ಕರಾವಳಿ

ಕೋಟ(ತೆಕ್ಕಟ್ಟೆ): 7 ಅಂಗಡಿಗೆ ಕನ್ನ; 2 ಕೆ.ಜಿ ಬೆಳ್ಳಿ, ನಗದು ಕಳವು; 6 ಜನರ ತಂಡದ ಕೃತ್ಯ

Pinterest LinkedIn Tumblr

*ಯೋಗೀಶ್ ಕುಂಭಾಸಿ
ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲೇ ಇರುವ ನಾಲ್ಕು ಕಾಂಪ್ಲೆಕ್ಸ್‌ಗಳಲ್ಲಿನ ಒಟ್ಟು 7 ಅಂಗಡಿಗಳ ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಕಳವುಗೈದು ಪರಾರಿಯಾದ ಘಟನೆ ತೆಕ್ಕಟ್ಟೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು ಶನಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ.

ಒಂದು ಚಿನ್ನದಂಗಡಿ, ಎರಡು ಹಾರ್ಡವೇರ್ ಅಂಗಡಿ, ಒಂದು ಮೆಡಿಕಲ್ ಶಾಪ್, ಎರಡು ಇಲೆಕ್ಟ್ರಿಕಲ್ ಅಂಗಡಿಗಳು, ಕಾಂಡೆಮೆಂಟ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ಈ ಪೈಕಿ ಇಲೆಕ್ಟ್ರಿಕಲ್ ಅಂಗಡಿಗಳಲ್ಲಿ ಯಾವುದೇ ನಗದು ಹಾಗೂ ಪರಿಕರ ಕಳವಾಗಿಲ್ಲ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಒಂದು ಲಕ್ಷಕ್ಕೂ ಅಧಿಕ ಎನ್ನಲಾಗಿದೆ.

Tekkatte_Serial_Teft (26) Tekkatte_Serial_Teft (23) Tekkatte_Serial_Teft (14) Tekkatte_Serial_Teft (18) Tekkatte_Serial_Teft (11) Tekkatte_Serial_Teft (10) Tekkatte_Serial_Teft (15) Tekkatte_Serial_Teft (20) Tekkatte_Serial_Teft (25) Tekkatte_Serial_Teft (28) Tekkatte_Serial_Teft (29)  Tekkatte_Serial_Teft (34) Tekkatte_Serial_Teft (33) Tekkatte_Serial_Teft (31) Tekkatte_Serial_Teft (30) Tekkatte_Serial_Teft (27) Tekkatte_Serial_Teft (22) Tekkatte_Serial_Teft (32)

Tekkatte_Serial_Teft (13)

Tekkatte_Serial_Teft (21) Tekkatte_Serial_Teft (19) Tekkatte_Serial_Teft (16) Tekkatte_Serial_Teft (17) Tekkatte_Serial_Teft (12) Tekkatte_Serial_Teft (7) Tekkatte_Serial_Teft (8) Tekkatte_Serial_Teft (9) Tekkatte_Serial_Teft (3) Tekkatte_Serial_Teft (4) Tekkatte_Serial_Teft (2) Tekkatte_Serial_Teft (6) Tekkatte_Serial_Teft (5)

