ಕರಾವಳಿ

ಬಸ್ ಉದ್ಯಮಿ ನಾರಯಣ್ ಆಳ್ವ ನಾಪತ್ತೆ : ನೇತ್ರಾವತಿ ಸೇತುವೆ ಬಳಿ ಕಾರು ಪತ್ತೆ : ಆತ್ಮಹತ್ಯೆ ಶಂಕೆ!..

Pinterest LinkedIn Tumblr

Bus_man_missing_1

ಮಂಗಳೂರಿನ ಬಸ್ ಉದ್ಯಮಿ ಜಪ್ಪಿನಮೊಗರು ನಿವಾಸಿ ನಾರಯಣ್ ಆಳ್ವ (60) ಅವರ ಕಾರು ಪತ್ತೆ ಉಳ್ಳಾಲ ಸಮೀಪದ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದ್ದು, ಆಳ್ವ ಅವರು ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣ ಆಳ್ವ ಅವರು ಬೆಳಗ್ಗೆ ಮನೆಯಿಂದ ಹೊರಟಿದ್ದರು. ಬಳಿಕ ಆಳ್ವ ಏಕಾಏಕಿ ನಾಪತ್ತೆಯಾಗಿದ್ದರು. ಇಂದು ನೇತ್ರಾವತಿ ನದಿ ಕಿನಾರೆಯಲ್ಲಿ ಆಳ್ವರ ಕಾರು ಪತ್ತೆಯಾಗಿದೆ.

Bus_man_missing_2 Bus_man_missing_3 Bus_man_missing_5 Bus_man_missing_6 Bus_man_missing_7 Bus_man_missing_8 Bus_man_missing_4

ಇದೀಗ ಆತಂಕಿತರಾಗಿರುವ ಮನೆಯವರು ನಾರಾಯಣ ಆಳ್ವ ಅವರು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ನೇತ್ರಾವತಿ ನದಿ ಕಿನಾರೆಯಲ್ಲಿ ಆಳ್ವ ಅವರ ಕಾರು ಪತ್ತೆಯಾಗಿರುವುದರಿಂದ ಆಳ್ವರು ಆತ್ಮಹತ್ಯೆ ಮಾಡಿಕೊಂಡಿರ ಬೇಕೆಂಬ ಶಂಕೆ ವ್ಯಕ್ತವಾಗಿದ್ದು, ನೇತ್ರಾವತಿ ನದಿಯಲ್ಲಿ ವ್ಯಾಪಕ ಶೋಧ ಮುಂದುವರಿದಿದೆ.

Comments are closed.