ಅಂತರಾಷ್ಟ್ರೀಯ

ಯುವ ಮೆರಿಡಿಯನ್ ಬೇ ರಿಸಾರ್ಟ್ ಎಂಡ್ ಸ್ಪಾ; ಇಂಡಿಯಾ ಹಾಸ್ಪಿಟಾಲಿಟಿ 2016ರ ಬೆಸ್ಟ್ ರೆಸಾರ್ಟ್ ಪ್ರಶಸ್ತಿ ಹಾಗೂ ಐ‌ಎಸ್‌ಓ ಪ್ರಶಸ್ತಿ

Pinterest LinkedIn Tumblr

ಕುಂದಾಪುರ: ಯುವ ಮೆರಿಡಿಯನ್ ಎನ್ನುವ ಹೆಸರನ್ನು ಕಳೆದ ಮೂರು ವರ್ಷಗಳಿಂದ ಕೇಳಿದ್ದೀರಿ. ಹಲವಾರು ಸಂದರ್ಭಗಳಲ್ಲಿ ನೀವು ಅಲ್ಲಿಗೆ ಭೇಟಿ ಕೊಟ್ಟಿದ್ದೀರಿ. ಲಕ್ಷುರಿಯಾದ ಸಭಾಂಗಣಗಳು ಹಾಗೂ ಹೋಟೆಲ್ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಅಷ್ಟಕ್ಕೇ ಯುವ ಮೆರಿಡಿಯನ್ ಸೀಮಿತವಾಗಿಲ್ಲ. ಬದಲಾಗಿ ಇದೀಗ ಯುವ ಮೆರಿಡಿಯನ್ ಗ್ರೂಫ್ ಆರಂಭಗೊಂಡ ಮೂರೇ ವರ್ಷಕ್ಕೆ ಎರಡೆರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

UVA_Meridian_Award (1) UVA_Meridian_Award (8) UVA_Meridian_Award (2) UVA_Meridian_Award (3) UVA_Meridian_Award (6) UVA_Meridian_Award (7) UVA_Meridian_Award (5) UVA_Meridian_Award (4)

ಇದೀಗ ಸಾಧನೆಯ ಹಾದಿಯಲ್ಲಿ ತನ್ನದೇ ದೃಷ್ಟಿಕೋನದೊಂದಿಗೆ ಹೆಜ್ಜೆ ಹಾಕುತ್ತಿರುವ ಯುವ ಮೆರಡಿಯನ್ ಸಂಸ್ಥೆಯನ್ನು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ದೆಹಲಿಯ ಡಿಡಿಪಿ ಎನ್ನುವ ಸಂಸ್ಥೆಯು ಹೋಟೆಲ್ ವಿಭಾಗದ ವಿವಿಧ ಕ್ಷೇತ್ರಗಳಲ್ಲಿಪ್ರತಿ ವರ್ಷ ಕೊಡಮಾಡುವ ದಕ್ಷಿಣ ಹಾಗೂ ಪಶ್ಚಿಮ ಭಾರತದ ಪ್ರತಿಷ್ಟಿತ `ಇಂಡಿಯಾ ಹಾಸ್ಪಿಟಾಲಿಟಿ ಅವಾರ್ಡ್- 2016ರ ಬೆಸ್ಟ್ ರೆಸಾರ್ಟ್ ಸ್ಪಾ’ ಪ್ರಶಸ್ತಿಗೆ ರಾಜ್ಯದ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಒಂದಾದ ಕುಂದಾಪುರದ ಕೋಟೇಶ್ವರದಲ್ಲಿರುವ ಯುವ ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ ಆಯ್ಕೆಯಾಗಿದ್ದು, ಆಗಸ್ಟ್ ನಾಲ್ಕರಂದು ಪೂನಾದ ಸುಸಜ್ಜಿತ ಹೋಟೆಲ್ ನೋವೋಟೆಲ್‌ನಲ್ಲಿ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕಳೆದ ವರ್ಷವೇ ಡಿಡಿಪಿ ಸಂಸ್ಥೆಯು ದಕ್ಷಿಣ ಹಾಗೂ ಪಶ್ಚಿಮ ಭಾರತದ ಪ್ರತಿಷ್ಟಿತ ಪಂಚತಾರಾ ಹೋಟೆಲ್‌ಗಳೂ ಸೇರಿದಂತೆ ಹೋಟೆಲ್ ಉದ್ಯಮದ ವಿವಿಧ ವಿಭಾಗಗಳಲ್ಲಿ ಮುಂಚೂಣಿಯಲ್ಲಿರುವ ನೂರಕ್ಕೂ ಹೆಚ್ಚು ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಗುರುತು ಹಾಕಿತ್ತು. ನಂತರ ಡಿಡಿಪಿ ಸಂಸ್ಥೆಯು ಈ ಬಗ್ಗೆ ನಾಮನಿರ್ದೇಶನಗೊಂಡ ಸಂಸ್ಥೆ, ಹೊಟೇಲ್, ರೆಸಾರ್ಟ್‌ಗಳನ್ನು ಸರ್ವೇ ಮಾಡುತ್ತದೆ. ಅದಾದ ನಂತರ ಆನ್‌ಲೈನ್ ಸರ್ವೆ ಹಾಗೂ ಗ್ರಾಹಕರಿಂದ ಅಂತರ್ಜಾಲದ ಮೂಲಕ ವೋಟಿಂಗ್ ಪ್ರಕ್ರಿಯೆ ನಡೆಸುತ್ತದೆ. ಕೊನೆಯಲ್ಲಿ ಡಿಡಿಪಿ ಸಂಸ್ಥೆಯು ವಿವಿಧ ಕ್ಷೇತ್ರದಲ್ಲಿ ಹೆಚ್ಚು ಗುಣಮಟ್ಟವನ್ನು ಕಾಯ್ದುಕೊಂಡ ಸಂಸ್ಥೆಗಳಿಗೆ ಪ್ರಶಸ್ತಿ ನೀಡುತ್ತದೆ.

