ಕುಂದಾಪುರ: ಭಾರತವು ವಿಭಜನೆಯತ್ತ ದಾಪುಗಾಲಿಡುತ್ತಿದ್ದು, ದೇಶವನ್ನು ಭಯೋತ್ಪಾದನೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಕಾಡುತ್ತಿದೆ. ಭಯೋತ್ಪಾದನೆ ಎನ್ನುವುದು ಜನರ ಮನೆಬಾಗಿಲಿಗೆ ಮುಟ್ಟುವಷ್ಟರ ಮಟ್ಟಿಗೆ ಬೆಳೆದಿದ್ದು ಈ ಬಗ್ಗೆ ಹಿಂದೂ ಸಮಾಜ ಜಾಗ್ರತಗೊಳ್ಳಬೇಕಿದೆ ಎಂದು ಭಜರಂಗದಳ ರಾಜ್ಯ ಪ್ರಮುಖರಾದ ಮಂಜುನಾಥ ಮಂಡ್ಯ ಹೇಳಿದ್ದಾರೆ.
ಅವರು ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟೇಶ್ವರ ವಲಯದ ವತಿಯಿಂದ ಅಖಂಡಭಾರತ ಸಂಕಲ್ಪ ದಿನಾಚರಣೆ ಮತ್ತು ಪಂಜಿನ ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಮಾತುಗಳನ್ನಾಡಿದರು.
ಭಾರತ ದೇಶದಲ್ಲಿ 6000 ಸ್ಲೀಪಿಂಗ್ ಸೆಲ್ಲ್ ಸಕ್ರೀಯವಾಗಿದ್ದು ಭಯೋತ್ಪಾದನೆಯಂತಹ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದೆಯೆಂಬುದನ್ನು ಹಿಂದೂಸಮಾಜ ಅರಿಯಬೇಕು. ಹಿಂದೂ ಸಮಾಜದ ನಿಷ್ಕ್ರೀಯತೆಯಿಂದಾಗಿ ಸಮಾಜವನ್ನು ಕೆಳಮಟ್ಟಕ್ಕೆ ತಳ್ಳುವ ವ್ಯವಸ್ಥಿತ ಹುನ್ನಾರ ಹಾಗೂ ಹಿಂದೂಗಳನ್ನು ಒಗ್ಗಟ್ಟಾಗಲು ಬಿಡದೇ ವಿಭಜಿಸುವ ಪಿತೂರಿಗಳು ನಡೆಯುತ್ತಿದೆ. ದೇಶದ ನಾಯಕರೆನಿಸಿಕೊಂಡವರು ಹಿಂದುತ್ವವನ್ನು ಮರೆತು ಕೇವಲ ಅಭಿವೃದ್ಧಿ ಎಂದು ಭಾಷಣ ಮಾಡಿದರೇ ದೇಶ ಮುಂದಿನ ದಿನಗಳಲ್ಲಿ ಅದಪಥಃನದತ್ತ ಸಾಗುವುದರಲ್ಲಿ ಸಂಶಯವಿಲ್ಲ. ಭಾರತ ಭಾರತವಾಗಿ ಉಳಿದರೇ ಮಾತ್ರ ಭಾರತ ದೇಶ ಪ್ರಜ್ವಲಿಸಲು ಸಾಧ್ಯ ಎಂದರು.
೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿ ಮುನ್ನೂರು ವರ್ಷಗಳ ಬ್ರಿಟೀಷ್ ದಾಸ್ಯದಿಂದ ಭಾರತ ದೇಶಕ್ಕೆ ಮುಕ್ತಿ ಸಿಕ್ಕಿದ ಆ ಸಂಭ್ರಮವನ್ನು ಆಚರಿಸಲು ದೇಶದಲ್ಲಿ ಸಜ್ಜು ನಡೇಯುತ್ತಿದೆ. ಆದರೇ ಈ ಸ್ವಾತಂತ್ರ್ಯ ಪಡೆಯುವುದಕ್ಕೋಸ್ಕರ ಹಲವರ ತ್ಯಾಗ ಹಾಗೂ ಬಲಿದಾನಗಳು ಶ್ರಮಗಳನ್ನು ಇಂದಿನ ಯುವಪೀಳಿಗೆ ಅರಿಯಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಜೀವನವನ್ನು ಪಣವಾಗಿಟ್ಟ ಭಗತ್ ಸಿಂಗ್ ತ್ಯಾಗ ಹಾಗೂ ಬಲಿದಾನಗಳು ಯುವಕರಿಗೆ ಮಾದರಿಯಾಗಬೇಕಿದೆ ಎಂದರು. ಈ ಮೂಲಕ ಯುವಕರು ಸಂಘಟನೆ ಕೆಲಸ ತಮ್ಮ ಕೆಲಸವೆಂಬ ಭಾವನೆಯಲ್ಲಿ ಮುನ್ನುಗ್ಗಿ ಸಮರ್ಥ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕೆಂದರು.
ಕೋಟೇಶ್ವರ ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಭಜರಂಗದಳ ಮುಖಂಡ ಸಂತೋಷ್ ಕುಂದಾಪುರ, ರಾಜೇಶ್ ಕೋಟೇಶ್ವರ ಉಪಸ್ಥಿತರಿದ್ದರು.
ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟೇಶ್ವರ ವಲಯದ ಅಧ್ಯಕ್ಷ ಕಿರಣ್ ಕುಮಾರ್ ಕಟ್ಕೆರೆ ಸ್ವಾಗತಿಸಿ, ಭರತ್ ವೈಯಕ್ತಿಕ ಗೀತೆ ಹಾಡಿದರು. ಧನಂಜಯ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮಕ್ಕೂ ಮೊದಲು ಕೋಟೇಶ್ವರ ಸರಕಾರಿ ಶಾಲೆ ಎದುರುಗಡೆಯಿಂದ ಪ್ರಾರಂಭಗೊಂಡ ಪಂಜಿನ ಮೆರವಣಿಗೆಯು ಹೆದ್ದಾರಿ ಮೂಲಕ ಸಾಗಿ ಕೋಟೇಶ್ವರ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಸ್ಥಳೀಯರಾದ ಸುಧಾಕರ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.
Comments are closed.