ತೆಕ್ಕಟ್ಟೆ ಹೆದ್ದಾರಿ ಸನಿಹದಲ್ಲಿನ ಶ್ರೀಧರ ಆಚಾರ್ಯ ಮಾಲೀಕತ್ವದ ಶ್ರೀ ಶಾರದಾ ಜುವೆಲ್ಲರ್ಸ್ ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಚಿನ್ನದಂಗಡಿ ಒಳಗಿದ್ದ 2 ಕೆ.ಜಿ.ಗೂ ಅಧಿಕ ಬೆಳ್ಳಿ ಕಳವು ಮಾಡಿದ್ದಾರೆ. ನಿತ್ಯವೂ ಚಿನ್ನವನ್ನು ಮಾಲೀಕರು ಮನೆಗೆ ಕೊಂಡೊಯ್ಯುತ್ತಿದ್ದ ಕಾರಣ ಚಿನ್ನಾಭರಣ ಕಳವಾಗಿಲ್ಲ. ಚಿನ್ನದಂಗಡಿ ಇರುವ ವಾಣಿಜ್ಯ ಸಂಕೀರ್ಣದಲ್ಲಿಯೇ ಇದ್ದ ಡಾ. ಕುಸುಮಾಕರ್ ಶೆಟ್ಟಿ ಅವರಿಗೆ ಸೇರಿದ ಶ್ರೀ ಕೃಷ್ಣ ಮೆಡಿಕಲ್ಸ್ ಒಳನುಗ್ಗಿದ ಕಳ್ಳರು ಹಣಕ್ಕಾಗಿ ತಡಕಾಡಿದ್ದು ಕ್ಯಾಶಿನಲ್ಲಿದ್ದ 15 ಸಾವಿರಕ್ಕೂ ಅಧಿಕ ನಗದು ಕಳವು ಮಾಡಿದ್ದಾರೆ. ಹೆದ್ದಾರಿಯ ಇನ್ನೊಂದು ಕಡೆಯಲಿದ್ದ ವಾಣಿಜ್ಯ ಸಂಕೀರ್ಣದಲ್ಲಿರುವ ಸನತ್ ಕುಮಾರ್ ಶೆಟ್ಟಿ ಮಾಲೀಕತ್ವದ ಆರ್ಯ ಪೇಂಟ್ಸ್ ಅಂಗಡಿ ಶಟರ್ ಮುರಿದು ನುಗ್ಗಿದ ಕಳ್ಳರು 3000 ನಗದು, ಪಕ್ಕದ ಕಾಂಪ್ಲೆಕ್ಸ್ ನಲ್ಲಿದ್ದ ಮಂಜುನಾಥ ಮೊಗವೀರ ಅವರ ಶ್ರೀ ವಿಜಯಲಕ್ಷ್ಮೀ ಟ್ರೆಡರ್‍ಸ್ ಅಂಗಡಿಯಲ್ಲಿ 3 ಸಾವಿರ ಕದ್ದಿದ್ದಾರೆ. ಇನ್ನು ಶ್ರೀನಾಥ್ ಮಾಲೀಕತ್ವದ ಶ್ರೀ ಶಾರದಾ ಇಲೆಕ್ಟ್ರಿಕಲ್ ಸರ್ವೀಸ್ ಹಾಗೂ ಮೋಹನ್ ಅವರ ಶ್ರೀ ಏಕದಂತ ಆಟೋ ಇಲೆಕ್ಟ್ರಿಕಲ್ಸ್ ಅಂಗಡಿಯ ಶಟರ್ ಮುರಿದಿದ್ದ್ದು ಅವರಿಗೆ ಅಂಗಡಿಯೊಳಗೆ ಯಾವುದೇ ನಗದು ಸಿಕ್ಕಿಲ್ಲದ ಕಾರಣ ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ. ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿದ್ದ ಗಣಪತಿ ಅವರ ಶ್ರೀ ಮಹಾಲಿಂಗೇಶ್ವರ ಕಾಂಡಿಮೆಂಟ್ಸ್ ಅಂಗಡಿ ನುಗ್ಗಿ 1000 ಹಣ ಕದ್ದಿದ್ದಲ್ಲದೇ ಸಿಗರೇಟ್, ತಂಪುಪಾನೀಯ, ಬಿಸ್ಕೇಟ್ ಮೊದಲಾದವುಗಳನ್ನು ಕದ್ದಿದ್ದಾರೆ.

Tekkatte_Serial_Teft (1)