2016ರ ಸಾಲಿನ ಅತ್ಯುತ್ತಮ ರೆಸಾರ್ಟ್ ಪ್ರಶಸ್ತಿಯನ್ನು ಯುವ ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ಪಡೆದುಕೊಳ್ಳುವ ಮೂಲಕ ಕರಾವಳಿ ಮಾತ್ರವಲ್ಲ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಂತಾಗಿದೆ. ಹೋಟೇಲ್ ಉದ್ಯಮಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಯುವ ಉದ್ಯಮಿಗಳಿಗೆ ಈ ಪ್ರಶಸ್ತಿ ಪ್ರೇರಣೆಯಾಗಿದೆ ಎಂದರೆ ಆಶ್ಚರ್ಯವಿಲ್ಲ.

ಇದರ ಜೊತೆ ಜೊತೆಗೆ ಯುವ ಮೆರಿಡಿಯನ್ ಸಂಸ್ಥೆಗೆ ಅಂತಾರಾಷ್ಟ್ರೀಯ ಆಹಾರ ಗುಣಮಟ್ಟವನ್ನು ಹೊಂದಿದೆ ಎನ್ನುವ ಐ‌ಎಸ್‌ಓ 22000 ಪ್ರಮಾಣ ಪತ್ರ ಲಭಿಸಿದೆ. ಕಳೆದ ಮೂರೂವರೆ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯುವ ಮೆರಿಡಿಯನ್‌ಗೆ ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ಅಂತರ್ರಾಷ್ಟ್ರೀಯ ಪ್ರಮಾಣ ಪತ್ರ ಐ‌ಎಸ್‌ಓ 22000 : 2005 ಲಭಿಸಿದೆ. ಐ‌ಎಸ್‌ಓ ಪ್ರಮಾಣಪತ್ರದಿಂದಾಗಿ ಕುಂದಾಪುರವನ್ನು ಯುವ ಮೆರಿಡಿಯನ್ ಮೂಲಕ ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಗುರುತಿಸಿಕೊಳ್ಳುವಿಕೆಗೆ ಸಹಕಾರಿಯಾಗಿದೆ. ಗ್ರಾಹಕರು ಹಾಗೂ ಮಾಧ್ಯಮಗಳ ಸಹಕಾರಗಳು ಪ್ರಶಸ್ತಿ ಲಭಿಸಲು ಕಾರಣವಾಗಿದೆ. ಜೊತೆಗೆ ಇಲಾಖೆ ಮತ್ತು ಸಾರ್ವಜನಿಕರ ಸಹಕಾರವನ್ನು ಈ ಸಂದರ್ಭದಲ್ಲಿ ಸಂಸ್ಥೆ ಸ್ಮರಿಸುತ್ತದೆ ಎಂದು ಯುವ ಮೆರಿಡಿಯನ್ ಸಂಸ್ಥೆ ಹೇಳಿಕೊಂಡಿದೆ.

ಒಟ್ಟಾರೆಯಾಗಿ ಕುಂದಾಪುರವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಕಾರಣವಾದ ಯುವ ಉದ್ಯಮಿಗಳಾದ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸೋಣ.

Comments are closed.