ಕರಾವಳಿ

ರಾಜ್ಯ ಹಜ್ಜ್‌ಸಮಿತಿಯ ವತಿಯಿಂದ ಹಜ್ಜ್ ಯಾತ್ರಾರ್ಥಿಗಳಿಗೆ ಚುಚ್ಚು ಮದ್ದು

Pinterest LinkedIn Tumblr

Hajj_Piligrms_Lasike

ಮಂಗಳೂರು : ಈ ವರ್ಷ ಪವಿತ್ರ ಹಜ್ಜ್‌ಯಾತ್ರೆ ಕೈಗೊಳ್ಳುವ ಹಜ್ಜ್ ಯಾತ್ರಾರ್ಥಿಗಳಿಗೆ ಚುಚ್ಚು ಮದ್ದು (ವ್ಯಾಕ್ಸಿನ್) ಹಾಗೂ ಪೋಲಿಯೊ ನೀಡುವಕಾರ್ಯಕ್ರಮವು ಜು. 19ರಂದು ಮಂಗಳವಾರ ಬೆಳಿಗ್ಗೆ ಗಂಟೆ 9.30ರಿಂದ ಸಂಜೆ ಗಂಟೆ 4.00ರ ತನಕ ಮಂಗಳೂರಿನ ಕೊಡಿಯಲ್ ಬೈಲ್‌ನಲ್ಲಿರುವ ಯೇನಪೊಯ‌ ಆಸ್ಪತ್ರೆಯಲ್ಲಿ ನಡೆಯಲಿದೆ.

ಈ ಒಂದು ಶಿಬಿರದಲ್ಲಿ ಎಲ್ಲಾ ಹಜ್ಜ್ ಯಾತ್ರಾರ್ಥಿಗಳು ಚುಚ್ಚು ಮದ್ದು ಹಾಗೂ ಲಸಿಕೆಯನ್ನು ಹಾಕಿಸಿಕೊಳ್ಳಲು ಕರ್ನಾಟಕ ರಾಜ್ಯ ಹಜ್ಜ್ ಸಮಿತಿಯಯವರು ಸೂಚಿಸಿರುತ್ತಾರೆ ಎಂದು ಮಂಗಳೂರು ಹಜ್ಜ್ ನಿರ್ವಾಹಣಾ ಸಮಿತಿಯ‌ ಅಧ್ಯಕ್ಷರಾದ ಯೇನಪೊಯ ಮೊಹಮ್ಮದ್‌ ಕುಂಞಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.