ಮಂಗಳೂರು,ಜು.16: ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಮಟ್ಟದ ಪ್ರತಿನಿಧಿಗಳ ಸಮಾವೇಶ ಇಂದು ನಗರದ ಪುರಭವನದಲ್ಲಿ ನಡೆಯಿತು.ಸಮಾವೇಶವನ್ನು ಹಿರಿಯ ಕಾಂಗ್ರೆಸ್ ನಾಯಕ, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಉದ್ಘಾಟಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಶಾಂತರಾಮ ನಾಯ್ಕ, ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಯು.ಟಿ.ಖಾದರ್, ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಶ್ರೀಮತಿ ಬ್ಲೋಸಂ ಫೆರ್ನಾಂಡಿಸ್ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೆ ಹುಟ್ಟುಹಬ್ಬದ ಸಂಭ್ರಮ ‘ಅಂಬೇಡ್ಕರ್ ಜಯಂತ್ಯುತ್ಸವ’ವನ್ನು ಆಚರಿಸಲಾಯಿತು.ಜೊತೆಗೆ ಬದಲಾವಣೆಯ ಹರಿಕಾರ ಬ್ಲೇಸಿಯಸ್ ಎಂ.ಡಿಸೋಜರ ‘ನೆನಪು ನಮನ’ ಕಾರ್ಯಕ್ರಮ, ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಗಳ ಪಕ್ಷಿನೋಟ, ನೆಹರು-ಅಂಬೇಡ್ಕರ್ ಅವರ ಅಧ್ಯಯನ ಕಮ್ಮಟದ ಚಾಲನೆ ಮುಂತಾದ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಅಭಯಚಂದ್ರ ಜೈನ್ ಶಕುಂತಲಾ ಶೆಟ್ಟಿ, ಮನಪಾ ಮೇಯರ್ ಹರಿನಾಥ್, ಪಕ್ಷದ ಪ್ರಮುಖರಾದ ಸುರೇಶ್ ಬಳ್ಳಾಲ್, ಮಹಮ್ಮದ್ ಮಸೂದ್, ಗಫೂರ್, ಮಂಜುನಾಥ ಭಂಡಾರಿ, ಶಶಿಧರ ಹೆಗ್ಡೆ, ಪದ್ಮನಾಭ ನರಿಂಗಾನ, ಶಾಹುಲ್ ಹಮೀದ್, ನವೀನ್ ಡಿಸೋಜ, ಆಶಾ ಡಿಸಿಲ್ವಾ, ಲ್ಯಾನ್ಸ್ಲೋಟ್ ಪಿಂಟೊ, ಸಫಿ ಅಹ್ಮದ್, ಉಮೇಶ್ ದೇವಾಡಿಗ, ವಿಶ್ವಾಸ್ ಕುಮಾರ್ ದಾಸ್, ಬಾಲಕೃಷ್ಣ ಶೆಟ್ಟಿ, ಟಿ.ಕೆ.ಸುಧೀರ್, ಜೆಸಿಂತಾ ಆಲ್ಪ್ರೆಡ್, ಸದಾಶಿವ ಅಮೀನ್, ನಝೀರ್ ಬಜಾಲ್ ಸೇರಿದಂತೆ ರಾಜ್ಯದ ಹಾಗೂ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಹಿರಿಯ ಮುಖಂಡರು ಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
Comments are closed.