ಅಂತರಾಷ್ಟ್ರೀಯ

ಒಲಂಪಿಕ್ಸ್ ಅಂಗಳದಲ್ಲಿ ಪರಸ್ಪರ ಚುಂಬನ : ಲಿಂಗಭೇದವಿಲ್ಲದೇ ನಡೆದೆ ಹೋಯಿತು ಮದುವೆ ನಿಶ್ಚಯ

Pinterest LinkedIn Tumblr

Rio_olampic_kissing_1

ರಿಯೋ ಡಿ ಜನೈರೋ : ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬದಲ್ಲಿ ಹಲವಾರು ದಾಖಲೆಗಳು ನಡೆದಿರುವಂತೆಯೇ, ಕುತೂಹಲಕಾರಿ ಘಟನೆಗಳೂ ಕೂಡ ನಡೆದಿದ್ದು, ಅಂತಹ ಒಂದು ಪ್ರಕರಣ ಇಲ್ಲಿದೆ.

ಬ್ರೆಜಿಲ್ ನ ರಗ್ಬಿ ಸೆವೆನ್ ಅಂಗಳದಲ್ಲಿ ಮಹಿಳೆಯರಿಬ್ಬರ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಇಬ್ಬರೂ ಮದುವೆಯಾಗಲು ಒಪ್ಪಿಕೊಂಡಿದ್ದು, ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಸಹಮತ ಸೂಚಿಸಿದ್ದಾರೆ.

Rio_olampic_kissing_2

ಇವರಿಬ್ಬರ ಚುಂಬನದ ಕ್ಷಣವನ್ನು ಅಲ್ಲಿದ್ದ ಕ್ಯಾಮೆರಾಗಳು ಒಂದೇ ಉಸಿರಿನಲ್ಲಿ ಸೆರೆ ಹಿಡಿದಿವೆ. ರಗ್ಬಿ ಸೆವೆನ್ ಆಟಗಾರ್ತಿಯಾಗಿರುವ ಬ್ರೆಜಿಲ್ ನ ಇಸಾದೊರಾ ಸೆರೆಲ್ಲೋ ರಗ್ಬಿಯ ಫೈನಲ್ ಪಂದ್ಯ ನಡೆದ ದಿಯೋದಾರೋ ಸ್ಟೇಡಿಯಂ ವ್ಯವಸ್ಥಾಪಕಿ ಮಾರ್ಜೆರಿ ಏನ್ಯಾ ಅವರಿಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾಳೆ.

ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು, ರಗ್ಬಿ ಫೈನಲ್ ಪಂದ್ಯ ಮುಗಿದ ನಂತರ, ಅಂಗಳದಲ್ಲೇ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿ, ಚುಂಬಿಸಿಕೊಂಡಿದ್ದು, ಪ್ರೀತಿಗೆ ಜಾತಿ, ಮತ, ಅಂತಸ್ತು ಮಾತ್ರವಲ್ಲ, ಲಿಂಗಭೇದವೂ ಎಂಬುದನ್ನು ಸಾರಿದ್ದಾರೆ ಎಂದು ಹೇಳಲಾಗಿದೆ. ಒಲಿಂಪಿಕ್ಸ್ ನಲ್ಲಿ ಸಲಿಂಗಿ, ತೃತೀಯ ಲಿಂಗಿ ಅಥ್ಲೀಟ್ ಗಳು ಹಾಗೂ ಮೂವರು ಕೋಚ್ ಗಳು ಭಾಗವಹಿಸಿದ್ದಾರೆ.

Comments are closed.