___ಲಾಸ್ ಎಂಜಲೀಸ್ ಆ.4 : ಅಮೆರಿಕದ ಖ್ಯಾತ ವಾಹಿನಿಯೊಂದು ನಡೆಸಿಕೊಡುವ ರಿಯಾಲಿಟಿ ಶೋನಲ್ಲಿ ಅವಘಡವೊಂದು ಸಂಭವಿಸಿದ್ದು, ಕ್ಯಾಮೆರಾ ಮುಂದೆ ಸ್ಟಂಟ್ ಮಾಡುವಾಗ ಯುವತಿಯೊಬ್ಬಳು ಪ್ರಿಯತಮನ ಪ್ರಾಣಕ್ಕೆ ಕುತ್ತು ತಂದ ಘಟನೆ ಸಂಭವಿಸಿದೆ.
ಅಮೆರಿಕದ ಖ್ಯಾತ ಮನರಂಜನಾ ವಾಹಿನ ಎನ್ ಬಿಸಿ ನಡೆಸಿಕೊಡುವ ಅಮೆರಿಕಾಸ್ ಗಾಟ್ ಟ್ಯಾಲೆಂಟ್ ಶೋ ಎಂಬ ರಿಯಾಲಿಟಿ ಶೋನಲ್ಲಿ ಈ ಘಟನೆ ಸಂಭವಿಸಿದ್ದು, ವಿವಿಧ ಕೌಶಲ್ಯ ಹೊಂದಿದ್ದ ಒಂದು ಜೋಡಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು. ಈ ಪೈಕಿ ಪ್ರಿಯತಮ ರ್ಯಾನ್ ಸ್ಟಾಕ್ ತನ್ನ ಗಂಟಲಿನಲ್ಲಿ ಕತ್ತಿ ಇಡುವ ಕೌಶಲ್ಯದಲ್ಲಿ ನಿಪುಣನಾಗಿದ್ದರೆ, ಆತನೊಂದಿಗಿದ್ದ ಯುವತಿ ಅಂಬರ್ಲಿನ್ ವಾಕರ್ ತಾನು ಆರ್ಚರಿಯಲ್ಲಿ ನಿಪುಣೆ ಎಂದು ಹೇಳಿಕೊಂಡಿದ್ದಳು.
ಹೀಗಾಗಿ ಇವರ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಿಯತಮ ರ್ಯಾನ್ ಸ್ಟಾಕ್ ಗುರಿ ಚಿತ್ರವಿರುವ ಕಬ್ಬಿಣದ ಸಲಾಕೆಯನ್ನು ತನ್ನ ಗಂಟಲಿನಲ್ಲಿ ಇಳಿಸಿ, ತನ್ನ ಪ್ರಿಯತಮೆಗದೆ ಗುರಿ ತೋರಿಸಿ ಬಾಣ ಬಿಡುವಂತೆ ಆದೇಶಿಸಿದ. ಈ ವೇಳೆ ಬಿಲ್ಲನ್ನು ತೆಗೆದುಕೊಂಡ ಪ್ರಿಯತಮೆ ತನ್ನ ನಿಖರ ಗುರಿ ಬೇದಿಸುವ ಕಲೆಯನ್ನು ವೀಕ್ಷಕರಿಗೆ ಪ್ರದರ್ಶನ ಮಾಡುವ ಹುಮ್ಮಸ್ಸಿನಲ್ಲಿ ಆಕೆ ಬಿಟ್ಟ ಬಾಣ ಗುರಿ ತಪ್ಪಿ ಆತನ ಎದೆಗೆ ಬಡಿದಿದೆ. ಇನ್ನೂ ಅಚ್ಚರಿ ಎಂದರೆ ಬಾಣಕ್ಕೆ ಬೆಂಕಿಯ ಸ್ಪರ್ಶ ನೀಡಲಾಗಿತ್ತು. ಹೀಗಾಗಿ ಅಪಾಯದ ಪ್ರಮಾಣ ಹೆಚ್ಚಾಗಿತ್ತು.
ಆದರೆ ಅದೃಷ್ಟವಶಾತ್ ಬಾಣದ ತುದಿ ಮೊನಚಾಗಿರಲಿಲ್ಲ. ಅಲ್ಲದೆ ಬಾಣಕ್ಕೆ ಬೆಂಕಿಯ ಸ್ಪರ್ಶ ನೀಡುವ ಉದ್ದೇಶದಿಂದ ಅದಕ್ಕೆ ಬಟ್ಟೆ ಸುತ್ತಲಾಗಿತ್ತು. ಹೀಗಾಗಿ ಯುವತಿ ಬಿಟ್ಟ ಬಾಣ ಆತನ ಭುಜಕ್ಕೆ ತಾಗಿ ಕೆಳಕ್ಕೆ ಬಿದ್ದಿದೆ. ಹೀಗಾಗಿ ಪ್ರಿಯತಮ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಇವಿಷ್ಟೂ ಘಟನೆಗೆ ಸಾಕ್ಷಿಯಾಗಿದ್ದ ಜಡ್ಜ್ ಗಳು ನಿಜಕ್ಕೂ ಅಲ್ಲೇನಾಗುತ್ತಿದೆ ಎಂಬುದರ ಪರಿವೇ ಇಲ್ಲದೆ ಕೆಲ ಕ್ಷಣ ಅವಕ್ಕಾಗಿ ಬಿಟ್ಟರು. ಅಂತಿಮವಾಗಿ ನಿರೂಪಕಿ ರ್ಯಾನ್ ಸ್ಟಾಕ್ ಬಳಿ ವಿಚಾರಿಸಿದಾಗ ಆತನ ತನಗೇನೂ ಆಗಿಲ್ಲ ಎಂದು ಹೇಳಿದ.
Comments are closed.