ಕರಾವಳಿ

ಕುಮಾರಧಾರ ಸೇತುವೆಯಿಂದ ನದಿಗುರುಳಿ ಬಿದ್ದ ಗ್ಯಾಸ್ ಟ್ಯಾಂಕರ್ : ಗ್ಯಾಸ್ ಸೋರಿಕೆ ಹಿನ್ನೆಲೆ ನದಿ ನೀರು ಬಳಸದಂತೆ ಎಚ್ಚರಿಕೆ

Pinterest LinkedIn Tumblr

Gas-Tanker_Palty_1

ಉಪ್ಪಿನಂಗಡಿ, ಆ.9: ಉಪ್ಪಿನಂಗಡಿ ಸಮೀಪದ ಉದನೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾಂಕರೊಂದು ಕುಮಾರಧಾರ ಸೇತುವೆ ಮೇಲಿನಿಂದ ಕೆಳಗುರುಳಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಸಂಭವಿಸಿದೆ.

ಉರುಳಿ ಬಿದ್ದ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿರುವ ಹಿನ್ನೆಲಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ತುಂಬಿಕೊಂಡು ಸಾಗುತ್ತಿದ್ದ ಎಚ್.ಪಿ.ಸಿ.ಎಲ್ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಉಪ್ಪಿನಂಗಡಿ ಸಮೀಪದ ಉದನೆ ಬಳಿಯಿರುವ ಕುಮಾರಧಾರ ಸೇತುವೆ ಮೇಲೇ ಸಾಗುತ್ತಿದ್ದಾಗ ಅಪಘಾತವೊಂದನ್ನು ತಪ್ಪಿಸುವ ಸಲುವಾಗಿ ಚಾಲಕ ಬ್ರೆಕ್ ಹಾಕಿದಾಗ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ನಿಂದ ಅನಿಲ ತುಂಬಿರುವ ಕಂಟೈನರ್ ಬೇರ್ಪಟ್ಟು ನದಿಗುರುಳಿ ಬಿದ್ದಿದೆ. ಈ ಕಂಟೈನರನ್ನು ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆ ನಿಂತುದ್ದರಿಂದ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿ ಎರಡು ತಾಸಿಗೂ ಹೆಚ್ಚು ಸಮಯ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

Gas-Tanker_Palty_2

ಉರುಳಿ ಬಿದ್ದ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಿಯರಲ್ಲಿ ಆತಂಕ ಸೃಷ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾದ ಸ್ಥಳದ ಪಕ್ಕದಲ್ಲೇ ಶಾಲೆಯೊಂದಿದ್ದು,ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಾಗಿದೆ. ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಪರಿಸರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.

ಟ್ಯಾಂಕರ್ ನಿಂದ ಸೋರಿಕೆಯಾಗುತ್ತಿರುವ ಅನಿಲ್ ಕುಮಾರಧಾರಾ ನದಿಯಲ್ಲಿ ಸೇರಿಕೊಂಡಿದ್ದು, ಜೊತೆಗೆ ಇದರಲ್ಲಿದ್ದ ಪೆಟ್ರೋಲ್ ಕೂಡ ನದಿ ನೀರಿನಲ್ಲಿ ಸೇರಿ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿಯ ನೀರನ್ನು ಕೆಲಗಂಟೆಗಳಕಾಲ ಬಳಸದಂತೆ ಹಾಗೂ ನೆಕ್ಕಿಲಾಡಿ ಡ್ಯಾಮ್ ನೀರನ್ನು ಸದ್ಯಕ್ಕೆ ಕುಡಿಯಲು ಉಪಯೋಗಿಸಿದಂತೆ ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್ ಹಾಗೂ ಪುತ್ತೂರು ಮುನ್ಸಿಪಾಲಿಟಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ ಪುತ್ತೂರು ಮತ್ತು ಮಂಗಳೂರಿನಿಂದ ಅಗ್ನಿಶಾಮಕ ದಳವು ಅಗಮಿಸಿ ತೆರವು ಕಾರ್ಯದಲ್ಲಿ ತೊಡಗಿದೆ.

Comments are closed.