ಕರಾವಳಿ

ಹವಾಮಾನ ವೈಪರೀತ್ಯ : ಇನ್ನೂ ಹಜ್ ತಲುಪದ ಮಂಗಳೂರು ಯಾತ್ರಿಗಳ ವಿಮಾನ

Pinterest LinkedIn Tumblr

Hajj_Piligrms_Lasike

ಮಂಗಳೂರು, ಆ.4: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರಿಗಳನ್ನು ಹೊತ್ತೊಯ್ದ ಏರ್ ಇಂಡಿಯಾವು ಹವಾಮಾನ ವೈಪರೀತ್ಯದಿಂದ ಮದೀನಾ ತಲುಪಲು ಇನ್ನೂ ಕೆಲವು ತಾಸುಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೆಳಗ್ಗೆ 11:05ಕ್ಕೆ ಬಜ್ಪೆಯಿಂದ ಹೊರಟ ವಿಮಾನವು ಭಾರತೀಯ ಕಾಲಮಾನ ಸುಮಾರು 3 ಗಂಟೆ ಹೊತ್ತಿಗೆ ಶಾರ್ಜಾ ತಲುಪಿದೆ. ಅಲ್ಲಿ ಇಂಧನವನ್ನು ತುಂಬಿಸಿ ಮತ್ತೆ ಮದೀನಾದ ಕಡೆಗೆ ಹಾರಾಟವಾಗಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಭಾರತೀಯ ಕಾಲಮಾನ 8:30ಕ್ಕೆ ಶಾರ್ಜಾದಿಂದ ನಿರ್ಗಮಿಸಿದ್ದು, ಭಾರತೀಯ ಕಾಲಮಾನ ಸುಮಾರು 10:30ಕ್ಕೆ ಮದೀನಾ ತಲುಪುವ ಸಾಧ್ಯತೆ ಎಂದು ರಾಜ್ಯ ಹಜ್ ಸಮಿತಿಯ ಕೋ ಆರ್ಡಿನೇಟರ್ ಕೆ.ಎಂ.ಬಾಷಾ ತಿಳಿಸಿದ್ದಾರೆ.

ಕೃಪೆ : ವಾಭಾ

Comments are closed.