ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಆರೋಪಿ ನಂದಳಿಕೆ ನಿರಂಜನ ಭಟ್ (26) ಹೊಟ್ಟೆಯಲ್ಲಿದ್ದ ಕಿವಿಯೋಲೆ(ಟಿಕ್ಕಿ)ಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಗುರುವಾರ ಸಂಜೆ ಕೊಲೊನಾಸ್ಕೋಪಿ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ. ದೇಹಕ್ಕೆ ಏನೂ ತೊಂದರೆ ಕಂಡುಬರದ ಕಾರಣ ಆತನನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಮೊದಲಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ನಿರಂಜನನ ಹೊಟ್ಟೆಧಿಯಲ್ಲಿದ್ದ 1 ಉಂಗುರ ಮತ್ತು 1 ಕಿವಿಯೋಲೆ ಮಂಗಳವಾರ ಸಾಯಂಕಾಲ ನೈಸರ್ಗಿಕವಾಗಿಯೇ ಹೊರಬಂದಿತ್ತು. ಇನ್ನೊಂದು ಕಿವಿಯೋಲೆ ಮಾತ್ರ ಹೊಟ್ಟೆಯಲ್ಲಿ ಸಿಕ್ಕಿಬಿದ್ದಿರುವುದು ಎಕ್ಸ್‌ರೇ ಮೂಲಕ ಗೊತ್ತಾಗಿತ್ತು. ಅದಕ್ಕಾಗಿ ಹೆಚ್ಚಿನ ಚಿಕಿತ್ಸೆಗೆ ಬುಧವಾರ ಸಂಜೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕಿವಿಯೋಲೆಯನ್ನು ಹೊರತೆಗೆಯುವ ಸಲುವಾಗಿ ಹೊಟ್ಟೆಯನ್ನು ಕ್ಲೀನ್ ಮಾಡಿ ಸೂಕ್ಷ್ಮ ಲೈಟ್ ಹಾಯಿಸಿ ನೀಡುವ ಕೊಲೊನಾಸ್ಕೋಪಿ ಚಿಕಿತ್ಸೆಯನ್ನು ಆರಂಭಿಸಿ ಅರ್ಧ ಗಂಟೆಯೊಳಗೆ ಕಿವಿಯೋಲೆಯನ್ನು ಹೊರಗೆ ತೆಗೆದರು. ಆರೋಗ್ಯದಲ್ಲಿ ಚೇತರಿಕೆ ಇರುವ ಕಾರಣ ನಿರಂಜನನನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆ ಇದೆ. ಮತ್ತು ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.
Comments are closed.