ಉಡುಪಿ: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
(ಬಂಧಿತರಾದ ರಾಜೇಶ್ವರೀ, ನವನೀತ್ ಶೆಟ್ಟಿ, ನಿರಂಜನ್ ಭಟ್)
(ಬಂಧಿತನಾದ ಶ್ರೀನಿವಾಸ್ ಭಟ್)
ಮೂರನೇ ಆರೋಪಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ. ಸಾಕ್ಷ್ಯ ನಾಶ ಆರೋಪದಡಿ ಮಣಿಪಾಲ ಪೊಲೀಸರಿಂದ ಬಂಧನವಾಗಿದ್ದು, ಭಾಸ್ಕರ್ ಶೆಟ್ಟಿ ಕೊಲೆ ವಿಚಾರವನ್ನು ಮರೆ ಮಾಚಿದ್ದು ಮತ್ತು ಶವವನ್ನು ನಾಪತ್ತೆ ಮಾಡುವಲ್ಲಿ ಸಹಕರಿಸಿ ತನಿಖೆಯ ದಿಕ್ಕು ತಪ್ಪಿಸಿದ ಆರೋಪ ಇವರ ಮೇಲಿದೆ.
(ಪೊಲೀಸರ ತನಿಖೆಯ ಜಾಡು)
ಸೌದಿಯಲ್ಲಿ ಸೂಪರ್ ಮಾರ್ಕೇಟ್ ಹೊಂದಿದ್ದ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಆಸ್ತಿ ವಿಚಾರವಾಗಿ ಜುಲೈ28ರಂದು ಪುತ್ರ, ಪತ್ನಿ ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂದಪಟ್ಟ ಹಾಗೆ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಇನ್ನು ಆಸ್ತಿಗಾಗಿ ಕೊಲೆ ನಡೆಸಿದ್ದ ತಾಯಿ, ಮಗನಿಗೆ ಸಹಾಯ ಮಾಡಿದ್ದ ಜ್ಯೋತಿಷಿ ನಿರಂಜನ್ ಭಟ್ ಎಂಬುವ ಸೋ ಕಾಲ್ಡ್ ಜ್ಯೋತಿಷಿಯನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು.
ಭಾಸ್ಕರ್ ಶೆಟ್ಟಿ ಸ್ವಗೃಹ ಇಂದ್ರಾಳಿ ಗ್ರಾಮದ ಹಯಗ್ರೀವ ನಗರದ ಮನೆಯಲ್ಲಿ ಕೊಲೆ ನಡೆದಿತ್ತು. ನಿರಂಜನ್ ಭಟ್ ಮನೆಯಲ್ಲಿನ ಹೋಮಕುಂಡದಲಿ ಶವವನು ಧಹಿಸಲಾಗಿತ್ತು.
Comments are closed.