ಹುಟ್ಟು ಸಾವು ಎರಡರ ನಡುವೆ ಮೂರು ದಿನದ ಬಾಳು ಎಂದು ಹೇಳುತ್ತೆ ಸುಭಾಷಿತ. ಹುಟ್ಟುವ ಮುನ್ನ ಏನಾಗಿದ್ದೆವು, ಸಾವಿನ ನಂತರ ಎಲ್ಲಿಗೆ ಹೋಗುವೆವು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ, ಏಕೆಂದರೆ ಸಾವಿನ ಬಳಿಕ ಈ ಭೂಮಿಗೆ ಹಿಂದಿರುಗಿದವರು ಯಾರೂ ಇಲ್ಲ.
ಸಾವಿನ ನಂತರ ಜೀವನದ ಬಗ್ಗೆ ಯಾವುದೇ ಮಾಹಿತಿಯು ಇಂದಿಗೂ ರಹಸ್ಯವಾಗಿ ಉಳಿದಿದೆ. ಸತ್ತ ನಂತರ ಮತ್ತೆ ಬದುಕಿ ಬಂದವರು, ಸತ್ತಿದ್ದಾರೆ ಎಂದು ವೈದ್ಯರು ಹೇಳಿದ ನಂತರ ಪವಾಡ ಸದೃಶ್ಯವಾಗಿ ಮತ್ತೆ ಕಣ್ಣು ಬಿಟ್ಟವರು ಹೇಳುವ ಮಾತುಗಳು ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ.
ಇದೊಂದು ಸೂಕ್ಷ್ಮವಾದ ವಿಚಾರವಾಗಿದ್ದು, ಇದಕ್ಕೆ ಮಾನವರು ಚಿಂತಿಸಲು ಆರಂಭಿಸಿದ ಕಾಲದಿಂದಲೂ ಉತ್ತರವನ್ನು ಹುಡುಕುತ್ತಲೆ ಇದ್ದಾರೆ. ಸವಾಲಾಗಿರುವ ಈ ಭೂತ, ಪ್ರೇತಗಳ ನಿಗೂಢ ರಹಸ್ಯ
ಒಂದು ಜನಪ್ರಿಯ ನಂಬಿಕೆಯಂತೆ ಒಳ್ಳೆಯ ಕೆಲಸಗಳನ್ನು ಮಾಡಿದವರು ಸ್ವರ್ಗಕ್ಕೆ ಹೋಗುತ್ತಾರೆ. ಕೆಟ್ಟ ಕೆಲಸವನ್ನು ಮಾಡಿದವರು ನರಕಕ್ಕೆ ಹೋಗುತ್ತಾರಂತೆ. ಆದರೆ ಅದು ಸತ್ಯ ಎನ್ನುವ ಸಾಕ್ಷ್ಯಗಳು ಯಾರಿಗೂ ಸಿಕಿಲ್ಲವಲ್ಲವೇ?
ಸಾಯುವ ಕೊನೆ ಘಳಿಗೆಯು ವ್ಯಕ್ತಿಯ ಅತ್ಯಂತ ಕೆಟ್ಟ ಘಳಿಗೆಯಾಗಿರುತ್ತದೆ. ಅದೇ ಸಮಯಕ್ಕೆ ವ್ಯಕ್ತಿಯು ತಾನು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನೆಲ್ಲವನ್ನು ವಿಡಿಯೋದಂತೆ ನೋಡುತ್ತಾನೆಯಂತೆ, ಅದೂ ಕೂಡ ಕಣ್ಣು ಮುಚ್ಚುವ ಮೊದಲು..!
ಸತ್ತು ಮತ್ತೆ ಬದುಕಿದವರು ಹೇಳುವ ಮಾತು ತಾವು ಒಂದು ಬೆಳಕಿನ ಕಿರಣವನ್ನು ನೋಡಿದೆವು ಎಂದು. ಈ ಬೆಳಕಿನ ಕಿರಣವು ಪ್ರೀತಿ ಮತ್ತು ಶಾಂತಿಯ ಪ್ರಜ್ಞೆಯನ್ನು ಸೂಚಿಸುತ್ತದೆಯಂತೆ. ಇದು ಹೊಸ ಜೀವನಕ್ಕೆ ಮನುಷ್ಯನನ್ನು ಸಿದ್ಧಗೊಳಿಸುತ್ತದೆಯಂತೆ.
