ಮಂಗಳೂರು: ಮೊಬೈಲ್ ಫೋನ್, ಟ್ಯಾಬ್ಲೆಟ್ ಇತ್ಯಾದಿ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಮಿತಿಮೀರಿ ಬಳಸುವವರು ಬಹಳ ಬೇಗನೆ ಮುಪ್ಪಾದವರಂತೆ ಕಾಣುತ್ತಾರೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಹೆಚ್ಚು ಬಳಸುವುದರಿಂದ ಚರ್ಮ ಸುಕ್ಕುಗಟ್ಟುವುದು, ಗಲ್ಲದ ಕೆಳಗೆ ಜೋತು ಬಿದ್ದಂತೆ ಕಾಣುವುದು, ಗಂಟಲಿನ ಮೇಲೆ ಚರ್ಮ ಉಬ್ಬಿ ಬರುವುದು ಇತ್ಯಾದಿಯಾಗಿ ಮುಖದ ಕಳೆ ಹೊರಟು ಹೋಗುತ್ತದೆ. ಕಣ್ಣಿನ ಸುತ್ತ ನೆರಿಗೆ, ಕಪ್ಪು ಕಲೆ, ಕುತ್ತಿಗೆ ಸುತ್ತಮುತ್ತ ಕೊಬ್ಬು ತುಂಬುವುದು ಇತ್ಯಾದಿ ಸಮಸ್ಯೆಗಳುಂಟಾಗುತ್ತದೆ.
ಸ್ಮಾರ್ಟ್ ಫೋನ್, ಟ್ಯಾಬ್, ಕಂಪ್ಯೂಟರ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳನ್ನು ಕುತ್ತಿಗೆ ಬಗ್ಗಿಸಿ ತುಂಬಾ ಹೊತ್ತುಗಳವರೆಗೆ ಬಳಸುವುದರಿಂದ ನೆರಿಗೆಗಳುಂಟಾಗುತ್ತದೆ. ಮೊಬೈಲ್ ಫೋನ್ ನಲ್ಲಿ ಕುತ್ತಿಗೆ ಬಗ್ಗಿಸಿಕೊಂಡು ಸಂದೇಶ ಕಳುಹಿಸುವುದು,ಮಾತನಾಡುತ್ತಿರುವುದರಿಂದ ಕುತ್ತಿಗೆ, ತೋಳು ಮತ್ತು ಬೆನ್ನ ಹಿಂದೆ ನೋವು ಉಂಟಾಗುತ್ತದೆ, ಅಲ್ಲದೆ ತಲೆನೋವು, ಮರಗಟ್ಟುವಿಕೆ, ಕೈಗಳು, ಭುಜದ, ಮೊಣಕೈಯನ್ನು ಮತ್ತು ಮಣಿಕಟ್ಟುಗಳನ್ನು ಮೇಲಿನ ಶಾಖೆಯು ಮತ್ತು ನೋವು ಜುಮ್ಮೆನಿಸುವಿಕೆ, ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ ಕುತ್ತಿಗೆಯ ಸ್ನಾಯುಗಳು ಶಕ್ತಿಹೀನವಾಗುವುದು ಇತ್ಯಾದಿ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.
ಅಂತರ್ಜಾಲ ಮತ್ತು ಭಾರತ ಮೊಬೈಲ್ ಒಕ್ಕೂಟ(ಐಎಎಂಎಐ)ಯ ವರದಿಯಲ್ಲಿ ಬಹಿರಂಗಗೊಂಡ ವಿಷಯವೆಂದರೆ, ಜೂನ್ 2016ಕ್ಕೆ ನಮ್ಮ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆದಾರರ ಸಂಖ್ಯೆ 371 ದಶಲಕ್ಷ ತಲುಪಿದೆ. ಅವರಲ್ಲಿ ಶೇಕಡಾ 40ರಷ್ಟು 19ರಿಂದ 30 ವರ್ಷ ವಯಸ್ಸಿನ ಯುವಜನರು ಇಂಟರ್ನೆಟ್, ಮೊಬೈಲ್ ಬಳಕೆದಾರರಾಗಿದ್ದಾರೆ.
ಜನರು ಎಲ್ಲಿಯವರೆಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಋಣಾತ್ಮಕ ಅಂಶಗಳ ಬಗ್ಗೆ ಜನರಿಗೆ ಅರಿವಿಗೆ ಬರುವುದಿಲ್ಲವೋ ಅಲ್ಲಿ ತನಕ ಸಮಸ್ಯೆ ಇರುತ್ತದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಅತಿಯಾಗಿ ಬಳಸುವುದನ್ನು ತಪ್ಪಿಸಬೇಕು.
Comments are closed.