ರಿಯೊ ಡಿ ಜನೈರೊ: ಆ.09: ‘ನನಗೆ ಶೂಟಿಂಗ್ ಸಾಕಾಗಿದೆ. ‘ಇನ್ಮುಂದೆ ಹವ್ಯಾಸಕ್ಕೂ ಶೂಟಿಂಗ್ ಮಾಡುವುದಿಲ್ಲ’ ಎಂದು ರಿಯೋ ನಿರಾಸೆಯನ್ನು ಅಭಿನವ್ ಬಿಂದ್ರಾ ಬಿಚ್ಚಿಟ್ಟಿದ್ದಾರೆ.
ಹೌದು, ‘ನನಗೆ ಶೂಟಿಂಗ್ ಸಾಕಾಗಿದೆ. ಇನ್ನು ಮುಂದೆ ಹವ್ಯಾಸಕ್ಕೂ ಶೂಟಿಂಗ್ ಮಾಡುವುದಿಲ್ಲ’ ಎಂದು ಹೇಳುವ ಮೂಲಕ ಭಾರತದ ಹೆಮ್ಮೆಯ ಶೂಟರ್ ಅಭಿನವ್ ಬಿಂದ್ರಾ ತಮ್ಮ ರಿಯೋ ಒಲಂಪಿಕ್ಸ್ ಪದಕದ ನಿರಾಸೆಯನ್ನು ಹೊರ ಹಾಕಿದ ಪರಿ ಇದು.
ಭಾರತ ಬಾವುಟ ಹಿಡಿದು ತಂಡದ ಸಾರಥ್ಯವಹಿಸಿ ಉದ್ಘಾಟನೆ ಪಂದ್ಯದಲ್ಲಿ ಹೆಜ್ಜೆ ಹಾಕಿ, ರಿಯೊ ಒಲಂಪಿಕ್ಸ್ ನಲ್ಲಿ ಪದಕದ ಆಸೆ ಹೊತ್ತು ಸಾಗಿದ್ದ ಶೂಟರ್ ಬಿಂದ್ರಾ ಅವರು, ನಿನ್ನೇ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕೂದಲು ಎಳೆಯ ಅಂತರದಿಂದ ಪದಕ ವಂಚಿತರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಬಿಜೀಂಗ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದು ದೇಶದ ಕೀರ್ತಿಯನ್ನು ಜಗತ್ತಿಗೆ ತೋರಿಸಿದ್ದ ಬಿಂದ್ರಾ, ಈ ಬಾರಿಯೂ ಚಿನ್ನದ ಪದಕದ ಮೇಲೆ ಆಸೆ ಇಟ್ಟಿದ್ದರು. ಆದರೆ ಕೊನೆ ಕ್ಷಣದಲ್ಲಿ ನಿಖರತೆ ತಪ್ಪಿದ ಪರಿಣಾಮ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಅನುಭವಿಸಿದ್ದರು. ಅಂತೆಯೇ ಭಾರತದ ಪಾಲಿಗೆ ಬಿಂದ್ರಾರಿಂದ ಪಶಸ್ತಿ ಬರುವುದು ಖಚಿತ ಎಂದು ಎಲ್ಲರೂ ತಿಳಿಸಿದ್ದರು.
Comments are closed.