ಕರಾವಳಿ

ನಾಗರಪಂಚಮಿ ಪ್ರಯುಕ್ತ 3 ಸಾವಿರ ಲೀಟರ್ ಹಾಲಿನಿಂದ ಕ್ಷೀರಾಭಿಷೇಕ

Pinterest LinkedIn Tumblr

ngara

ಯಲಹಂಕ: ನಾಗರಪಂಚಮಿ ಪ್ರಯುಕ್ತ ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ವಿದ್ಯಾರಣ್ಯಪುರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಂಬಾಭವಾನಿ ದೇವಾಲಯದಲ್ಲಿ ಮುಂಜಾನೆ 5 ಗಂಟೆಯಿಂದಲೇ 3 ಸಾವಿರ ಲೀಟರ್ ಕ್ಷೀರಾಭಿಷೇಕ ನೆರವೇರಿಸಲಾಯಿತು.

ಪ್ರಧಾನ ಅರ್ಚಕ ಕುಮಾರ್ ನೇತೃತ್ವದಲ್ಲಿ 3 ಸಾವಿರ ಲೀಟರ್ ಕ್ಷೀರಾಭಿಷೇಕ ಹಾಗೂ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ನಾಗರಪಂಚಮಿ ಪ್ರಯುಕ್ತ 3 ಸಾವಿರ ಲೀಟರ್ ಕ್ಷೀರಾಭಿಷೇಕಶ್ರೀ ಅಂಬಾಭವಾನಿ ಹಾಗೂ ಇತರೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಮಾರು 15ಸಾವಿರಕ್ಕೂ ಹೆಚ್ಚು ಮಂದಿ ಕ್ಷೀರಾಭಿಷೇಕದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಅಭಿಷೇಕದ ಹಾಲನ್ನು ವ್ಯರ್ಥ ಮಾಡದೆ ನೆರೆದಿದ್ದ ಭಕ್ತರಿಗೆ ವಿತರಿಸಿ, ಉಳಿದ ಹಾಲನ್ನು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಕಳುಹಿಸಿ ಕೊಡಲಾಯಿತು.

ಮಧ್ಯಾಹ್ನ ಅನ್ನಸಂತಪರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವರಿಗೆ ವಿಶೇಷ ಅಲಂಕಾರ ಹಾಗೂ ಗೀತಗಾಯನ, ಪ್ರವಚನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Comments are closed.