6 ಮಂದಿ ಕಳ್ಳರ ತಂಡ..?
ತೆಕ್ಕಟ್ಟೆಯಲ್ಲಿನ 7 ಅಂಗಡಿಗಳ ಶಟರ್ ಗಳನ್ನು ಹೈಡ್ರಾಲಿಕ್ ಜಾಕ್ ಮೂಲಕ ನಾಜೂಕಾಗಿ ಮೇಲಕ್ಕೆತ್ತಿದ ಕಳ್ಳರು ತಮ್ಮ ಕ್ರತ್ಯವನ್ನು ಸಾಧಿಸಿದ್ದಾರೆ. ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾದ ದ್ರಶ್ಯಾವಳಿಗಳ ಪ್ರಕಾರ 6 ಮಂದಿ ಕಳ್ಳರು ಈ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. 6 ಮಂದಿ ಪೈಕಿ ಓರ್ವ ಹೆದ್ದಾರಿಯಲ್ಲಿ ಬರುವ ವಾಹನಗಳ ಚಲನವಲನ ಗಮನಿಸಿ ಇತರೇ ಐವರಿಗೆ ಮಾಹಿತಿ ನೀಡುವ ಕೆಲಸ ಮಾಡಿದರೇ ಇನ್ನು ಐವರು ಶಟರ್ ಮುರಿದು ಒಳನುಗ್ಗಿ ತಮ್ಮ ಕಾರ್ಯ ಮುಗಿಸಿದ್ದಾರೆ. ನಿಮಿಷಗಳಲ್ಲಿ ಒಂದೊಂದು ಅಂಗಡಿಯ ಕಳ್ಳತನ ಮಾಡಿರುವ ಇವರು 2 ಗಂಟೆಯಿಂದ 2.45ರವಳೆಗೆ ಈ ಕೃತ್ಯ ಮುಗಿಸಿದ್ದಾರೆ ಎನ್ನುವ ಮಾಹಿತಿ ‘ಕನ್ನಡಿಗ ವರ್ಲ್ಡ್’ಗೆ ಸಿಕ್ಕಿದೆ.

ಹೈವೇ ಬದಿಯ ಅಂಗಡಿಗಳೇ ಟಾರ್ಗೇಟ್..?
ಮಳೆಗಾಲವಾದ ಕಾರಣ ಹೆದ್ದಾರಿ ಬದಿಯಲ್ಲಿ ಜನಸಂಚಾರ ಕಮ್ಮಿ. ಹಾಗೂ ಹೆದ್ದಾರಿಯಲ್ಲಿ ವಾಹನಗಳು ಅಷ್ಟಾಗಿ ಓಡಾಟವಿಲ್ಲದ ಸಮಯ ಖಚಿತಪಡಿಸಿಕೊಂಡು ಹೆದ್ದಾರಿ ಪಕ್ಕದ ಅಂಗಡಿಗಳನ್ನೇ ಟಾರ್ಗೇಟ್ ಮಾಡಿದ್ದಾರೆ. ಇನ್ನು ಚಿನ್ನದಂಗಡಿಯಲ್ಲಿ ಕದ್ದ ಕೆಲವು ಹರಳುಗಳು ಹಾಗೂ ಬೆಳ್ಳಿಯ ತುಣುಕುಗಳನ್ನು ತೆಕ್ಕಟ್ಟೆ ಬಸ್ಸು ನಿಲ್ದಾಣ ಹಿಂಭಾಗದ ಖಾಲಿ ಸ್ಥಳದಲ್ಲಿ ಎಸೆದಿದ್ದಾರೆ.

Tekkatte_Serial_Teft (24)

ಕದ್ದಿದ್ದು ಕಮ್ಮಿ…ಹಾಳುಮಾಡಿದ್ದು ಜಾಸ್ಥಿ…
ಚಿನ್ನದಂಗಡಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳಲ್ಲಿ ಕಳ್ಳರಿಗೆ ಸಿಕ್ಕಿದ ನಗದು ಕಡಿಮೆ. ಆದರೇ ಶಟರ್ ಮುರಿದ ಕಾರಣ ಕಳವಾದ ನಷ್ಟಕ್ಕಿಂತ ಅಂಗಡಿ ಮಾಲೀಕರಿಗೆ ಶಟರ್ ಸರಿಪಡಿಸಲು ತಗಲುವ ವೆಚ್ಚ ಜಾಸ್ಥಿಯಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು ತೆಕ್ಕಟ್ಟೆಯಿಂದ ಮಣೂರು ಹಾಗೂ ಕೊಮೆ ಭಾಗದವರೆಗೂ ಕಿಲೋಮೀಟರುಗಟ್ಟಲೇ ತೆರಳಿದೆ. ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಡಿವೈ‌ಎಸ್ಪಿ ಕುಮಾರಸ್ವಾಮೀ, ಬ್ರಹ್ಮಾವರ ವೃತ್ತನಿರೀಕ್ಷಕ ಶ್ರೀಕಾಂತ್, ಕೋಟ ಎಸ್.ಐ. ಕಬ್ಬಾಳರಾಜ್ ಮೊದಲಾದವರು ಭೇಟಿನೀಡಿದ್ದಾರೆ.

Comments are closed.