ಕರಾವಳಿ

ಬಂಟ್ವಾಳದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ : ಎಸ್‌ಪಿ ಅವರಿಂದ ಪರಿಶೀಲನೆ.

Pinterest LinkedIn Tumblr

bntwl_road_vist_1

ಬಂಟ್ವಾಳ,ಜುಲೈ.16 : ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆ, ಕೈಕಂಬ, ಪಾಣೆಮಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಹೇಳಿದ್ದಾರೆ.ಶುಕ್ರವಾರ ಬಿ.ಸಿ.ರೋಡಿಗೆ ಆಗಮಿಸಿದ ಅವರು, ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ಅವ್ಯವಸ್ಥೆ ಕೈಕಂಬದ ವಾಹನದಟ್ಟಣೆ, ಹಾಗೂ ಪಾಣೆಮಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯ ಕುರಿತು ಅವಲೋಕನ ನಡೆಸಿದರು.

bntwl_road_vist_2

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ.ಸಿ.ರೋಡಿನ ಟ್ರಾಫಿಕ್ ಜಾಮ್ ಸಮಸ್ಯೆ ತನ್ನ ಗಮನಕ್ಕೆ ಬಂದಿದೆ, ಈ ಕುರಿತಾಗಿ ಪರಿಶೀಲಿಸಲು ಆಗಮಿಸಿರುವುದಾಗಿ ತಿಳಿಸಿದರು. ತಾತ್ಕಾಲಿಕವಾಗಿ ಹೆಚ್ಚು ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಪುರಸಭೆ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಸಂಚಾರ ವ್ಯವಸ್ಥೆಯ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ಸುಧಾಕರ ಭಟ್, ಬಂಟ್ವಾಳ ವೃತ್ತನಿರೀಕ್ಷಕ ಬಿ.ಕೆ.ಮಂಜಯ್ಯ, ನಗರ ಠಾಣಾಧಿಕಾರಿ ನಂದಕುಮಾರ್ ಮೊದಲಾದವರಿದ್ದರು.

Comments are closed.