ಅವರು ನಂದಳಿಕೆ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಎಸ್‌ಪಿ ತನಿಖಾಧಿಕಾರಿಯಾಗಿದ್ದು, ಇಬ್ಬರು ಇನ್ಸ್‌ಪೆಕ್ಟರ್, ಓರ್ವ ಡಿವೈಎಸ್‌ಪಿ ನೇತೃತ್ವದ ಒಟ್ಟು 3 ತಂಡಗಳು ತನಿಖಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.
Comments are closed.