ಸತ್ತು ಬದುಕಿದವರು ಹೇಳುವ ಮಾತು. ನಾವು ಸತ್ತ ಮೇಲೆ ನಮ್ಮ ನಿರ್ಜೀವ ದೇಹವನ್ನು ನೋಡಬಹುದಂತೆ. ಸತ್ತ ಮೇಲೂ ಸಹ ಜೀವವಿಲ್ಲದ ನಮ್ಮ ದೇಹವನ್ನು ನೋಡುವ ಅವಕಾಶ ನಮಗೆ ಸಿಕ್ಕುತ್ತದೆ ಎಂಬುದು ಒಂದು ವಾದ.
ಸತ್ತು ಬದುಕಿದವರು ಹೇಳುವ ಇನ್ನೊಂದು ಮಾತು. ಸತ್ತ ಮೇಲೆ ನಮ್ಮ ಸತ್ತ ಬಂಧುಗಳು ನಮಗೆ ಕಾಣುತ್ತಾರಂತೆ. ಅದರಲ್ಲೂ ನಾವು ಯಾರ ಜೊತೆಗೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತೇವೆಯೋ, ಅವರು ನಮಗೆ ಕಾಣುತ್ತಾರಂತೆ.
ಸತ್ತು ಬದುಕಿದವರು ತಾವು ಸತ್ತಾಗ ಜನ ಅಳುವುದನ್ನು ಮತ್ತು ಅವರು ಅವರ ಬಗ್ಗೆ ಮಾತನಾಡಿಕೊಳ್ಳುವುದನ್ನು ಕೇಳಿದೆವು ಎಂದು ಹೇಳಿದ್ದಾರೆ. ಸತ್ತ ಮೇಲೆ ಹತ್ತಿರದವರು ಅಳುವುದನ್ನು, ತಮ್ಮ ಬಗ್ಗೆ ಮಾತನಾಡುವುದನ್ನು ನಾವು ಸಹ ಸತ್ತ ಮೇಲೆ ಕೇಳಬಹುದಂತೆ. ಏಕೆಂದರೆ ದೇಹ ಸತ್ತರು ಆತ್ಮ ಬದುಕಿರುತ್ತದೆಯಂತೆ.
ಸತ್ತು ಬದುಕಿದವರು ಹೇಳುವ ಮಾತು, ತಾವು ಸತ್ತ ಮೇಲೆ ಪ್ರಶಾಂತತೆಯನ್ನು ಅನುಭವಿಸಿದೆವು ಎಂದು ಹೇಳಿದ್ದಾರೆ. ಬದುಕಿರುವವರು ಇಂತಹ ಪ್ರಶಾಂತತೆಯನ್ನು ಅನುಭವಿಸುವ ಸಾಧ್ಯತೆ ಇಲ್ಲ ಎಂದು ಅವರು ಹೇಳುತ್ತಾರೆ. ಸತ್ತಾಗ ಪ್ರಶಾಂತತೆಯ ಜೊತೆಗೆ ಧನಾತ್ಮಕತೆಯು ಸಹ ಇವರ ಸುತ್ತ ಆವರಿಸುತ್ತದೆಯಂತೆ.
ಸತ್ತ ಮೇಲೆ ತಾವು ದೇವತೆಗಳನ್ನು ನೋಡಿದೆವು ಅವರ ಜೊತೆಗೆ ಮಾತನಾಡಿದೆವು ಎಂದು ಸತ್ತು ಬದುಕಿದವರು ಹೇಳುತ್ತಾರೆ. ಸತ್ತ ನೋವನ್ನು ಮರೆಯಲು ಅವರು ತಮಗೆ ಸಹಾಯ ಮಾಡಿದರು ಎಂದು ಹೇಳಿದ್ದಾರೆ. ಕೇಳಲು ಚೆನ್ನಾಗಿದೆಯಲ್ಲವೇ?
Comments are closed.