ಬೆಂಗಳೂರು: ಆತ ಆಕಾಶದಲ್ಲಿ ಹಾರಿ ವಿದೇಶಕ್ಕೆ ಹೋಗಿ ಸೇರಬೇಕಿದ್ದವನು. ಅದೇನಾಯ್ತೋ ಕೊನೆಯ ಗಳಿಗೆಯಲ್ಲಿ ಆತ ಮನೆಗೆ ಹಿಂದಿರುಗಿದ್ದ. ಆದರೆ ಮತ್ತೆ ಬಂದವನ್ನು ವಿದೇಶಕ್ಕೂ ಹೋಗಲು ಬಿಡದ ವಿಧಿ ಮಸಣಕ್ಕೆ ಕರೆದೊಯ್ದಿದೆ. ಹಾಗಾದರೆ ಅಲ್ಲಿ ನಡೆದಿದ್ದಾದರೂ ಏನು?
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ನವೀನ್ ಕುಮಾರ್ಗೆ ಇನ್ನೂ 21 ವರ್ಷ. ಎಂಜಿನಿಯರಿಂಗ್ ಮುಗಿಸಿ ಹೈಯರ್ ಎಜುಕೇಶನ್ಗಾಗಿ ವಿದೇಶಕ್ಕೆ ತೆರಳಬೇಕಿತ್ತು. ಮೊನ್ನೆಯೇ ಏರ್ಪೋರ್ಟ್ಗೂ ಹೋಗಿದ್ದ ಆದ್ರೆ ಟ್ರಾವೆಲ್ ಏಜನ್ಸಿ ಯಿಂದ ಮರುದಿನಕ್ಕೆ ಟಿಕೆಟ್ ಬುಕ್ ಆಗಿದ್ದರಿಂದ ವಾಪಸಾಗಿದ್ದ. ಫಾರಿನ್’ಗೆ ಹೋದರೆ ವಾಪಸ್ ಅಂದುಕೊಂಡಂತೆ ಬರೋಕಾಗಲ್ಲ. ಹಾಗಾಗಿ, ಹೇಗೂ ಹೋಗಲು ಇನ್ನೂ ಒಂದು ದಿನ ಇದೆ ಎಂದು ಸ್ನೇಹಿತರು ಸಂಬಂಧಿಕರ ಜೊತೆ ಒಂದು ಗೆಟ್ ಟುಗೆದರ್ ಸಹ ಆಯೋಜಿಸಲಾಗಿತ್ತು. ಖುಷಿಯಲ್ಲೇ ಇದ್ದ ನವೀನ್ ಫೋನ್ ಬಂತು ಎಂದು ಮಾತನಾಡಲು ಕಟ್ಟಡದ ಮಹಡಿಗೆ ಹೋಗಿದ್ದ. ಅದೇನಾಯ್ತೋ ಗೊತ್ತಿಲ್ಲ ನೋಡ ನೋಡುತ್ತಿದ್ದಂತೆ ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಫೋನ್ ಕಾಲ್ ಬಂದಾಗ ಆತ ಗಾಬರಿಯಲ್ಲಿ ಕಟ್ಟಡದ ಮೇಲೆ ಓಡಿದ್ದ. ಯಾಕಪ್ಪಾ ಮನೆ ಮೇಲೆ ಹೋಗ್ತಿದ್ದಿ ಎಂದು ಮನೆಯವರು ಕೇಳಿದಾಗ, ನೆಟವರ್ಕ್ ಪ್ರಾಬ್ಲಮ್ ಎಂದು ಓಡಿ ಮೇಲೆ ಹೋಗಿದ್ದ. ಆತ ಗಾಬರಿಯಲ್ಲಿ ಇದ್ದಿದ್ದು ಕಂಡು ವಿದೇಶ ವ್ಯಾಸಾಂಗಕ್ಕಾಗಿ ಕಟ್ಟಿದ್ದ 50 ಲಕ್ಷ ಹಣ ಮೋಸ ಆಗಿದ್ಯಾ ಎಂಬ ಅನುಮಾನ ಕುಟುಂಬಸ್ಥರದ್ದು.
ಇನ್ನು ನವೀನ್ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ಬಾಳಿ ಬದುಕಬೇಕಿದ್ದ ವಿನಯ್ ಕುಮಾರ್ ಆಯತಪ್ಪಿ ಬಿದ್ದನಾ ಅಥವಾ ಆತ್ಮಹತ್ಯೆ ಮಾಡಿಕೊಂಡನಾ ಎಂಬುದು ಪೊಲೀಸ್ ತನಿಖೆಯಿಂದಷ್ಟೆ ತಿಳಿಯಬೇಕಿದೆ.
Comments are closed.