ಕರಾವಳಿ

ಮಂಗಳೂರಿನ ವಸುಂಧರಾ ಕಾಮತ್‌ಗೆ NALSAR ಕಾನೂನು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ ಪ್ರದಾನ

Pinterest LinkedIn Tumblr

Vasundar-Kamat-Phd_1

ಮಂಗಳೂರು : ಮಂಗಳೂರಿನ ವಸುಂಧರಾ ಕಾಮತ್ ಎಸ್. ಅವರಿಗೆ ಹೈದರಾಬಾದ್‌ನ ಪ್ರತಿಷ್ಠಿತ `ನಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಿದೆ.

ಪ್ರೊಫೆಸರ್ ಡಾ| ವಿವೇಕಾನಂದನ್ ವಿ.ಸಿ. ಅವರ ಮಾರ್ಗದರ್ಶನದಲ್ಲಿ ತಯಾರಿಸಲಾದ ಅವರ ಪ್ರಬಂಧ `ಕಾಪಿರೈಟ್ ಇನ್ ದ ಇಂಟರ್‌ನೆಟ್ – ವಿದ್ ಸ್ಪೆಷಲ್ ರೆಫರೆನ್ಸ್ ಟು ದ ಲೀಗಲ್ ಇಶ್ಯೂಸ್ ರಿಲೇಟಿಂಗ್ ಟು ಆನ್‌ಲೈನ್ ಫೈಲ್ ಶೇರಿಂಗ್’ ಕ್ಕೆ ಪದವಿ ಪ್ರದಾನ ಮಾಡಲಾಯಿತು.

Vasundar-Kamat-Phd_2 Vasundar-Kamat-Phd_3 Vasundar-Kamat-Phd_4 Vasundar-Kamat-Phd_5

ಪದವಿಯನ್ನು ವಿಶ್ವವಿದ್ಯಾಲಯದ ಚಾನ್ಸಿಲರ್, ಗೌರವಾನ್ವಿತ ಜಸ್ಟೀಸ್ ರಮೇಶ್ ರಂಗನಾಥನ್, ಮುಖ್ಯ ನ್ಯಾಯಮೂರ್ತಿ ಹೈದರಾಬಾದ್ ಹೈಕೋರ್ಟ್ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಅವರ ಹಸ್ತಾಂತರಿಸಿದರು. ಮುಖ್ಯ ಅತಿಥಿ, ಗೌರವಾನ್ವಿತ ಜಸ್ಟೀಸ್ ಟಿ. ಎಸ್. ಠಾಕೂರ್, ಶ್ರೇಷ್ಠ ನ್ಯಾಯಮೂರ್ತಿ ಸರ್ವೋಚ್ಚ ನ್ಯಾಯಾಲಯ ಮತ್ತು ಪ್ರೊ. ಫೈಝಾನ್ ಮುಸ್ತಾಫ, ಉಪಕುಲಪತಿ ಇವರುಗಳ ಘನ ಉಪಸ್ಥಿತಿಯಲ್ಲಿ ಶನಿವಾರ 6 ಆಗಸ್ಟ್ 2016 ರಂದು ನಡೆದ 14ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ನಡೆಯಿತು.

ವಸುಂಧರಾ ಕಾಮತ್ ನಗರದ ಸಂತ ಆಗ್ನೆಸ್ ಸಂಸ್ಥೆಗಳು, ಸಂತ ಅಲೋಶಿಯಸ್ ಕಾಲೇಜು ಮತ್ತು ಎಸ್.ಡಿ.ಎಂ. ಕಾನೂನು ಕಾಲೇಜು, ಇದರ ಹಳೆವಿದ್ಯಾರ್ಥಿ. ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ತನ್ನ ಬಿ.ಎ.ಎಲ್.ಎಲ್.ಬಿ. ಕೋರ್ಸ್ ಮಾಡಿದರು.

ಅವರು `ನಲ್ಸಾರ್’ ಕಾನೂನು ವಿಶ್ವವಿದ್ಯಾಲಯ, ಹೈದರಾಬಾದ್‌ನಲ್ಲಿ ತನ್ನ ಎಲ್.ಎಲ್.ಎಮ್. ಮಾಡಿದರು ಮತ್ತು ತರುವಾಯ ಮ್ಯಾಟ್ಸ್ ವಿಶ್ವವಿದ್ಯಾಲಯ, ರಾಯ್ಪುರ್, ಛತ್ತೀಸ್‌ಘಢ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದಾರೆ.

Comments are closed.