*ಯೋಗೀಶ್ ಕುಂಭಾಸಿ
ಕುಂದಾಪುರ: ಅಕ್ರಮವಾಗಿ ದನದ ಮಾಂಸವನ್ನು ಪ್ಯಾಕೇಟುಗಳಲ್ಲಿ ತುಂಬಿಸಿ ಮನೆಗಳಿಗೆ ಕೆ.ಜಿ. ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೋಟ ಹಾಗೂ ತೆಕ್ಕಟ್ಟೆ ಭಾಗದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರ ವಶಕ್ಕೆ ನೀಡಿದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನುಕೆರೆ ಎಂಬಲ್ಲಿ ಶನಿವಾರ ನಡೆದಿದೆ.
ಕುಂದಾಪುರದ ಮೂಡುಗೋಪಾಡಿ ನಿವಾಸಿ ಅಬುಬೂಕರ್ ಬಂಧಿತ ಆರೋಪಿ.
ಘಟನೆ ವಿವರ: ಮೂಲತಃ ಗೋಪಾಡಿಯವನಾದ ಅಬುಬೂಕರ್ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಭಾಗದಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಮನೆಗೆ ದನದ ಮಾಂಸವನ್ನು ಪ್ಯಾಕೇಟುಗಳಲ್ಲಿ ಕಿಲೋ ತೂಕದಲ್ಲಿ ತುಂಬಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ. ಈತ ಅಕ್ರಮವಾಗಿ ಮಾಂಸವನ್ನು ಮಾರಾಟ ಮಾಡಲು ತೊಡಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳಿಯ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದು ಮಾತ್ರವಲ್ಲದೇ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿ ಅಬುಬೂಕರ್ ಎಂಬಾತನಿಂದ 11 ಕೆ.ಜಿ. ದನದ ಮಾಂಸ ವಶಕ್ಕೆ ಪಡೆಯಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.