ಮುಂಬಯಿ: ಬಾಲಿವುಡ್‌ನಲ್ಲಿ ಮದ್ವೆ ಮನೆ ಸರದಿಯಲ್ಲಿ ಸಾಗಿದೆ. ಪ್ರೀತಿ ಜಿಂಟಾ, ಬಿಪಾಶಾ ಬಸು ಮದ್ವೆ ಮುಗಿದ ಬಳಿಕ ಇದೀಗ ಸೋನಾಕ್ಷಿ ಸಿನ್ಹಾ ಮದುವಣಗಿತ್ತಿ ಆಗ್ತಿದ್ದಾರಂತೆ. ಉದ್ಯಮಿ ಬಂಟಿ ಸಚ್ದೇವ್ ಜೊತೆ ಸೋನಾಕ್ಷಿ ಎಂಗೇಜ್ ಆಗ್ತಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡ್ತಿದೆ
. ‘ಅಕಿರಾ’, ‘ಫೋರ್ಸ್ 2’ಚಿತ್ರೀಕರಣ ಮುಗಿಸಿರುವ ಸೋನಾಕ್ಷಿ ‘ನೂರ್’ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಇದರ ಹೊರತಾಗಿ ಸದ್ಯದ ಮಟ್ಟಿಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸೋನಾಕ್ಷಿ ಆಪ್ತರ ಬಳಿ ಹೇಳುತ್ತಿದ್ದಾಳಂತೆ.ಅಲ್ಲದೆ, ಅಂದುಕೊಂಡಂತೆ ಆಗಿದ್ದಿದ್ದರೆ ಅರ್ಜುನ್ ಕಪೂರ್ ಜೊತೆಗೆ ಒಂದು ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಅರ್ಜುನ್ ಕಪೂರ್ ಸೋನಾಕ್ಷಿಯ ಬಾಯ್ಫ್ರೆಂಡ್ ಬೇರೆ.
ಇದು ತನ್ನ ಖಾಸಗಿ ಬದುಕಿಗೆ ಬೇರೆ ಸಂದೇಶ ರವಾನಿಸಬಾರದೆಂಬ ಕಾರಣಕ್ಕೆ ಅರ್ಜುನ್ ಜೊತೆ ದಂಬಾಗ್ ಚೆಲುವೆ ನಟಿಸುತ್ತಿಲ್ವಂತೆ. ಬಂಟಿ ಸಚ್ದೇವ್ ಈ ಹಿಂದೆ ಸುಶ್ಮಿತಾ ಸೇನ್ ಜೊತೆ ತಿರುಗಾಡಿ ಸುದ್ದಿಯಲ್ಲಿದ್ದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರಿಗೆ ಸೆಲೆಬ್ರಿಟಿ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಈಗ ಇವರ ಪ್ರೇಮಬಲೆಗೆ ಬಂಟಿ ಬಿದ್ದಿದ್ದಾರೆಂದು ಹೇಳಲಾಗ್ತಿದೆ. ಹೌದಾ, ಸೋನಾಕ್ಷಿ ಸುತ್ತಮುತ್ತ ಹಬ್ಬಿರುವ ಈ ಸುದ್ದಿ ನಿಜವಾ?
Comments are closed.